ಹೊನ್ನಾಳಿಯ ಹಿರೇಮಠದಲ್ಲಿರುವ ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಆದೇಶ ಮಾಡಿದ್ದು ಯಾವುದೇ ಕಠಿಣ ಪರಿಸ್ಥಿತಿ ಬಂದರೂ ಅದನ್ನು ನಿಬಾಯಿಸುವಂತೆ ಸೂಚನೆ ನೀಡಿದ್ದು, ನಾನು ಕೂಡ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುವಂತೆ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದರು.
ಹಿಜಾಬ್ ಹಾಗೂ ಕೇಸರಿ ವಿವಾದ ಆರಂಭವಾದ ಮೇಲೆ ಪರಿಸ್ಥಿತಿ ತಿಳಿಗೊಳಿಸಲು ಸರ್ಕಾರ ಅನಿವಾರ್ಯವಾಗಿ ಮೂರು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು. ಇದೀಗ ನಾಳೆಯಿಂದ ಶಾಲೆಗಳು ಪುನರ್ ಆರಂಭಗೊಳ್ಳುತ್ತಿದ್ದು, ಪೋಷಕರು ಯಾವುದೇ ಆತಂಕವಿಲ್ಲದೇ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದರು
ಅಲ್ಪಸಂಖ್ಯಾತ ಮಕ್ಕಳಲ್ಲಿ ಮನವಿ ಮಾಡಿದ ರೇಣುಕಾಚಾರ್ಯ ನಿಮ್ಮ ಸಂಪ್ರದಾಯವನ್ನು ನೀವು ಆಚರಣೆ ಮಾಡಿ, ಆದರೇ ಶಾಲೆ ಕಾಲೇಜಿಗೆ ಬರುವಾಗ ಹಿಜಾಬ್ ದರಿಸದೇ ಸರಸ್ಪತಿಗೆ ಕೈಮುಗಿದು ವಿದ್ಯಾಬ್ಯಾಸಕ್ಕೆ ಬನ್ನಿ ಎಂದರು. ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸದೇ ಶಾಲೆ ಕಾಲೇಜಿಗೆ ಬರುವ ಮೂಲಕ ವಿದ್ಯಾರ್ಥಿಗಳು ಸಂಘರ್ಷದಿಂದ ಹೊರ ಬಂದು ಸಾಮರಸ್ಯದಿಂದ ಶಿಕ್ಷಣ ಕಲಿತು ದೇಶದ ಸತ್ ಪ್ರಜೆಗಳಾಗಿ, ಭಾರತ ಮಾತೆಯ ಮಕ್ಕಳಾಗಿ ಸಹಬಾಳ್ವೆ ನಡೆಸಿ ಎಂದು ಮನವಿ ಮಾಡಿದರು.
ಕಳೆದ ಹತ್ತು ದಿನಗಳ ಹಿಂದೆ ವಿದ್ಯಾರ್ಥಿಗಳೆಲ್ಲಾ ಸ್ನೇಹಿತರಾಗಿದ್ದು, ಆತ್ಮೀಯರಾಗಿದ್ದರು.
ಆದರೇ ಹಿಬಾಲ್ ಸಂಘರ್ಷ ಆರಂಭವಾದ ಮೇಲೆ ಸರ್ಕಾರ ಅನಿವಾರ್ಯವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು ಇದೀಗ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗ ಬಾರದು ಎಂಬ ಉದ್ದೇಶದಿಂದ ಸರ್ಕಾರ ಶಾಲೆಗಳನ್ನು ಪುನರ್ ಆರಂಭ ಮಾಡಿದ್ದು, ಮಕ್ಕಳು
ಸಂಘರ್ಷ ಮರೆತು ಯಾವುದೇ ಬಯವಿಲ್ಲದೇ ಶಾಲೆಗೆ ಬನ್ನಿ ಎಂದರು.
ಮುಂದಿನ ಆದೇಶದ ವರೆಗೂ ಹಿಜಾಬ್, ಹಾಗೂ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ದರಿಸಿ ಶಾಲೆಗೆ ಬರುವಂತೆ ನ್ಯಾಯಲಯ ಮದ್ಯಾಂತರ ಆದೇಶ ಮಾಡಿದೆ ಎಂದ ರೇಣುಕಾಚಾರ್ಯ ಕುಂದೂಪುರದಲ್ಲಿ ಆರಂಭವಾದ ಘಟನೆ, ಅಂತರಾಜ್ಯ,ರಾಷ್ಟ್ರಮಟ್ಟಕ್ಕೆ ತಲುಪಿದೇ ಎಂದರು.
ಮೊದಲಹಾಗೇ ಸೌಹಾರ್ಧ ಯುತವಾಗಿ,ಶಾಂತಿಯುತವಾಗಿ ಮಕ್ಕಳು ವಿದ್ಯಾರ್ಜನೆ ಮಾಡಬೇಕು, ಇದೇ ನಮ್ಮ ಮೊದಲ ಆಧ್ಯತೆ ಎಂದ ರೇಣುಕಾಚಾರ್ಯ, ಮುಂದಿನ ದಿನಗಳಲ್ಲಿ ಪರೀಕ್ಷೆಗಳು ಆರಂಭವಾಗುತ್ತಿದ್ದು ವಿದ್ಯಾರ್ಥಿಗಳು ಶಿಕ್ಷಣದ ಕಡೆ ಹೆಚ್ಚಿನ ಒತ್ತು ನೀಡುವಂತೆ ಮನವಿ ಮಾಡಿದರು.
ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಅನಿವಾರ್ಯವಾಗಿ 144 ಸೇಕ್ಷನೆ ಜಾರಿ ಮಾಡಿದೆ, ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 144 ಸೆಕ್ಷನೆ ಜಾರಿ ಮಾಡಿದ್ದು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲಾ ಧೈರ್ಯವಾಗಿ ವಿದ್ಯಾರ್ಥಿಗಳು ಶಾಲೆಗೆ ಬನ್ನಿ ಎಂದು ಮನವಿ ಮಾಡಿದರು.
ಕಾಂಗ್ರೇಸ್‍ನ ಮುಖಂಡರನ್ನು ನಾನು ಕೇಳಲು ಬಯಸುತ್ತೇನೆ ಎಂದ ರೇಣುಕಾಚಾರ್ಯ ನೀವು ಕಾಂಗ್ರೇಸ್ ಅಧಿಕಾರಿದಲ್ಲಿದ್ದಾಗ ಜಾತಿ ಜಾತಿಗಳ ನಡುವೆ ಸಂಘರ್ಷ ಬಿತ್ತಿ, ಧರ್ಮ ಒಡೆಯುವ ಕೆಲಸ ಮಾಡಿ, ಓಟ್ ಬ್ಯಾಂಕ್ ರಾಜಕರಾಣ ಮಾಡಿದ್ದಕ್ಕೆ ಜನ ನಿಮಗೆ ತಕ್ಕ ಪಾಠ ಕಲಿಸಿದ್ದರು ಎಂದ ರೇಣುಕಾಚಾರ್ಯ, ನನ್ನನ್ನು ಸೇರಿದಂತೆ ಎಲ್ಲರೂ ಶಿಕ್ಷಣ ಸಂಸ್ಥೆಯ ಹೊರಗಡೆ ರಾಜಕಾರಣ ಮಾಡೋಣ, ಶಿಕ್ಷಣ ಸಂಸ್ಥೆಯಲ್ಲಿ ರಾಜಕಾರಣ ಮಾಡುವುದು ಬೇಡ ಎಂದರು.