ಹೊನ್ನಾಳಿ: ತ್ರಿಸದಸ್ಯ ಪೀಠದ ಮಧ್ಯಂತರÀ ತೀರ್ಪುನ್ನು ನಾವು ಗೌರವಿಸಬೇಕು. ಸಮವಸ್ತ್ರವು ಯಾವುದೇ ಧರ್ಮದ ಸಂಕೇತವಲ್ಲ. ಇಲ್ಲಿ ಮೇಲು ಕೀಳು ಎಂಬ ಭಾವನೆಯು ವಿದ್ಯಾರ್ಥಿಗಳಲ್ಲಿ ಮೂಡಿಸುವುದಿಲ್ಲ. ಶಿಕ್ಷಣದಲ್ಲಿ ಧರ್ಮದ ಹೆಸರಲ್ಲಿ ರಾಜಕಾರಣ ಮಾಡವುದು ಸಲ್ಲದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಚಾರ್ಯ ಹೇಳಿದರು.
ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ಸೋಮವಾರ ಬೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿಚಾರವಾಗಿ ಜಾಗೃತಿ ಮೂಡಿಸಿ ಮಾತನಾಡಿದರು.
ಭಾರತ ದೇಶವು ಜಾತ್ಯಾತೀತ ರಾಷ್ಟ್ರ ಇಲ್ಲಿ ಯಾವುದೇ ಧರ್ಮ, ಜಾತಿ, ಭಾಷೆ, ಆಚಾರ ವಿಚಾರಗಳಿಗೆ ಅವರದ್ದೇ ಆದ ಮಹತ್ವ ಇದೆ. ಆದರೆ ಶಾಲೆಗಳಲ್ಲಿ ಬಂದರೆ ಎಲ್ಲಾರು ಸಮಾನರು. ನಾವು ಭಾರತಾಂಬೆಯ ಮಕ್ಕಳು. ನಿನ್ನೆಯ ವರೆಗೆ ಸ್ನೇಹಿತರಂತೆ ಇದ್ದ ನಾವು ಈ ಸಣ್ಣ ವಿಚಾರದಿಂದ ಮನಃಸ್ತಾಪ ಉಂಟಾಗಿದೆ. ಇದು ದೂರವಾಗಬೇಕಾಗಿದೆ. ಹಿಂದೂ, ಮುಸ್ಲೀಂ, ಕೈಸ್ತರೆಲ್ಲರೂ ಒಂದೇ ಎಂಬ ತತ್ವದಲ್ಲಿ ಜೀವಿಸೋಣ ಎಂದರು.
ಶಿಕ್ಷಣ ಮುಖ್ಯವೋ, ಸಂಘರ್ಷ ಮುಖ್ಯವೋ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದಾಗ ಶಿಕ್ಷಣವೇ ಮುಖ್ಯ ಎಂದು ವಿದ್ಯಾರ್ಥಿಗಳು ಒಕ್ಕೂರಲಿನಿಂದ ಹೇಳಿದರು. ತಂದೆ ತಾಯಿಗಳು ಸಾಲ ಸೋಲ ಮಾಡಿ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ಶಾಲೆಗೆ ಕಳುಹಿಸುತ್ತಾರೆ. ಅದ್ದರಿಂದ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ನೀಡಿ, ಪೋಷಕರ ಆಶಯವನ್ನು ಸಕಾರಗೊಳಿಸಬೇಕು ಎಂದರು.
ಹೊನ್ನಾಳಿ ಉಪವಿಭಾಗಾಧಿಕಾರಿ ತಿಮ್ಮಪ್ಪ ಹುಲ್ಮನಿ ಮಾತನಾಡಿ, ನಾಡಗೀತೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಎಂದು ದಿನನಿತ್ಯ ಹೇಳುತ್ತೇವೆ. ಅದರಂತೆ ನಾವು ಜೀವಿಸಬೇಕು. ಕೋರ್ಟ್‍ನ ಆದೇಶವನ್ನು ಗೌರವಿಸಿ ಪಾಲಿಸಬೇಕು. ಕೊರೊನಾ ಹೊಡೆತದ ನಡುವೆ ಶಾಲೆಯು ಈಗ ತಾನೆ ಆರಂಭವಾಗಿದೆ. ವಿದ್ಯಾರ್ಥಿಗಳು ತರಗತಿಯಲ್ಲಿ ಪಾಠ ಕೇಳಿ ಭಾರತದ ಭವಿಷ್ಯದ ಉತ್ತಮ ಪ್ರಜೆಗಳಾಗಿ ಎಂದು ಕರೆಕೊಟ್ಟರು.
ಈ ಸಂದರ್ಭದಲ್ಲಿ ಡಿವೈಎಸ್‍ಪಿ ಡಾ.ಸಂತೋಷ್ ಕುಮಾರ್, ದಂಡಾಧಿಕಾರಿ ಬಸನಗೌಡ ಕೊಟೂರು, ಸಿಪಿಐ ಟಿ.ವಿ ದೇವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಇ ರಾಜೀವ್, ತಾಪಂ ಆಡಳಿತಾಧಿಕಾರಿ ರಾಮ ಭೋವಿ, ಪಿಎಸ್‍ಐ ಬಸವನ ಗೌಡ ಬಿರಾದಾರ್, ಪುರಸಭೆ ಮಾಜಿ ಅಧ್ಯಕ್ಷ ಕೆ.ವಿ ಶ್ರೀಧರ್, ಭಾರತೀಯ ವಿದ್ಯಾ ಸಂಸ್ಥೆಯ ನಿರ್ದೇಶಕ ಹಾಲೇಶ್ ಕುಂಕೋದ್, ಮುಖ್ಯೋಪಾಧ್ಯಾಯನಿ ಜೆ.ದೇವಿರಮ್ಮ, ಮುಖ್ಯ ಶಿಕ್ಷಕ ತಿಮ್ಮೇಶ್.ಆರ್, ದೈಹಿಕ ಶಿಕ್ಷಕರಾದ ರವಿ, ಶಿವಲಿಂಗಪ್ಪ, ಶಿಕ್ಷಕ ಗಿರೀಶ್ ಎನ್.ಎಂ ಇದ್ದರು.
ಬಾಕ್ಸ್
ಸಾಮಾಜೀಕ ಜಾಲ ತಾಣಗಳನ್ನು ಬಳಸಿಕೊಂಡು ಮೋಸ ಮಾಡುವವರು ಜಾಸ್ತಿಯಾಗುತ್ತಿದ್ದಾರೆ. ಪೋನ್ ಮಾಡಿ ನಿಮ್ಮಗೆ ಬಹುಮಾನ ಬಂದಿದೆ. ನಿಮ್ಮ ನಂಬರ್ ಬಹಳಷ್ಟು ಹಣ ಲಾಟರಿ ಮೂಲಕ ಬಂದಿದೆ ಎಂಬಿತ್ಯಾದಿಯಾಗಿ ಮಾಹಿತಿ ನೀಡುತ್ತಾ, ನಿಮ್ಮ ಮೊಬೈಲ್ ನಂಬರ್‍ಗೆ ಬಂದ ಒಟಿಪಿ ಪಡೆದು ಬ್ಯಾಂಕ್ ಲೂಟಿ ಮಾಡುವ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಿರಬೇಕು.
ಹೊನ್ನಾಳಿ ಪಿಎಸ್‍ಐ ಬಸವನ ಗೌಡ ಬಿರಾದಾರ್.
ಹೊನ್ನಾಳಿ ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಸಮವಸ್ತ್ರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.