ಓಬವ್ವ ಆತ್ಮ ರಕ್ಷಣಾ ಕಲೆ ತರಬೇತಿ ಕಾರ್ಯಕ್ರಮ ಉದ್ಘಾಟನೆ
ಹೆಣ್ಣುಮಕ್ಕಳು ಸ್ವಯಂ ರಕ್ಷಣೆಗೆ ದೈಹಿಕ ಮಾತ್ರವಲ್ಲ
ಮಾನಸಿಕವಾಗಿಯೂ ಸಮರ್ಥರಾಗಿ- ಮಹಾಂತೇಶ್ ಬೀಳಗಿ
ಹೆಣ್ಣು ಮಕ್ಕಳು ಸಂಕಷ್ಟದ ಸಂದರ್ಭದಲ್ಲಿ ತಮ್ಮನ್ನುತಾವು ರಕ್ಷಿಸಿಕೊಳ್ಳಲು ಕೇವಲ ದೈಹಿಕವಾಗಿ ಮಾತ್ರವಲ್ಲ,ಮಾನಸಿಕವಾಗಿಯೂ ಸದೃಢಗೊಳ್ಳುವಂತೆ ಆತ್ಮಸ್ಥೈರ್ಯವೃದ್ಧಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಹೇಳಿದರು.ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿಮಂಗಳವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ,ಬೆಂಗಳೂರು ಇವರ ಸಂಯುಕ್ತ…