ಹೊನ್ನಾಳಿ-ಪೆ;-7;-ಹೊನ್ನಾಳಿ ಪಟ್ಟಣದಲ್ಲಿರುವ ಹಿರೇಮಠದ ಪ್ರಿಂಟಿಂಗ್ ಪ್ರೆಸ್ ಆವರಣದಲ್ಲಿ ಇಂದು ಭಾರತರತ್ನ ಸನ್ಮಾನ್ಯ ಶ್ರೀ ಲತಾ ಮಂಗೇಶ್ವರ್ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಾನ್ಯ ಶ್ರೀ ಇಬ್ರಾಹಿಂ ಸುತಾರ ಅವರ ನಿಧನದ ಪ್ರಯುಕ್ತ ಕಾಸಪ ಹೊನ್ನಾಳಿ ತಾಲೂಕು ಅಧ್ಯಕ್ಷರಾದ ಮುರುಗೇಪ್ಪಗೌಡ ಹಾಗೂ ಕ ಶ ಸಾ ಪ ಅಧ್ಯಕ್ಷರಾದ ದೇವೇಂದ್ರಯ್ಯ ಕೆಪಿ ಮತ್ತು ಸಿರಿಗನ್ನಡ ವೇದಿಕೆ ಅಧ್ಯಕ್ಷರಾದ ಯು ಎ ನ್ ಸಂಗನಾಳಮಠ ಇವರುಗಳ ನೇತೃತ್ವದಲ್ಲಿ ಇಂದು ದಿವಂಗತರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವುದರ ಮುಖೇನ ಒಂದು ನಿಮಿಷಗಳ ಕಾಲ ಮೌನಾಚರಣೆಯನ್ನು ಮಾಡುವುದರ ಜೊತೆಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಯು ಎನ್ ಸಂಗನಾಳಮಠ ಅವರು ಮಾತನಾಡಿ ಸಂಗೀತ ಕ್ಷೇತ್ರದಲ್ಲಿ ದಿಗ್ಗಜರೆನಿಸಿಕೊಂಡಿರಿವ ದಿವಂಗತ ಲತಾ ಮಂಗೇಶ್ಕರ್ ಅವರ ಜೀವನ ಚರಿತ್ರೆಯ ಬಗ್ಗೆ ಹಾಗೂ ಇನ್ನೊಬ್ಬ ದಿಗ್ಗಜ ದಿವಂಗತ ಇಬ್ರಾಹಿಂ ಸುತಾರ ಅವರ ಜೀವನ ಚರಿತ್ರೆಯ ಬಗ್ಗೆ ಅವರು ಅಪಾರ ಜ್ಞಾನವುಳ್ಳ ವ್ಯಕ್ತಿಗಳು ,ಗಂಟೆಗಟ್ಟಲೆ ಪ್ರವಚನವನ್ನು ಮಾಡುವಂತ ಶಕ್ತಿ ಅವರಲ್ಲಿತ್ತು ,ಹಿಂದಿ, ಸಂಸ್ಕೃತ ,ಉರ್ದು ,ಅಧ್ಯಾತ್ಮಿಕ ಜೀವಿಯಾಗಿದ್ದರು .ಕನ್ನಡದ ಕಬೀರ ಮಹಾಲಿಂಗಪುರದ ಶರೀಫ್ ಎಂದೇ ಹೆಸರುವಾಸಿಯಾಗಿದ್ದ ಇಬ್ರಾಹಿಂ ಸುತಾರ ನಿಧನರಾಗಿರುವುದು ಕನ್ನಡ ಲೋಕಕ್ಕೆ ಜಾತ್ಯತೀತವಾಗಿ ಅವರು ಮುಸ್ಲಿಮರಾಗಿ ಹುಟ್ಟಿದರೂ ಸಹ ಸರ್ವ ಸಮಾಜವನ್ನು ತಿದ್ದುವಂಥ ಕೆಲಸವನ್ನು ಪ್ರವಚನವನ್ನು ಮಾಡುವುದರ ಮೂಲಕ ಮಾಡಿದರು .ಸಂಗನಾಳಮಠ ರವರು ಅವರ ಜೀವನ ಚರಿತ್ರೆಯನ್ನು ಸುಮಾರು ಅರ್ಧ ಗಂಟೆಗಳ ಕಾಲ ನಿರರ್ಗಳವಾಗಿ ಅವರ ವಿಷಯವನ್ನು ಈ ಸಮಯದಲ್ಲಿ ತಿಳಿಸಿದರು.
ಉಪಸ್ಥಿತಿಯಲ್ಲಿ;- ಕಸಾಪ ಅಧ್ಯಕ್ಷ ಜಿಎಂ ಮುರಿಗೆಪ್ಪ ಗೌಡ ,ಕ ಶ ಸಾ ಪ ಅಧ್ಯಕ್ಷ ದೇವೇಂದ್ರ ಯ್ಯ ಕೆಪಿ ,ಸಿರಿಗನ್ನಡ ವೇದಿಕೆ ಅಧ್ಯಕ್ಷರು ಯುಎನ್ ಸಂಗನಾಳಮಠ , ಕಾರ್ಯದರ್ಶಿ ಕೆ ಶೇಕರಪ್ಪ, ನಿಜಲಿಂಗಪ್ಪ ,ಸದಸ್ಯರುಗಳಾದ ಧನರಾಜ್, ಗೋವಿಂದಪ್ಪ ,ಶಾರದಾ ಕಣಗೋಟಗಿ, ಗಾಯಿತ್ರಮ್ಮ ,ತಿಮ್ಮೇಗೌಡ ಮತ್ತು ಕತಿಗಿ ನಾಗರಾಜ್ ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು.