ಹೊನ್ನಾಳಿ;-ಪೆ 5 -ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹೊನ್ನಾಳಿ ಪೇಟೆ ಶಾಲೆ ಹೊನ್ನಾಳಿ ತಾಲೂಕಿನಲ್ಲಿ ಮಾದರಿ ಶಾಲೆಯಾಗಿ ಹೊರಹೊಮ್ಮಿದೆ. ಶಿಕ್ಷಕಿಯರು 6ಜನ ಇದ್ದು ಮಕ್ಕಳ ಸಂಖ್ಯೆಯೂ 200 ಇರುತ್ತವೆ, ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಇರುತ್ತದೆ, ಗೋಡೆಗಳ ಮೇಲೆ ಮಕ್ಕಳಿಗೆ ಅನುಗುಣವಾಗಿ ಚಿತ್ರಗಳು ಬರೆದಿರುತ್ತಾರೆ ,ಅದನ್ನು ನೋಡಿ ಅಲ್ಲಿನ ಪೋಷಕರು ಖಾಸಗಿ ಶಾಲೆಯಲ್ಲಿರುವ ಮಕ್ಕಳನ್ನು ಸರ್ಕಾರಿ ಶಾಲೆಗೆ ತಂದು ಸೇರಿಸುತ್ತಿದ್ದಾರೆ ,ಶಾಲೆಯಲ್ಲಿ ಜೋಕಾಲಿ ಜಾರಬಂಡಿ ಮಕ್ಕಳಿಗೆ ಆಡುವ ಸಾಮಗ್ರಿಗಳು ಖಾಸಗಿ ಶಾಲೆಗಿಂತ ಅತಿಯಾಗಿ ಹೊಂದಿದೆ .ಈ ಸರ್ಕಾರಿ ಶಾಲೆಯ ಆಧುನೀಕರಣ ಎಂದು ಕರೆಯುತ್ತಾರೆ.
ಈ ಶಾಲೆಯಲ್ಲಿ ಶ್ರಮಪಡುವ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಮುಖ್ಯೋಪಾಧ್ಯಾಯರಾಗಿ ರತ್ನಮ್ಮ ನವರಿಗೆ ತಾಲೂಕ್ ಎಸ್ ಡಿ ಎಂ ಸಿ ಘಟಕದಿಂದ ಅಭಿನಂದನೆಯನ್ನು ಸಲ್ಲಿಸಿದರು.ಈ ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ರುದ್ರನಾಯಕ ,ಶಾಲೆಯ ಅಧ್ಯಕ್ಷರಾದ ಮಂಜಪ್ಪ, ಉಪಾಧ್ಯಕ್ಷರು, ಸದಸ್ಯರುಗಳು ಪೋಷಕರು ಭಾಗವಹಿಸಿದ್ದರು.ಸುಮಾ ಸಹ ಶಿಕ್ಷಕರು ಅವರು ಉಪಸ್ಥಿತರಿದ್ದು ಈ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಿದರು .
ತಾಲೂಕು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವಲಿಂಗಪ್ಪ ಎಸ್ ಹುಣಸಘಟ್ಟ ಇವರ ನೇತೃತ್ವದ ಲ್ಲಿ ಕಾರ್ಯಕ್ರಮವು ನಡೆಯಿತು.