ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ವಿ.ವಿ. ಬೆಂಗಳೂರು, ಕೆಳದಿ
ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ,
ಶಿವಮೊಗ್ಗ ಸಹಯೋಗದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆ ದಾವಣಗೆರೆ
ಘಟಕದ ಎರಡನೆ ಮಹಡಿಯಲ್ಲಿ ವಿಧಾನಸಭಾ ಸದಸ್ಯರ ಸ್ಥಳೀಯ
ಪ್ರದೇಶಾಭಿವೃದ್ಧಿ ನಿಧಿಯಡಿ ನಿರ್ಮಿಸಿರುವ ಕಟ್ಟಡದ ಮೇಲ್ಛಾವಣೆ
ಕಾಮಗಾರಿ ಉದ್ಘಾಟನೆ ಮತ್ತು 5 ಹಾಗೂ 6 ನೇ ತಂಡದ ದೇಸಿ
ವಿದ್ಯಾರ್ಥಿಗಳಿಗೆ ಕೃಷಿ ವಿಸ್ತರಣಾ ಸೇವೆಯ ಡಿಪ್ಲೋಮಾ ಪದವಿ
ಪ್ರಮಾಣಪತ್ರ ವಿತರಣೆ ಸಮಾರಂಭ ಫೆ. 19 ರಂದು ಬೆಳಿಗ್ಗೆ 10
ಗಂಟೆಗೆ ಕೃಷಿ ತಂತ್ರಜ್ಞರ ಸಂಸ್ಥೆ, ಬಾಪೂಜಿ ಅತಿಥಿ ಗೃಹ ಪಕ್ಕ,
ಶಾಮನೂರು ರಸ್ತೆ, ದಾವಣಗೆರೆ ಇಲ್ಲಿ ನೆರವೇರಲಿದೆ.
ಕೃಷಿ ಸಚಿವ ಬಿ.ಸಿ. ಪಾಟೀಲ್ ಸಮಾರಂಭ ಉದ್ಘಾಟಿಸುವರು. ದಾವಣಗೆರೆ
ಉತ್ತರ ಕ್ಷೇತ್ರ ಶಾಸಕ ಎಸ್.ಎ. ರವೀಂದ್ರನಾಥ್, ಕೃಷಿ ಇಲಾಖೆ
ನಿರ್ದೇಶಕಿ ಸಿ. ನಂದಿನಿಕುಮಾರಿ, ಹೈದರಾಬಾದ್‍ನ ಮ್ಯಾನೇಜ್ ಸಂಸ್ಥೆ
ಡೈರೆಕ್ಟರ್ ಜನರಲ್ ಡಾ. ಪಿ. ಚಂದ್ರಶೇಖರ್, ನ್ಯಾಷನಲ್ ಇನ್‍ಸ್ಟಿಟ್ಯೂಟ್
ಫಾರ್ ಮೈಕ್ರೋ, ಸ್ಮಾಲ್ ಅಂಡ್ ಮೀಡಿಯಂ ಎಂಟರ್‍ಪ್ರೈಸಸ್ ನ
ಡೈರೆಕ್ಟರ್ ಜನರಲ್ ಡಾ. ಎಸ್. ಗ್ಲೋರಿ ಸ್ವರೂಪ, ಕೃಷಿ ತಂತ್ರಜ್ಞರ
ಸಂಸ್ಥೆ, ಬೆಂಗಳೂರು ಅಧ್ಯಕ್ಷ ಡಾ. ವಿ. ವೀರಭದ್ರಯ್ಯ, ಜಿ.ಪಂ. ಸಿಇಒ
ಡಾ. ವಿಜಯ ಮಹಾಂತೇಶ್ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು
ಭಾಗವಹಿಸುವರು ಎಂದು ಜಂಟಿಕೃಷಿ ನಿರ್ದೇಶಕರು ತಿಳಿಸಿದ್ದಾರೆ.