ಹೊನ್ನಾಳಿ ಪ್ರಬ್ರವರಿ 11 ಪಟ್ಟಣದಲ್ಲಿರುವ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಇವರ ವತಿಯಿಂದ ಸಂಪೂರ್ಣ ಸುರಕ್ಷಾ ಆರೋಗ್ಯ ರಕ್ಷಾ ಮತ್ತು ಸುಜ್ಞಾನ ನಿಧಿ ಮಂಜೂರಾತಿ ವಿತರಣಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಶಾಸಕರಾದ ಎಂಪಿ ರೇಣುಕಾಚಾರ್ಯರವರು ಚಾಲನೆ ಕೊಟ್ಟರು.
ನಂತರ ಮಾತನಾಡಿದ ಎಂಪಿ ರೇಣುಕಾಚಾರ್ಯ ರವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ನನ್ನ ಕೈಯಿಂದ ಚಕ್ ವಿತರಣೆ ಮಾಡಿಸಿರುವುದು ನನ್ನ ಸೌಭಾಗ್ಯ ಎಂದು ತಿಳಿಸಿದರು.
ಉಪಸ್ಥಿತಿಯಲ್ಲಿ ಎಂಪಿ ರೇಣುಕಾಚಾರ್ಯ ಶಾಸಕರು ಜಯಂತ್ ಪೂಜಾರಿ ಜಿಲ್ಲಾ ನಿರ್ದೇಶಕರು ,ಬಸವರಾಜ ಯೋಜನಾಧಿಕಾರಿ ಹೊನ್ನಾಳಿ ,ಪತ್ರಕರ್ತ ರಾದ ಶ್ರೀನಿವಾಸ ,ರಾಜು ಇನ್ನೊಬ್ಬ ಯೋಜನಾಧಿಕಾರಿಗಳಾದ ಬಸುರಾಜ್ ,ಧರ್ಮಸ್ಥಳ ಸಂಘದ ವತಿಯಿಂದ ಚೆಕ್ ಪಡೆದ ವಿದ್ಯಾರ್ಥಿಗಳು ಮತ್ತು ಫಲಾನುಭವಿಗಳು ಸಹ ಈ ಕಾರ್ಯ ಕ್ರಮದಲ್ಲಿ ಭಾಗಿಯಾಗಿದ್ದರು.