ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಬಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತಿದ್ದು, ಅಭಿವೃದ್ಧಿ ಕೆಲಸಗಳಿಗೆ ಎಂದಿಗೂ ಕೊನೆ ಇಲ್ಲ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ತಿಳಿಸಿದರು.
ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಜಾದ್‍ನಗರ ಮತ್ತು ಬಾಷಾನಗರದಲ್ಲಿ 2021-22 ಸ್ಥಳೀಯ ಶಾಸಕರ ಅನುದಾನ ಮತ್ತು ಮಹಾನಗರ ಪಾಲಿಕೆ 15ನೇ ಹಣಕಾಸು ಅನುದಾನದಡಿ ಹಮ್ಮಿಕೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
2021-22 ಸ್ಥಳೀಯ ಶಾಸಕರ ಅನುದಾನದಡಿ ವಾರ್ಡ್.ನಂ. 9ರ ವ್ಯಾಪ್ತಿಯಲ್ಲಿ ಬರುವ ಅಜಾದ್‍ನಗರ 5ನೇ ಅಡ್ಡ ರಸ್ತೆಯ ಒಂದು ಬದಿಯಲ್ಲಿ ಸಿ.ಸಿ.ಚರಂಡಿ ಮತ್ತು ಕವರಿಂಗ್ ಸ್ಲ್ಯಾಬ್ ನಿರ್ಮಾಣ, ಮಹಾನಗರ ಪಾಲಿಕೆ 15ನೇ ಹಣಕಾಸು ಅನುದಾನದಡಿ ವಾರ್ಡ್ ನಂ.9ರ ಬಾಷಾನಗರ 2ನೇ ಮೇನ್ 1ನೇ ಕ್ರಾಸ್‍ನ ಎರಡು ಕಡೆ ಬಾಕ್ಸ್ ಚರಂಡಿ ನಿರ್ಮಾಣ ಮಾಡಿ ಕವರಿಂಗ್ ಸ್ಲ್ಯಾಬ್ ಅಳವಡಿಸಲಾಗುವುದು, 2021-22 ಸ್ಥಳೀಯ ಶಾಸಕರ ಅನುದಾನದಡಿ ವಾರ್ಡ್ ನಂ. 12 ವ್ಯಾಪ್ತಿಯಲ್ಲಿ ಬರುವ ಅಜಾದ್ ನಗರ 1 ಮತ್ತು 2ನೇ ಮುಖ್ಯ ರಸ್ತಗಳಿಗೆಸಿ.ಸಿ.ಚರಂಡಿ ನಿರ್ಮಿಸಿ ಕವರಿಂಗ್ ಸ್ಲ್ಯಾಬ್ ಅಳವಡಿಸಲಾಗುವುದು, ಮಹಾನಗರ ಪಾಲಿಕೆ ಸಾಮಾನ್ಯ ನಿಧಿಯಡಿ ವಾರ್ಡ್ ನಂ.12, ಅಜಾದ್‍ನಗರ 13ನೇ ಅಡ್ಡ ರಸ್ತೆ ಮತ್ತು 15ನೇ ಅಡ್ಡ ರಸ್ತೆ ಎರಡು ಬದಿಯಲ್ಲಿ ಸಿ.ಸಿ. ಚರಂಡಿ ನಿರ್ಮಿಸಿ ಕವರಿಂಗ್ ಸ್ಲ್ಯಾಬ್ ಅಳವಡಿಸಲಾಗುವುದು ಎಂದರು.
ಮಹಾನಗರ ಪಾಲಿಕೆ ಮಾಜಿ ಕಾರ್ಪೋರೇಟರ್ ಶಫೀಕ್ ಪಂಡಿತ್ ಮಾತನಾಡಿ ಡಾ|| ಶಾಮನೂರು ಶಿವಶಂಕರಪ್ಪನವರು ಈ ಭಾಗದ ಶಾಸಕರಾಗಿರುವುದು ನಮ್ಮ ಸೌಭಾಗ್ಯ ಎಂದು ಬಣ್ಣಿಸಿ ಪ್ರತಿಯೊಂದು ಸಮಸ್ಯೆಗೂ ಸ್ಪಂದಿಸುತ್ತಿರುವುದನ್ನು ಉದಾಹರಣೆ ಸಮೇತ ವಿವರಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಹುರ್‍ಬಾನು, ಜಾಕೀರ್ ಅಲಿ, ಮುಖಂಡರುಗಳಾದ ಹೈದರಲಿ ಬಾಬು, ಚಂದ್ರಣ್ಣ, ಮಹಬೂಬ್ ಬಾಷಾ ಬೀಡಾ, ಆಧೀಲ್ ಬಾಷಾ, ಅಕ್ರಂ, ಜಿಕ್ರಿಯಾಸಾಬ್, ಇಮಾಮ್ ಹುಸೇನ್, ಜಿಲಾನಿ, ಮೊಟ್ಟೆ ದಾದಾಪೀರ್, ಕಲೀಲ್, ಇಬ್ರಾಹಿಂ, ಸೊಫಿಯಾನ ರಜಾ, ಕೊಟ್ಟೂರು ಇಮ್ರಾನ್, ಆರೀಫ್ ಶೇಖ್, ಇಲಿಯಾಜ್, ಸ್ಮಾರ್ಟ್‍ಸಿಟಿ ನಿರ್ದೇಶಕರಾದ ಎಂ.ನಾಗರಾಜ್, ಕೆಆರ್‍ಐಡಿಎಲ್‍ನ ಗಣೇಶ್ ಬಾಬು, ಮಹಾನಗರ ಪಾಲಿಕೆಯ ಪ್ರೀತಮ್, ಸಚಿನ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *