ಚನ್ನೇಶನ ಆಣೆ ಮಾಡಿ ಹೇಳುತ್ತೇನೆ ಪುಕ್ಸಟೆಯಾಗಿ ಶಾಸಕರು ಮಾಸಡಿ ಸಮೀಪ ಇರುವ ತಮ್ಮ ಜಮೀನಿಗೆ ನೇರ್ಲೆಗುಂಡಿ ಕೆರೆಯಿಂದ 3 ಸಾವಿರ ಟಿಪ್ಪರ್ ಮಣ್ಣನ್ನು ಹೊಡೆಸಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ದ ನೇರವಾಗಿ ಆರೋಪ ಮಾಡಿದರು.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು,
18/06/ 2021 ರಲ್ಲಿ ಕರ್ನಾಟಕ ನೀರವಾರಿ ನಿಗಮದಿಂದ ತಾಲೂಕಿನ 8 ಕೆರೆಗಳಿಗೆ ಕೆರೆಯಲ್ಲಿ ಹೂಳೆತ್ತುವ ಅಥವಾ ಇನ್ನೀತರ ಕಾಮಗಾರಿಗೆ 4 ಕೋಟಿ ಬಿಡುಗಡೆಯಾಗಿತ್ತು ಅದರಲ್ಲಿ ತಾಲೂಕಿನ ನೇರ್ಲೆಗುಂಡಿ ಕೆರೆಯಲ್ಲಿ ಹೂಳೆತ್ತುವುದಕ್ಕೆ 50 ಲಕ್ಷ ಬಿಡುಗಡೆಯಾಗಿತ್ತು,ಅದೇ ಕೆರೆಗೆ ಶಾಸಕರು ಈಗ ಗುದ್ದಲಿಪೂಜೆ ನೆರವೇರಿಸಿದ್ದಾರೆ, ಕೆರೆಯಿಂದ ಶಾಸಕರು 3 ಸಾವಿರ ಟಿಪ್ಪರ್ ಮಣ್ಣ ಹೊಡೆಸಿಕೊಂಡು ತಮ್ಮ ಜಮೀನಿಗೆ ಹಾಕಿಸುತ್ತಿರುವ ಬಗ್ಗೆ ಸ್ಥಳಿಯ ರೈತರು ನಮ್ಮ ಬಳಿ ದೂರಿದರು,ಈ ಬಗ್ಗೆ ನಮ್ಮ ಕಾಂಗ್ರೆಸ್ ಮುಖಂಡ ಆರ್.ನಾಗಪ್ಪ ಅವರು 30/03.2021 ರಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ,ನೀರಾವರಿ ನಿಗಮದ ಮುಖ್ಯ ಇಂಜಿನಿಯರ್,ಜಿಲ್ಲಾಧಿಕಾರಿ ಸೇರಿದಂತೆ ಅನೇಕ ಅಧಿಕಾರಿಗಳಿಗೆ ದೂರು ಸಲ್ಲಿಸಿ ಈ ಬಗ್ಗೆ ತನಿಖೆಗೆ ಆದೇಶ ಮಾಡಬೇಕು ಎಂದು ಮನವಿ ಮಾಡಿದ್ದರ ಹಿನ್ನಲೆಯಲ್ಲಿ ಮುಖ್ಯಕಾರ್ಯದರ್ಶಿ ಅವರು ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದರಿಂದ 50 ಲಕ್ಷ ಬಿಲ್ ಪಾವತಿಯಾಗಲಿಲ್ಲ, ಆ ಮೂಲಕ ನಾವು ನಡೆಯಬಹುದಾದ ಭ್ರಷ್ಟಾಚಾರವನ್ನು ತಡೆದಿದ್ದೇವೆ ಎಂದು ಮಾಜಿ ಶಾಸಕರು ವಿವರಿಸಿದರು.
ಈಗ ಗುದ್ದಲಿಪೂಜೆ ಮಾಡಿದ್ದಾರೆ, ಕೆಲಸ ಮಾಡಿ ಬಿಲ್ ತೆಗೆದುಕೊಂಡರೆ ನಮ್ಮ ಅಭ್ಯಂತರವೇನು ಇಲ್ಲ ಎಂದ ಅವರು, ಶಾಸಕರು ಭ್ರಷ್ಟಾಚಾರ ಮಾಡಿ ಬಿಲ್ ತೆಗೆದುಕೊಂಡಿದ್ದಾರೆ ಎಂದು ಆರೋಪ ಮಾಡಿರಲಿಲ್ಲ,ಮುಂದೆ ಭ್ರಷ್ಟಾಚಾರ ಆಗುವುದನ್ನು ತಡೆದಿದ್ದೇವೆ ಎಂದು ಆರೋಪ ಮಾಡಿದ್ದೇವು ಎಂದು ಅವರು ಸ್ಪಷ್ಟಪಡಿಸಿದರು.
ಅವಳಿ ತಾಲೂಕು ಆಡಳಿತಗಳಲ್ಲಿ ಬಾರೀ ಭ್ರಷ್ಟಾಚಾರ ; ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕು ಆಡಳಿತದಲ್ಲಿ ಬಾರೀ ಭ್ರಷ್ಟಾಚಾರ ತಾಂಡವಾಡುತ್ತಿದೆ,ಗ್ರಾಮಲೆಕ್ಕಿಗರು,ರಾಜಸ್ವ ನಿರೀಕ್ಷಕರು ಹಾಗೂ ಇತರ ಅಧಿಕಾರಿಗಳು ರೈತರಿಂದ ಹಣ ವಸೂಲಿ ಮಾಡಿ ಕೆಲಸ ಮಾಡಿಕೊಡುತ್ತಿದ್ದಾರೆ ಹೊರತು ಹಣ ಇಲ್ಲದೆ ಯಾವುದೇ ಕೆಲಸ ಮಾಡಿಕೊಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರದ ಮಾನದಂಡದ ಪ್ರಕಾರ ಹಣ ಬಿಡುಗಡೆಯಾಗಬೇಕು ಎಂದು ಸರ್ಕಾರ ಆದೇಶಿಸಿದರೆ, ಇಲ್ಲಿನ ಅಧಿಕಾರಿಗಳು ಮಾತ್ರ ಯಾರೂ ಲಂಚ ಎಷ್ಟು ಕೊಡುತ್ತಾರೆ ಅದರ ಆಧಾರದ ಮೇಲೆ ಮಳೆಯಿಂದ ಬಿದ್ದ ಮನೆಗಳಿಗೆ ಪರಿಹಾರ ನೀಡುತ್ತಿದ್ದಾರೆ,ಸರ್ಕಾರ ಎ.ಬಿ.ಸಿ ಕೆಟಗೆರಿ ಮೇಲೆ ಹಣ ಕೊಡಿ ಎಂದು ಹೇಳಿದ್ದರೆ, ಅಧಿಕಾರಿಗಳು ಮಾತ್ರ ತಮಗೆ ಯಾರು ಹೆಚ್ಚು ಹಣ ಕೊಡುತ್ತಾರೋ ಅಂತಹವರಿಗೆ ಮಾತ್ರ ಹೆಚ್ಚು ಪರಿಹಾರ ನೀಡುತ್ತಿದ್ದಾರೆ ಎಂದು ನೇರವಾಗಿ ಅಧಿಕಾರಿಗಳ ವಿರುದ್ದ ಆರೋಪಿಸಿದರು.
ಖಂಡನೆ ; ಕಾಂಗ್ರೆಸ್ ಸರ್ಕಾರದಲ್ಲಿ ಸರ್ವೆ ಸ್ಕೆಚ್ ಮಾಡಿಕೊಡಲಿಕ್ಕೆ ಕೇವಲ 35 ರೂ ಇತ್ತು ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 35 ರೂ ಇದ್ದ ಶುಲ್ಕವನ್ನು 4 ಸಾವಿರಕ್ಕೆ ಏರಿಸಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಇದನ್ನು ನಮ್ಮ ಪಕ್ಷ ಬಲವಾಗಿ ಖಂಡಿಸುತ್ತದೆ ಎಂದರು.
ವಿನಾಕಾರಣ ನಾನೇ ಟಾರ್ಗೆಟ್ ; ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಪ್ರತಿ ಪತ್ರಿಕಾಗೋಷ್ಠಿಯಲ್ಲೂ ನನ್ನನ್ನೇ ಟಾರ್ಗೆಟ್ ಮಾಡಿ ಮಾತು ಶುರು ಮಾಡುತ್ತಾರೆ ಬಹುಶಃ ನನ್ನನ್ನು ಕಂಡರೆ ಅವರಿಗೆ ಭಯ ಅಥವಾ ಪ್ರೀತಿ ಇರಬೇಕು ಅಂತ ಕಾಣುತ್ತೆ ಎಂದು ಹೇಳಿದರು.
ಜಿ.ಪಂ. ಮಾಜಿ ಅಧ್ಯಕ್ಷ ಆರ್,ನಾಗಪ್ಪ,ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಬಣ್ಣಜ್ಜಿ,ಎನ್‍ಎಸ್‍ಯುಐ ತಾಲೂಕು ಅಧ್ಯಕ್ಷ ಮನು ವಾಲಜ್ಜಿ,ಕಾರ್ಯದರ್ಶಿ ಸುಜಯ್ ಹಾಗೂ ಇತರರು ಇದ್ದರು.