ಹೊನ್ನಾಳಿ- ಪೆ;-7- ಹೊನ್ನಾಳಿ ತಾಲೂಕು ದಿಡಗೂರು ಗ್ರಾಮ ವಾಸಿಯಾದ ಮಂಜಪ್ಪ ಮಾಸ್ತರು ಇವರ ತೋಟದಲ್ಲಿ ಅಡಿಕೆ ಗಿಡಗಳು ಮೊದಲನೆಯ ಕೊಯ್ಲಿನ ಪೂಜೆಯಲ್ಲಿ ದಿಡಗೂರಿನ ಅಣ್ಣಪ್ಪಸ್ವಾಮಿ ಹಾಗೂ ಕುಟುಂಬದ ಸದಸ್ಯರುಗಳು ನೇತೃತ್ವದಲ್ಲಿ ಅಡಿಕೆ ಗಿಡಕ್ಕೆ ಸೀರೆಯನ್ನು ಉಡಿಸಿ ಬಳೆಯನ್ನು ತೊಡಿಸಿ ಪುಷ್ಪ ಅಲಂಕಾರ ಮಾಡಿ ಪೂಜೆ ಕೈಂಕರ್ಯಗಳನ್ನು ಮಾಡುವುದರ ಮೂಲಕ ಚಾಲನೆ ನೀಡಲಾಯಿತು.
ನಂತರ ಪಕ್ಕದ ಅಡಿಕೆಯ ತೋಟದಲ್ಲಿರುವ ತೆಂಗಿನ ಗಿಡ ಹೊಂಬಾಳೆ ಹೊಡೆದಿರುವುದರಿಂದ ಇದೇ ರೀತಿ ಪೂಜಾ ಕಾರ್ಯಗಳನ್ನು ಮಾಡಿದರು. .ಇದೇ ತೋಟದಲ್ಲಿ ಪೂಜೆಯನ್ನು ಮುಗಿಸಿದ ನಂತರ ಆಹಾರ ಪದ್ಧತಿಯನ್ನು ಏರ್ಪಡಿಸಲಾಗಿತ್ತು ಅಲ್ಲಿ ಸುಮಾರು 50ಕ್ಕೂ ಹೆಚ್ಚು ಜನರು ರೊಟ್ಟಿ ಕಾಯಿಪಲ್ಲೆ. ಚಟ್ನಿ ಚಿತ್ರಾನ್ನ ಕೋಸಂಬರಿ ಹಪ್ಪಳ-ಸಂಡಿಗೆ ಕರೆದ ಮೆಣಸಿನಕಾಯಿ ಲಾಡು ಜಿಂಕ ಇನ್ನು ಮುಂತಾದ ಸಿಹಿ ಭೋಜನ ಹಾಗೂ ಅನ್ನ ಸಾಂಬಾರು ಜೊತೆಗೆ ಮೃಷ್ಟಾನ್ನ ಭೋಜನವನ್ನು ಎಲ್ಲರೂ ಸವಿದಿದ್ದು ಆನಂದ ಮಯವಾಗಿತ್ತು ಎಂದು ಹೇಳುತ್ತಾರೆ ಪ್ರಭಾಕರ ಸ್ನೇಹಿತ ಜಗದೀಶ್ ಮಾರ್ತಂಡಪ್ಪ ಎಬಿಸಿನ್ಯೂಸ್ ಅವರಿಗೆ ತಿಳಿಸಿದರು.
ಉಪಸ್ಥಿತಿಯಲ್ಲಿ ;-ದಿಡಗೂರು ಅಣ್ಣಪ್ಪ ಸ್ವಾಮಿಗಳು, ಜಗದೀಶ್ ಮಾರ್ತಂಡಪ್ಪ ಅವರ ಕುಟುಂಬದ ಎಲ್ಲಾ ಸದಸ್ಯರುಗಳು, ಮೂಕಣ್ಣ ಮಂಜಪ್ಪ ಮಾಸ್ಟರ್ ಅವರ ಮಕ್ಕಳು ಸೊಸೆಯಂದಿರು ಅಕ್ಕ ತಂಗಿಯರು ,ಮೊಮ್ಮಕ್ಕಳು ಗುರುಮೂರ್ತಿ ಣ್ಣ ಬಿಎಂ ಧರ್ಮಪ್ಪ ,ವೆಂಕಟೇಶ್ ಬಿ ಎಂ ,ಪ್ರಭಾಕರ್ ಬಿ ಎಂ, ಎಲ್ಲಾ ಕುಟುಂಬದ ಸದಸ್ಯರುಗಳು ಸಹ ಭಾಗಿಯಾಗಿದ್ದರು.