ಸರ್ಕಾರಿ ಪ್ರೌಢಶಾಲೆಗೆ ತಟ್ಟೆ ಲೋಟ ಕೊಡುಗೆ ಸಮೀಪದ ನ್ಯಾಮತಿ ;-ಪೆ-5-ಬೆಳುಗುತ್ತಿ ಮಲಿಗೆನಹಳ್ಳಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಮಲ್ಲಿಗೆನಹಳ್ಳಿಯ ಗ್ರಾಮದ ಶ್ರೀ ಕೆ ತೀರ್ಥಲಿಂಗಪ್ಪ ಇವರು ಬೆಂಗಳೂರಿನ ದೇವನಹಳ್ಳಿಯಲ್ಲಿ ವಾಸವಾಗಿದ್ದು, ಇವರು ತಮ್ಮ ಧರ್ಮ ಪತ್ನಿಯಾದ ದಿವಂಗತ ಪಂಕಜ ಹೆಚ್ ಡಿ ಇವರ ಸ್ಮರಣಾರ್ಥವಾಗಿ ಬೆಳಗುತ್ತಿ ಮಲ್ಲಿಗೆನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಮಧ್ಯಾಹ್ನದ ಬಿಸಿಯೂಟಕ್ಕೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಉದ್ದೇಶನ್ನು ಇಟ್ಟುಕೊಂಡು

ಸುಮಾರು 300 ತಟ್ಟೆ 300 ಲೋಟವನ್ನು ಉಚಿತವಾಗಿ ಈ ಶಾಲೆಗೆ ಧಾನವಾಗಿ ನೀಡಿ ಮಾನವೀಯ ಮೌಲ್ಯ ಮೆರದರು .ಈ ಕಾರ್ಯಕ್ರಮದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಜಿ ಕುಬೇರಪ್ಪ ,ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಜಿ ಪರಮೇಶ್ವರಪ್ಪ ,ಹಾಲಿ ಗ್ರಾಮ ಪಂಚಾಯತಿ ಸದಸ್ಯರಾದ ನಾಗರಾಜ ಎಲ್, ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ತೀರ್ಥಲಿಂಗಪ್ಪ ಸಿ ,ಹಾಗೂ ಸಹ ಶಿಕ್ಷಕರುಗಳು ಸಿಬ್ಬಂದಿವರ್ಗದವರು ಶಾಲಾ ವಿದ್ಯಾರ್ಥಿಗಳು ಸಹ ಭಾಗವಹಿಸಿದರು.

Leave a Reply

Your email address will not be published. Required fields are marked *