ಹೊನ್ನಾಳಿ,16: ಭದ್ರಾನಾಲಾ ತಟದ ವಿಸ್ತಿರ್ಣದಲ್ಲಿರುವ ಚಿಕ್ಕಗ್ರಾಮವಾದರೂ ವ್ಯವಸಾಯ ಕ್ಷೇತ್ರ ಮತ್ತು ಎಲ್ಲಾ ರಂಗದಲ್ಲೂ ನೌಕರಿ ಪಡೆದು ಹೆಸರುವಾಸಿಯಾದ ಗ್ರಾಮ ಎಂದರೆ ಯಕ್ಕನಹಳ್ಳಿ,ಯಾಗಿದೆ ಸುಂಸ್ಕøತಿಯಲ್ಲೂ ಈ ಭಾಗದಲ್ಲಿ ಹೆಸರು ಪಡೆದಿದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ದೀಪಾಜಗದೀಶ್ ಹೇಳಿದರು.
ತಾಲೂಕಿನ ಯಕ್ಕನಹಳ್ಳಿ ಗ್ರಾಮ ಶ್ರೀ ಮಾಯಾಂಬಿಕದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ವತಿಯಿಂದ “ಭರತ ಹುಣ್ಣಿಮೆ ಪ್ರಯುಕ್ತ” ಮಾಯಾಂಬಿಕ ದೇವಿ ಅಡ್ಡಪಲ್ಲಕ್ಕಿ ಜಾತ್ರಾ ಮಹೋತ್ಸವ ಹಾಗೂ ಗ್ರಾಮ ಪಂಚಯ್ತಿ ಜನನಪ್ರತಿನಿದಿಗಳು, ಜಿ.ಪಂ ಸದಸ್ಯೆ, ಗ್ರಾಮದ ವಿವಿಧ ದೇವಾಸ್ಥಾನಗಳ ಸಮಿತಿ ಅಧ್ಯಕ್ಷರು, ಯರೇಹಳ್ಳಿ ವ್ಯವಸಾಯ ಸಹಕಾರ ಸಂಘದ ಆಡಳಿತ ಮಂಡಳಿಯವರಿಗೆ ಮತ್ತು ಗ್ರಾಮದ ವಿವಿಧ ಜಾನಾಂಗದ ನಿವೃತ್ತಿಯಾದ ನೌಕರ ವರ್ಗದವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದರು.
ಅಲ್ಪ-ಸ್ವಲ್ಪ ಜಮೀನಿನಲ್ಲೇ ಶ್ರಮವಹಿಸಿ ದುಡಿದು ತಮ್ಮ ಜೀವನ ಸಾಗಿಸುತ್ತಾ ತಮ್ಮ ಮಕ್ಕಳನ್ನು ಸಿ. ದರ್ಜೆ ಯಿಂದ ವೈಧ್ಯಕಿಯ ಮತ್ತು ಡಿಸಿ ವರೆಗೂ ನೌಕರಿ ತೆಗೆದುಕೊಂಡ ಯಕ್ಕನಹಳ್ಳಿ ಗ್ರಾಮವಾಗಿದೆ ಇತರೆ ಗ್ರಾಮಕ್ಕೆ ಹೋಲಿಸಿದರೆ ಜಿಲ್ಲೆಗೆ ಮಾಧರಿಯಾಗಿದೆ ಎಂಧು ಶ್ಲಾಘನೆ ವ್ಯಕ್ತಪಡಿಸದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ದಯಾನಂದ ಮಾತನಾಡಿ ಭೌಗಳಿಕವಾಗಿ ತಿರುಪತಿಯನ್ನು ಶ್ರೀಮಂತ ಪ್ರದೇಶ ಎಂದು ಹೇಳುತ್ತಾರೆ ಆದರೆ ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮಕ್ಕೆ ಮೇಲೆ ಗುಡ್ಡ ಮತ್ತು ಕೆಳಗೆ ಭಾಗ ವಿಶಾಲ ಪ್ರಧೆಶ ಮತ್ತು ವ್ಯವಸಾಯ ಭೂಮಿ ವಿರುವುದರಿಂದ ವಾಸ್ತು ಪ್ರಧೇಶ ಎಂದು ಅಕ್ಕ-ಪಕ್ಕ ಗ್ರಾಮದವರು ಹೋಗಳುತ್ತಾರೆ,ಗ್ರಾಮದಲ್ಲಿ ಜಾತಿ ಎನ್ನದೆ ಏಕತೆಯಿಂದ ಸಹೋದರರಂತೆ ಇರುವಾಗ ಅನೇಕ ಚುನಾವಣೆಗಳು ನಡೆದರೂ ಗ್ರಾಮದಲ್ಲಿ ಸಹೋದರರು ಮತ್ತು ಬಂಧುಗಳಂತೆ ಅಣ್ಣ-ತಮ್ಮರಂತೆ ಜೀವಿಸುತ್ತಾ ಸಂಸ್ಕøತಿ ಮತ್ತು ಧರ್ಮಕ್ಕೆ ಜಿಲ್ಲೆಗೆ ಹೆಸರುವಾಸಿಯಾಗಿದೆ ಎಂದರು.
ಗ್ರಾಮದ ನಿವೃತ್ತ ದಾವಣಗೆರೆ ಪಿಡ್ಲೂಡಿ ಸಹಾರ್ಯಕ ಕಾರ್ಯನಿರ್ವಹಕ ಇಂಜಿನಿಯರ ಎಸ್.ಎಲ್. ಅಂನದಪ್ಪ ಮಾತನಾಡಿ ಇತ್ತಿಚಿನ ದಿನಗಳಲ್ಲಿ ಚುನಾವಣೆ ಮತ್ತು ಜಾತಿ ಎಂದು ಗ್ರಾಮಗಳಲ್ಲಿ ಆಶಾಂತಿ ಮೂಡುತ್ತದೆ ಆದರೆ ಮಾಯಮ್ಮ ದೇವಿ ಸಮಿತಿಯಯವರು ತಮ್ಮ ಸಮಾಜದವರನ್ನು ಗುರುತಿಸಿ ಇತರೆ ಸಮಾಜದ ಜೊತೆಯಿರುವ ನಿವೃತ್ತ ನೌಕರರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಇತರೆ ಗ್ರಾಮಕ್ಕೆ ಮಾಧರಿ ಎಂಬುದನ್ನು ತೋರಿಸಿಕೊಟ್ಟಿದೆ, ಜಾತಿ ಬೇದ ಎನ್ನದೆ ದ್ವೇಷ,ಅಸೂವೆ ಮರೆತು ಗ್ರಾಮದ ಅಭಿವೃದ್ದಿಗೆ ಕಂಕಣಬದ್ದರಾಗಬೇಕು ಎಂದರು.
ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು, ಗ್ರಾಮದ ವಿವಿಧ ಮನೆತನದ ಮುಖಂಡರಿಗೆ ಮಹಿಳೆಯರಿಗೆ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸದಸ್ಯರಿಗೆ ಜಿ.ಪಂ ಸದಸ್ಯೆರಿಗೆ ಗ್ರಾಮದ ವಿವಿಧ ದೇವಾಸ್ಥಾನಗಳ ಸಮಿತಿ ಅಧ್ಯಕ್ಷರು, ಯರೇಹಳ್ಳಿ ವ್ಯವಸಾಯ ಸಹಕಾರ ಸಂಘದ ಆಡಳಿತ ಮಂಡಳಿಯವರಿಗೆ ಮತ್ತು ಗ್ರಾಮದ ವಿವಿಧ ಜಾನಾಂಗದ ನಿವೃತ್ತಿಯಾದ ನೌಕರ ವರ್ಗದವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿಸಿದರು.
ಸಭೆಯ ಅಧ್ಯಕ್ಷತೆಯನ್ನು ಶ್ರೀ ಮಾಯಾಂಬಿಕದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಆರ್.ಶಂಭುಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು ಸಭೆಯಲ್ಲಿ ನಿವೃತ್ತ ಉಪನ್ಯಾಸಕ್ಕ ಜಿ.ಎಸ್.ರುದ್ರಪ್ಪ,ನಿವೃತ್ತ ಶಿಕ್ಷ ಎಂ.ತಿಪ್ಪಣ್ಣ,ಶಿವಕುಮಾರಸ್ವಾಮಿ,ರೇವಣಸಿದ್ದಪ್ಪ,ಮಹೇಶ್ವರಪ್ಪ,ಜಯಪ್ಪ ಬಸವರಾಜಪ್ಪ,ಹಾದಿಮನೆ ರಾಜಣ್ಣ ಮಾತನಾಡಿದರು.ತುಮಕುರು ಗೃಹಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರು ಎಸ್.ಎಲ್.ಹಾಲೇಶಪ್ಪ,ದೊಡ್ಡರಂಗಪ್ಪಮಪರಮೇಶ್ವರಪ್ಪ,ಯು.ಆರ್.ಸತೀಶ್,ಯು.ಆರ್.ಅಶೋಕ್,ಬಸವರಾಜ,ರಾಜಪ್ಪ,ತಿಪ್ಪೇಶ್,ಮಂಜು,ಮಹೇಶ್ವರಪ್ಪ ಸಮಿತಿ ಸದಸ್ಯರು ಭಕ್ತರು ಇದ್ದರು.