ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ
ಇವರು ಫೆ.19 ಹಾಗೂ 20 ರಂದು ದಾವಣಗೆರೆ ಜಿಲ್ಲೆಯಲ್ಲಿ
ಪ್ರವಾಸ ಕೈಗೊಳ್ಳಲಿದ್ದಾರೆ
ಫೆ.19 ರ ಸಂಜೆ 4.30ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ
7.30ಕ್ಕೆ ದಾವಣಗೆರೆಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ಫೆ.20
ಭಾನುವಾರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆಯಿಂದ ಹೊರಟು
10,20ಕ್ಕೆ ಹರಿಹರ ದ ಪಂಚಮಶಾಲಿ ಪೀಠದಿಂದ ಆಯೋಜಿಸಿರುವ
ತುಂಗಭದ್ರಾ ಆರತಿ ಪ್ರಯುಕ್ತ 108 ಯೋಗ
ಮಂಟಪಗಳಿಗೆ ಶಿಲಾನ್ಯಾಸ ಮತ್ತು ಸಾರ್ವಜನಿಕ
ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 12,30 ಕ್ಕೆ ಹರಿಹರದಿಂದ ಹೊರಟು ದಾವಣಗೆರೆಯ
ಎಸ್.ಎಸ್.ಕನ್ವೆನ್ಷನ್ ಹಾಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ
ಮಧ್ಯಾಹ್ನ 3.30 ಕ್ಕೆ ದಾವಣಗೆರೆಯಿಂದ ಹೊರಟು ಬೆಂಗಳೂರು
ತಲುಪಲಿದ್ದಾರೆ ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ
ಅಧಿಕಾರಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.