ನ್ಯಾಮತಿ;- ಪ್ರಬ್ರವರಿ 17 ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 2021 /22 ಸಾಲಿನ 14 ಮತ್ತು 15 ಹಣಕಾಸು ಯೋಜನೆಯ 1& 2ನೇ ಹಂತದ ಲೆಕ್ಕಪರಿಶೋಧನೆ ಮತ್ತು ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಅನಿತಾ ರವರು ಮತ್ತು ಉಪಾಧ್ಯಕ್ಷರಾದ ನಾಗೇಶ್ ನಾಯ್ಕರವರ ನೇತೃತ್ವದಲ್ಲಿ ಸಭೆಯು ನಡೆಯಿತು.
ತಾಲೂಕು ಮಟ್ಟದ ಅಧಿಕಾರಿಯಾದ ಸಂಗಮೇಶ ಎಸ್ ಎಂ ಸಹಾಯಕ ನಿರ್ದೇಶಕರು ತಾಲೂಕು ಪಂಚಾಯಿತಿ ನ್ಯಾಮತಿ ಇವರು ಮಾತನಾಡಿ, ಸಾಮಾಜಿಕ ಸಂಶೋಧನೆಯ ಉದ್ದೇಶವನ್ನು ಸರ್ಕಾರದಿಂದ ಬರುವ ಯೋಜನೆಗಳನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂದು 1ವರ್ಷದ 14 ಮತ್ತು 15ನೇ ಹಣಕಾಸು ಯೋಜನೆ ಫಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಂಬಂಧಪಟ್ಟ ಹಳ್ಳಿಗಳಲ್ಲಿ ಬಚ್ಚಲ ಗುಂಡಿ ನಿರ್ಮಾಣ, ಕುಡಿಯುವ ನೀರು ಯೋಜನೆ ,ಶಾಲಾ ಕಾಂಪೌಂಡ್ ನಿರ್ಮಾಣ, ಕೃಷಿ ಇಲಾಖೆ ಸಂಬಂಧಪಟ್ಟ ಕಾಮಗಾರಿ ಕೃಷಿಹೊಂಡ ನಿರ್ಮಾಣ ,ಬದು ನಿರ್ಮಾಣ ಮತ್ತು ತೋಟಗಾರಿಕೆ ಇಲಾಖೆಗೆ ಸಂಬಂಧಪಟ್ಟ ರೈತರು ಪಡೆದುಕೊಂಡ ಯೋಜನೆಗಳನ್ನು ಸವಿಸ್ತಾರವಾಗಿ ಈ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿ ತಿಳಿಸಿದರು.
ಉಪಸ್ಥಿತಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅನಿತಾ ರಾಜಪ್ಪ ಉಪಾಧ್ಯಕ್ಷರಾದ ನಾಗೇಶ್ ನಾಯಕ್ , ಮುಸ್ಯನಾಳ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ್ ನಾಯ್ಕ, ಮಾಜಿ ಉಪಾಧ್ಯಕ್ಷರಾದ ಪ್ರವೀಣ್ ಗಂಜಿನಹಳ್ಳಿ, ನಟರಾಜ್, ಜಯಶ್ರೀ ಬೈರಪ್ಪ, ಗೋವಿಂದರಾಜ್, ಹಾಗೂ ಬಿಜೆಪಿ ಗ್ರಾಮ ಪಂಚಾಯಿತಿ ಸದಸ್ಯರುಗಳು ತಾಲೂಕು ಮಟ್ಟದ ಅಧಿಕಾರಿ ವರ್ಗದವರು ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.