ಬುಡಕಟ್ಟು ಸಮುದಾಯದ ಜನರಲ್ಲಿ ಆತ್ಮಸ್ಥೈರ್ಯ ತುಂಬುವ
ಕಾರ್ಯ ಮಾಡಿದವರು ಸಂತ ಸೇವಾಲಾಲ್ ಮಹಾರಾಜರು ಎಂದು ಜಿಲ್ಲಾ
ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ವಿಜಯ
ಮಹಾಂತೇಶ್ ದಾನಮ್ಮನವರ್ ಅವರು ಹೇಳಿದರು.
     ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಕನ್ನಡ ಮತ್ತು ಸಂಸ್ಕøತಿ
ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ
ಮಂಗಳವಾರ ಸರಳವಾಗಿ ಆಯೋಜಿಸಲಾಗಿದ್ದ ಸಂತ ಸೇವಾಲಾಲ್
ಮಹಾರಾಜರ 283ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ
ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
     ದೇಶ ಕಂಡ ಹಲವಾರು ಸಾಧು-ಸಂತರಲ್ಲಿ ಸೇವಾಲಾಲ್
ಮಹಾರಾಜರು ಒಬ್ಬರು. ಧ್ಯಾನ. ಭಕ್ತಿ. ತಪ್ಪಸ್ಸು ಮುಖಾಂತರ
ಆಧ್ಯಾತ್ಮಿಕ ಕ್ಷೇತ್ರಕ್ಕೆ ಜೀವನವನ್ನೇ ಮುಡಿಪಾಗಿಟ್ಟರು. ಬುಡಕಟ್ಟು
ಜನರಲ್ಲಿ ಧೈರ್ಯ, ಸಾಹಸ, ಆತ್ಮಸ್ಥೈರ್ಯ ಮತ್ತು ಆತ್ಮಗೌರವ
ತುಂಬುವ ಕಾರ್ಯ ಮಾಡಿದ ಅವರು, ಜನರಲ್ಲಿ
ಮೂಢನಂಬಿಕೆಗಳನ್ನು ತೊಡೆದುಹಾಕಿ ಸನ್ಮಾರ್ಗದತ್ತ
ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು. ಅವರ
ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜವನ್ನು
ಒಗ್ಗೂಡಿಸಲು ಅನುಕೂಲವಾಗಲಿದೆ  ಎಂದು ಸಿಇಒ ಡಾ. ವಿಜಯ ಮಹಾಂತೇಶ್
ಹೇಳಿದರು.
     ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಅಪರ
ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಸಮಾಜ ಕಲ್ಯಾಣ ಇಲಾಖೆ ಉಪ
ನಿರ್ದೇಶಕಿ ರೇμÁ್ಮ ಕೌಸರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ
ಸಹಾಯಕ ನಿರ್ದೇಶಕ ರವಿಚಂದ್ರ, ಡಿಯುಡಿಸಿ ಯೋಜನಾ ನಿರ್ದೇಶಕಿ
ನಜ್ಮಾ, ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಯಶವಂತ ಸರ
ದೇಶಪಾಂಡೆ, ಅಡ್ಡೆಂಡ ಕಾರ್ಯಪ್ಪ, ಬಂಜಾರ ಸಮುದಾಯದ
ಮುಖಂಡ ಕುಬೇರನಾಯ್ಕ್ ಸೇರಿದಂತೆ ಇತರರು ಸಮಾರಂಭದಲ್ಲಿ
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *