ಫೆ:- 1- ರ ಸಂಜೆ- 5 ರ ಸಮಯದಲ್ಲಿ ಪೊಲೀಸ್‍ಠಾಣೆ ಕೂಗೆಳತದಲ್ಲಿ ದರೋಡೆಯಾದ ವರದಿ ಇಡಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು, ಆದರೆ ಈ ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ, ಯಾರೋ ಮೂರು ಜನ ಮಾಸ್ಕ್ ಧರಿಸಿ ಮನೆಗೆ ನುಗ್ಗಿ ನನ್ನ ಮಗಳಿಗೆ ಹಾಗೂ ನನಗೆ ಚಾಕು ತೋರಿಸಿ ಜೀವ ಬೆದರಿಕೆ ಹಾಕಿ 170 ಗ್ರಾಂ ಬಂಗಾರ ಹಾಗೂ 50 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಮನೆಯ ಒಡತಿ ವಿನುತಾ ಹೊನ್ನಾಳಿ ಪೊಳಿಸ್‍ಠಾಣೆಗೆ ದೂರು ದಾಖಲು ಮಾಡಿದ್ದರು, ಆದರೆ ಈ ದರೋಡೆ ಪ್ರಕರಣದಲ್ಲಿ ಸ್ವತಃ ದೂರುದಾರೆ ವಿನುತಾ ಅವರೇ ಮನೆಯ ಎಲ್ಲಾ ಬಂಗಾರ ಹಾಗೂ ನಗದನ್ನು ದೋಚಿ ಜ್ಯೋತಿಷಿಗೆ ಕೊಟ್ಟಿರುವ ಬಗ್ಗೆ ಪೊಲೀಸರ ತನಿಖೆಯಿಂದ ಬಟ್ಟಾ ಬಯಲಾಗಿದೆ.
ಹೊನ್ನಾಳಿಯ ಪೊಳಿಸ್‍ಠಾಣೆ ಸಮೀಪವೇ ಹಾಡುಹಗಲೇ ದರೋಡೆಯಾಗಿದೆ ಎಂಬ ಸುದ್ದಿ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು, ಇದನ್ನು ಗಂಭಿರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್‍ವರೀಷ್ಠಾಧೀಕಾರಿ ರಿಷ್ಯಂತ್ ಅವರು ಸಿಪಿಐ ದೇವರಾಜ್ ಹಾಗೂ ಪಿಎಸೈ ಬಸನಗೌಡ ಬಿರಾದರ್ ನೇತೃತ್ವದಲ್ಲಿ 10 ಜನರ ಒಂದು ತಂಡವನ್ನು ರಚಿಸಿ ಯಾರು ದರೋಡೆ ಮಾಡಿರಬಹುದು ಎಂದು ತನಿಖೆಗೆ ಆದೇಶಿಸಿದರು.
ಹಾಡು ಹಗಲೇ ಮನೆಯಲ್ಲಿ ದರೋಡೆಯಾಗಿರುವ ಬಗ್ಗೆ ವರದಿ ಸುಳ್ಳೋ ಅಥವಾ ನಿಜವೇ ಎಂಬುದನ್ನು ತಿಳಿದುಕೊಳ್ಳವಲ್ಲಿ ನಮ್ಮ ಪೊಲೀಸರು ಅತ್ಯಂತ ಚಾಣಕ್ಷತನದಿಂದ ಈ ಪ್ರಕರಣದಲ್ಲಿ ಹಲವಾರು ಮಾಹಿತಿಗಳು ಹಾಗೂ ಆಕೆಯ ಮೇಲೆ ಅನುಮಾನಗೊಂಡು ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ನಮ್ಮ ಮಾವ ನಮಗೆ ಕಿರುಕುಳ ನೀಡುತ್ತಿದ್ದರು, ಇದನ್ನು ತಾಳಲಾರದೆ ಮಾವನನ್ನು ತನ್ನ ಚಿಕ್ಕ ಮಗನ ಮನೆಗೆ ಹೋಗುವ ರೀತಿಯಲ್ಲಿ ತನಗೆ ಸಹಾಯ ಮಾಡುವಂತೆ ಜ್ಯೋತಿಷಿ ಸಂಪತ್ ಅವರನ್ನು ಕೇಳಿಕೊಂಡಾಗ 2.50 ಲಕ್ಷ ಹಣ ನೀಡುವಂತೆ ಹೇಳಿದರು. ಆಗ ನಾನು ಮನೆಯಲಿದ್ದ ಒಡವೆಗಳನ್ನು ಕೊಡುತ್ತ ಬಂದೆ ಆದರೆ ಅಮಾವಾಸ್ಯೆ ದಿನ ಸಂಪತ್ ನನಗೆ ಫೋನ್ ಮಾಡಿ ಇವತ್ತು ಬಾಕಿ ಹಣ ಕೊಡಿ ಇಲ್ಲದಿದ್ದರೆ ನಿಮಗೆ ಕೆಟ್ಟದಾಗುತ್ತೆ ಎಂದು ಹೆದರಿಸಿದಾಗ ಅನೀವಾರ್ಯವಾಗಿ ನಾನು ಮನೆಯ ಬೀರುವಿನಲ್ಲಿದ್ದ 50 ಸಾವಿರ ನಗರು ಹಾಗೂ ಬಂಗಾರವನ್ನು ತೆಗದುಕೊಂಡು ಜ್ಯೋತಿಷಿ ಸಂಪತ್ ಅವರಿಗೆ ಕೊಟ್ಟೆ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ರಿಷ್ಯಂತ್ ಅವರು ಸುದ್ದಿಗಾರರಿಗೆ ವಿವರಿಸಿದರು.
ಬಂಧನ ; ಹಾಡು ಹಗಲೇ ದರೋಡೆ ನಡೆದಿದೆ ಎಂದು ದೂರು ನೀಡಿ ಸ್ವತಃ ತಾನೇ ಹಣ ಹಾಗೂ ಬಂಗಾರ ದೋಚಿದ ದೂರದಾರೆ ವಿನುತ ಹಾಗೂ ಆಕೆಯನ್ನು ವಂಚಿಸಿದ ಜ್ಯೋತಿಷಿ ಸಂಪತ್ ಅವರನ್ನು ಬಂಧಿಸಲಾಗಲಾಗಿದೆ ಎಂದು ಅವರು ತಿಳಿಸಿದರು.
ಹಾಡು ಹಗಲೇ ದರೋಡೆ ಎಂಬ ಸುದ್ದಿ ಇಡೀ ಜಿಲ್ಲೆಯಲ್ಲಿ ಪ್ರಚಾರ ಆಗಿದ್ದರಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದರಿಂದ ಈ ದರೋಡೆ ಪ್ರಕರಣವನ್ನು ಬೇಧಸಲೇಬೇಕು ಎಂದು ಚಾಲೆಂಜ್ ಮಾಡಿ ಈ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಪ್ರಕರಣ ನಡೆದ ನಾಲ್ಕೆ ದಿನದಲ್ಲಿ ಇಡೀ ಪ್ರಕರಣವನ್ನು ಬೇಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ನಗದು ಬಂಗಾರ ವಶಕ್ಕೆ ; ತನ್ನ ಮಾವನ ಕಾಟ ತಪ್ಪಿಸಿ ಎಂದು ಜ್ಯೋತಿಷಿಗೆ ಕೊಟ್ಟ ನಗರು,ಬಂಗಾರ ಹಾಗೂ ತನ್ನ ಬಳಿ ಇಟ್ಟುಕೊಂಡಿದ್ದ ಬಂಗಾರ ಸೇರಿ ಒಟ್ಟು 170 ಗ್ರಾಂ. ಬಂಗಾರ ಹಾಗೂ 50 ಸಾವಿರ ಬಂಗಾರವನ್ನು ವಶಪಡಿಸಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.
ದರೋಡೆ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾದ ಸಿಪಿಐ ದೇವರಾಜ್,ಪಿಎಸೈ ಬಸನಗೌಡ ಬಿರಾದರ್,ಹೊನ್ನಾಳಿಯ ಎಎಸೈ ಮಾಲತೇಶ್,ಹರೀಶ್,ಧರ್ಮಪ್ಪ,ರಾಜು,ಮುಖ್ಯಪೇದೆಗಳಾದ ರಾಜು ದೊಡ್ಡಮನಿ,ಭರತ್ ಮನೋಹರ್,ರವಿ.ಎನ್.ಜಗದೀಶ್,ಭೋಜರಾಜ್,ಜಗದೀಶ್.ಜಿ.ವಿ..ಚೇತನ್‍ಕುಮಾರ್.,ಹನುಮಂತಪ್ಪ,ಮಹೇಶ್‍ನಾಯ್ಕ್,ಮೌನೇಶಚಾರಿ, ಎಸ್ಪಿ ಕಚೇರಿಯ ಕಾಂತರಾಜ್,ರಾಘವೇಂದ್ರ ಹಾಗೂ ಇನ್ನೀತರರಿಗೆ ಪ್ರಶಂಸೆ ವ್ಯಕ್ತಪಡಿಸಿದ ಜಿಲ್ಲಾ ಪೊಲೀಸ್‍ವರೀಷ್ಠಾಧಿಕಾರಿ ರಿಷ್ಯಂತ್ ಬಹುಮಾನ ಘೋಷಣೆ ಮಾಡಿದ್ದಾರೆ.

Leave a Reply

Your email address will not be published. Required fields are marked *