ಹೊನ್ನಾಳಿ-ಪೆ-17 ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕವಿ ಚೆನ್ನವೀರ ಕಣವಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮುರಿಗೆಪ್ಪ ಗೌಡ ಮಾತನಾಡಿ, ಕರ್ನಾಟಕ ನಾಡಿನ ಶ್ರೇಷ್ಠ ಸಾಹಿತ್ಯ ಲೋಕದ ದಿಗ್ಗಜರಾಗಿದ್ದ ಕನ್ನಡಿಗರ ನೆಚ್ಚಿನ ಕವಿ ನಾಡೋಜ ಕವಿ ವಿಧಿವಶರಾಗಿದ್ದು ಕನ್ನಡಿಗರೆಲ್ಲರಿಗೂ ದುಃಖ ತಂದಿದೆ. ಶ್ರೀಯುತರು 28 /6/1928ರಲ್ಲಿ ಗದಗ ಜಿಲ್ಲಾ ಹೊಂಬಳದಲ್ಲಿ ತಂದೆ ಸಕ್ಕೆರಪ್ಪ ,ತಾಯಿ ಪಾರ್ವತಮ್ಮ ಉದರದಲ್ಲಿ ಜನಿಸಿದರು. 93 ವರ್ಷದ ಜೀವನವನ್ನು ಸಾಗಿಸಿ ಚಿರನಿದ್ರೆಗೆ ಜಾರಿದ್ದಾರೆ, ಬಾರದ ಲೋಕಕ್ಕೆ ಅವರು ಬಿಟ್ಟುಹೋದ ಆಸ್ತಿ ಅಪಾರವಾಗಿದೆ. ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಂಗ ವಿಭಾಗದ
ಕಾರ್ಯದರ್ಶಿಯಾಗಿ,ಅದೇ ವಿಭಾಗದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ .ಇವರು ಹಲವಾರು ಕವನ ಸಂಕಲನಗಳನ್ನು ಹೊರತಂದಿದ್ದಾರೆ, ಮುಖ್ಯವಾಗಿ ಭಾವಜೀವಿ, ಆಕಾಶಬುಟ್ಟಿ ,ಮಧುಚಂದ್ರ ,ದಾರಿದೀಪ ,ನೆಲಮುಗಿಲು, ಜೀವ ಧ್ವನಿ ,ಇತ್ಯಾದಿ ಕವನಗಳನ್ನು ರಚಿಸಿದ್ದಾರೆ .ಹೊನ್ನಾಳಿ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಅವರ ಬಗ್ಗೆ ಹೇಳುತ್ತ ಅವರ ವಿಶ್ವಭಾರತಿ ಕನ್ನಡದಾರತಿ ಎಂಬ ನಾಡಗೀತೆಯನ್ನು ಹಾಡಿಸಿದ್ದಲ್ಲದೆ, ಆಕಾಶ ಬುಟ್ಟಿ ,ಎಂಬ ಕವನ ಸಂಕಲನದಿಂದ ಆರಿಸಿಕೊಂಡ ಮಾತು ಎಂಬ ಕವಿತೆಯನ್ನು ಹೇಳುತ್ತಾ, ನಾವು ಆಡುವ ಮಾತು ಹೀಗಿರಲಿ ಗೆಳೆಯ ,ಮೃದು ವಚನ ಮೂರು ಲೋಕ ಗೆಲ್ಲುವುದು ತಿಳಿಯ ,ಎಂದು ಹಾಡುತ್ತ ಅಗಲಿದ ಕಣವಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದರು .
ಹಿರಿಯ ಸಾಹಿತಿ ಸಂಗನಾಳ ಮ ಠರವರು ಮಾತನಾಡಿ ಚೆನ್ನವೀರ ಕಣವಿಯವರು ವಿಧಿವಶರಾಗಿದ್ದು ಸಾಹಿತ್ಯಲೋಕಕ್ಕೆ ಬರಸಿಡಿಲು ಬಡಿದಂತಾಗಿದೆ ಎಂದು ಹೇಳಿದರು.
ಸಾಹಿತ್ಯ ಪರಿಷತ್ತಿನ ಸದಸ್ಯರಾದ ಶಾರದಾ ಕಣಗೋಟಗಿ ರವರು ಮಾತನಾಡಿ ಚನ್ನವೀರ ಕಣವಿ ಅವರ ವಿದ್ಯಾಭ್ಯಾಸದ ಬಗ್ಗೆ ಸಂಕ್ಷಿಪ್ತವಾಗಿ ಉತ್ತರಿಸಿದರು.
ಉಪಸ್ಥಿತಿಯಲ್ಲಿ ಕಸಾಪ ಅಧ್ಯಕ್ಷ ಮುರುಗಪ್ಪ ಗೌಡ ಕ ಶ ಸಾಪ ಅಧ್ಯಕ್ಷ ದೇವೇಂದ್ರ ಯ್ಯ ಹಿರಿಯ ಸಾಹಿತಿ ಸಂಗನಾಳ ಮಠ, ಶೇಖರಪ್ಪ, ಚಂದ್ರಪ್ಪ, ಗೋವಿಂದಪ್ಪ ,ಶಾರದಾ ಕಣ ಗೋಟಗಿ ,ಹೇಮಲತಾ,ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದರು.