ಮೈಸೂರಿನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು
ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ
ವತಿಯಿಂದ ‘ಸಂಕಲ್ಪ’ ಯೋಜನೆ ಅಡಿಯಲ್ಲಿ ಪ್ರತಿಭಾನ್ವಿತರಿಗೆ ಕಿರು
ಉದ್ಯಮ ಪ್ರಾರಂಭಿಸಲು ಅಗತ್ಯವಿರುವ ಸೂಕ್ತ ಮಾರ್ಗದರ್ಶನ
ಹಾಗೂ ಉತ್ತೇಜನ  ಕಾರ್ಯಕ್ರಮವನ್ನು ಕರ್ನಾಟಕ ಕೌಶಲ್ಯ
ಅಭಿವೃದ್ಧಿ ನಿಗಮವು ಮೈಸೂರಿನ ಸ್ಫೂರ್ತಿ ಪರ್ಫಾರ್ಮನ್
ಸಲ್ಯೂಷನ್ಸ್ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದೆ.
    ಕಿರು ಉದ್ಯಮ ಪ್ರಾರಂಭಿಸಲು ತಳಮಟ್ಟದ ಕಿರು
ಉದ್ಯಮಿಗಳಿಗೆ ವಿವಿಧ ಕೌಶಲ್ಯಗಳನ್ನು ಕಲಿಯಲು ಮತ್ತು
ವ್ಯವಹಾರ ಜ್ಞಾನವನ್ನು ಪಡೆಯಲು ಸಹಾಯ ಮಾಡುವುದು
ಸರ್ಕಾರದ ಈ ವಿನೂತನ ಕಾರ್ಯಕ್ರಮ ಉದ್ದೇಶವಾಗಿದೆ.
   ಕಿರು ಉದ್ಯಮಿಗಳಿಗೆ ಬೇಕಾಗುವ ಜ್ಞಾನ, ಕೌಶಲ್ಯ ಮತ್ತು
ವ್ಯವಹಾರ ಜ್ಞಾನವನ್ನು ಪಡೆಯಲು ಅಗತ್ಯವಿರುವ ತರಬೇತಿ,
ಮಾರ್ಗದರ್ಶನ ಮತ್ತು ಸಂಬಂಧಪಟ್ಟ ಸಂಸ್ಥೆಗಳಲ್ಲಿ
ನೋಂದಣಿ ಮಾಡಿಸಲು ಬೇಕಾಗುವ ಸಲಹೆಗಳನ್ನು ಹಾಗೂ ಬೇರೆ
ಬೇರೆ ಕ್ಷೇತ್ರಗಳಲ್ಲಿ ಅನುಭವವಿರುವ ಪರಿಣಿತರು ಮತ್ತು
ಮಾರ್ಗದರ್ಶಕರು ಉಚಿತವಾಗಿ ಮಾರ್ಗದರ್ಶನ ನೀಡಿ ಕಿರು
ಉದ್ಯಮಿಗಳು ಯಶಸ್ವಿ ಉದ್ಯಮಿಗಳಾಗಲು ಸಹಕರಿಸುತ್ತಾರೆ.
    ಈ ಕಿರು ಉದ್ಯಮಶೀಲತೆ ಕಾರ್ಯಕ್ರಮವು (ಎನ್‍ಇಪಿ) ತಳಮಟ್ಟದ
ಕಿರು ಉದ್ಯಮಿಗಳನ್ನು ಗುರುತಿಸಿ ಪೆÇ್ರೀತ್ಸಾಹಿಸಲು ಮತ್ತು
ಮಹಿಳೆಯರಿಗೆ ವಿಶೇಷ ಗಮನ ನೀಡುವ ಕಾರ್ಯಕ್ರಮವಾಗಿದೆ.
ಉದ್ಯಮಶೀಲತೆಯನ್ನು ಪ್ರಾರಂಭಿಸುವ ಪ್ರಕ್ರಿಯೆಯ
ಪ್ರತಿಯೊಂದು ಹಂತದಲ್ಲೂ ಎದುರಾಗುವ ಹಲವಾರು
ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
   ಈ ಕಾರ್ಯಕ್ರಮದಡಿಯಲ್ಲಿ ಉದ್ಯಮ ಪ್ರಾರಂಭಿಸಲು
ಸರ್ಕಾರದಿಂದ ಯಾವುದೇ ರೀತಿಯ ಸಹಾಯಧ ಇರುವುದಿಲ್ಲ.
ಕಾರ್ಯಕ್ರಮದಲ್ಲಿ ನೋಂದಣಿ ಮಾಡಿಕೊಂಡು ಭಾಗವಹಿಸಲು
ಯಾವುದೇ ರೀತಿಯಾದ ಶುಲ್ಕವಿರುವುದಿಲ್ಲ.
    ಈ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿಕೊಳ್ಳಲು ಹಾಗೂ
ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ: 9741501631  ಹಾಗೂ

ವೆಬ್‍ಸೈಟ್ ತಿತಿತಿ.ಞಚಿushಚಿಟಞಚಿಡಿ.ಛಿom/ಟಿeಠಿ/ ಅಥವಾ ಇ-ಮೇಲ್: ಟಿeಠಿಞsಜಛಿ@gmಚಿiಟ.ಛಿom
ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *