ಹೊನ್ನಾಳಿ : ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಸರ್ವಾಂಗೀಣ ಅಭಿವೃದ್ದಿ ಮಾಡುವುದು ನನ್ನ ಕರ್ತವ್ಯವಾಗಿದೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ, ಉದ್ಘಾಟಿಸಿ ಮಾತನಾಡಿದರು.
ಅವಳಿ ತಾಲೂಕುಗಳನ್ನು ಮಾದರಿ ತಾಲೂಕುಗಳನ್ನಾಗಿ ಮಾಡ ಬೇಕೆಂಬ ಆಲೋಚನೆ ಇದ್ದು, ಆ ನಿಟ್ಟಿನಲ್ಲಿ ಅವಳಿ ತಾಲೂಕಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆಂದ ರೇಣುಕಾಚಾರ್ಯ, ನಾನು ಅವಳಿ ತಾಲೂಕಿನ ಜನರ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಕೂಡ ಅವಳಿ ತಾಲೂಕಿನ ಅಭಿವೃದ್ದಿಗೆ ಕೋಟ್ಯಾಂತರ ರೂಪಾಯಿ ಅನುದಾನ ತಂದು ಅವಳಿ ತಾಲೂಕುಗಳನ್ನು ಅಭಿವೃದ್ದಿ ಮಾಡುತ್ತಿದ್ದೇನೆಂದ ರೇಣುಕಾಚಾರ್ಯ ಅವರು, ಕೊಟ್ಟ ಮಾತಿನಂತೆ ಅವಳಿ ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆ ಪ್ರಗತಿಯಲ್ಲಿದ್ದು ಇನ್ನೊಂದು ವರ್ಷದ ಒಳಗಾಗಿ ಅವಳಿ ತಾಲೂಕಿನ ಎಲ್ಲಾ ಕೆರೆಗಳು ತುಂಬಲಿವೆ ಎಂದರು.
ಈಗಾಗಲೇ 528 ಕೋಟಿ ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ ಎಂದ ರೇಣುಕಾಚಾರ್ಯ, ಅವಳಿ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಕೋಟ್ಯಾಂತರ ರೂಪಾಯಿ ಅನುದಾನ ಹಾಕಿ ಗ್ರಾಮಗಳನ್ನು ಅಭಿವೃದ್ದಿ ಮಾಡಲಾಗಿದೆ ಎಂದರು.
ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ : ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ 50 ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ಕಾಮಗಾರಿ ಉದ್ಘಾಟಿಸಿ ಶಾಸಕರು, ಬೇಲಿಮಲ್ಲೂರು ಗ್ರಾಮದಲ್ಲಿ 15 ಕೋಟಿಗೂ ಹೆಚ್ಚಿನ ಅನುದಾನ ಹಾಕಿ ಗ್ರಾಮವನ್ನು ಅಭಿವೃದ್ದಿ ಮಾಡಲಾಗಿದೆ ಎಂದರು.ಕೋಟೆಮಲ್ಲೂರು ಗ್ರಾಮದಲ್ಲಿ 45 ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ಕಾಮಗಾರಿ ಉದ್ಘಾಟಿಸಿ, 10.99 ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕರು ಕೋಟೆಮಲ್ಲೂರು ಗ್ರಾಮಕ್ಕೆ 2 ಕೋಟಿಗೂ ಹೆಚ್ಚಿನ ಅನುದಾನ ಹಾಕಿ ಗ್ರಾಮವನ್ನು ಅಭಿವೃದ್ದಿ ಮಾಡಲಾಗಿದೆ ಎಂದರು. ಹಿರೇಗೋಣಿಗೆರೆ ಗ್ರಾಮದಲ್ಲಿ 31 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿ ಉದ್ಘಾಟಿಸಿ, ಏಳು ಲಕ್ಷ ಮೌಲ್ಯದ ಶುದ್ದನೀರಿನ ಘಟಕಕ್ಕೆ ಗುದ್ದಲಿಪೂಜೆ ನೆರವೇರಿಸಿ ಶಾಸಕರು, ಹಿರೇಗೋಣಿಗೆರೆ ಕೆರೆ ದುರಸ್ಥಿಗೆ ಒಂದು ಕೋಟಿ ಮೀಸಲಿಟ್ಟಿದ್ದು ಕೆರೆ ತುಂಬಿಸಲು ಕೂಡ ಹಣ ಮೀಸಲಿಡಲಾಗಿದೆ ಎಂದರು. ಮಾಸಡಿ ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಶಾಸಕರು, ಗ್ರಾಮದಲ್ಲಿ ಇದೂವರೆಗೂ ಎರಡು ಕೋಟಿ ವೆಚ್ಚದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು. ಸಿಂಗಟಗೆರೆ ಗ್ರಾಮದಲ್ಲಿ 20 ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ರೇಣುಕಾಚಾರ್ಯ, ಕುಂದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಹಾಗೂ ಆರ್ಚ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರಲ್ಲದೇ ಗ್ರಾಮದಲ್ಲಿ 50 ಕೋಟಿಗೂ ಹೆಚ್ಚಿನ ಅನುದಾನ ಹಾಕಿ ಗ್ರಾಮವನ್ನು ಅಭಿವೃದ್ದಿ ಮಾಡಲಾಗಿದೆ ಎಂದರು.
ಈ ಸಂದರ್ಭ ಎಸ್ಸಿ ಮೋರ್ಚ ತಾಲೂಕು ಅಧ್ಯಕ್ಷರಾದ ಬೇಲಿಮಲ್ಲೂರು ಉಮೇಶ್, ಬೇಲಿಮಲ್ಲೂರು ಗ್ರಾ.ಪಂ ಸದಸ್ಯರಾದ ಪೂಜಾರ್ ಹನುಮಂತಪ್ಪ ಸೇರಿಂದತೆ ಮುಖಂಡರಾದ ಹಾಲೇಶಪ್ಪ, ಚಂದ್ರು, ಜಯಪ್ಪ, ಸಿದ್ದಪ್ಪ, ಪ್ರವೀಣ್ ಸೇರಿದಂತೆ ಗ್ರಾಮಸ್ಥರಿದ್ದರು.