ಹೊನ್ನಾಳಿ-ಪೆ;-19- ತಾಲೂಕು ಮಾಸಡಿ ಗ್ರಾಮದಲ್ಲಿ ಇಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ತಾಲೂಕು ಆಡಳಿತ ಹಾಗೂ ತಾಲೂಕು ಮಟ್ಟದ ಅಧಿಕಾರಿ ಸಹಯೋಗದೊಂದಿಗೆ ಪ್ರತಿ ತಿಂಗಳು ಮೂರನೇ ಶನಿವಾರದಂದು ಇಂದು ಮಾಸಡಿ ಗ್ರಾಮದಲ್ಲಿ ವಾಸ್ತವ್ಯ ಕಾರ್ಯಕ್ರಮಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ ಪಿ ರೇಣುಕಾಚಾರ್ಯ ರವರು ಜ್ಯೋತಿಯನ್ನು ಬೆಳಗಿಸುವುದರ ಮುಖೇನ ಚಾಲನೆಯನ್ನು ಕೊಡಲಾಯಿತು.
ಈ ಕಾರ್ಯಕ್ರಮವು ಶಾಲಾ ಮಕ್ಕಳಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣವನ್ನು ತಾಲೂಕು ದಂಡಾಧಿಕಾರಿಗಳಾದ ಬಸನಗೌಡ ಕೋಟೂರ್ ರವರು ನೆರವೇರಿಸಿ , ಮಾತನಾಡಿ ಒಂದು ಮತ್ತು ಎರಡನೆಯ ಕೊರೊನಾ ಅಲೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ದೃಷ್ಟಿಯನ್ನಿಟ್ಟುಕೊಂಡು ಸರ್ಕಾರ ಇದನ್ನ ಪ್ರಾರಂಭ ಮಾಡಿತು.
ಜನರು ಕಚೇರಿಗಳಿಗೆ ಅಲೆದಾಡುವದನ್ನು ತಪ್ಪಿಸಿ ತಾಲೂಕ್ ಆಡಳಿತವೇ ಹಳ್ಳಿಗಳ ಕಡೆಗೆ ಬಂದು ಜನರ ಕಷ್ಟಗಳನ್ನು ಆಲಿಸುವಂತೆ ಆಗಬೇಕು ಎಂದು ಇಂತಹ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿಗಳ ಆದ ಹುಲ್ಲುಮನಿ ತಿಮ್ಮಣ್ಣ ರವರು ಮಾತನಾಡಿ, ಕಟ್ಟಕಡೆಯ ವ್ಯಕ್ತಿಗಳಿಗೆ ಸರ್ಕಾರದ ಯೋಜನೆಗಳು ಮಾನ್ಯ ಶಾಸಕರ ತಂಡದೊಂದಿಗೆ ಅಧಿಕಾರಿಗಳ ತಂಡವು ಜನರ ಸಮಸ್ಯೆಗಳ ಬಗ್ಗೆ ಸರ್ಕಾರದ ಯೋಜನೆಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳ ಬೇಕೆಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ವತಿಯಿಂದ ಪೋಷಣ್ ಅಭಿಯಾನದ ಒಂದು ಭಾಗವಾದ ಇದರ ಅಡಿಯಲ್ಲಿ ಸುಮಾರು ಐದು ಜನ ಗರ್ಭಿಣಿಯರಿಗೆ ಸರ್ಕಾರದ ವತಿಯಿಂದ ಸೀಮಂತ ಕಾರ್ಯವನ್ನು ಮಾಡಲಾಯಿತು. ಇದೇ ಸಂದರ್ಭದಲ್ಲಿ ಐದು ತಿಂಗಳ ಮಗುವಿಗೆ ಶಾಸಕರಾದ ಎಂಪಿ ರೇಣುಕಾಚಾರ್ಯ ಅನ್ನಪ್ರಾಸನ ವನ್ನು ಮಾಡಿಸಿದರು.
ಎಂಪಿ ರೇಣುಕಾಚಾರ್ಯ ಮಾತನಾಡಿ ಮಾಸಡಿ ಗ್ರಾಮದ ಪೂರ್ಣ ಕುಟುಂಬ ಮತ್ತು ಎತ್ತಿನ ಗಾಡಿಯಲ್ಲಿ ಗೌರವದಿಂದ ತಾಲೂಕಿನ ಅಧಿಕಾರಿಗಳೊಂದಿಗೆ ನಮ್ಮನ್ನ ಬರ ಮಾಡಿಕೊಂಡಿದ್ದು ಇದು ಅರ್ಥಪೂರ್ಣ ಕಾರ್ಯಕ್ರಮ ಎನಿಸಿಕೊಂಡಿತು ಎಂದರು.
ಮಾಸಡಿ ಗ್ರಾಮ ಲಸಿಕೆ ಮುಕ್ತ ಗ್ರಾಮವಾಗಿದೆ ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ವರ್ಗದವರಿಗೆ ಧನ್ಯವಾದಗಳನ್ನು ತಿಳಿಸಿದರು.
ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಜನರಿಗೆ 3.55.555 ಕೊವ್ಯಾಕ್ಸಿನ ಮತ್ತು ಕೋವಿಸೀಲ್ಡ ಲಸಿಕೆಯನ್ನು ಕೋರೋನ ಇರುವ ಸಂದರ್ಭದಲ್ಲಿ ಉಚಿತವಾಗಿ ಕೊಡಲಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಶಾಸಕರಾದ ಎಂಪಿ ರೇಣುಕಾಚಾರ್ಯ, ಉಪ ವಿಭಾಗಾಧಿಕಾರಿಗಳಾದ ಹುಲ್ಲುಮನಿ ತಿಮ್ಮಣ್ಣನವರು, ತಾಲೂಕ್ ದಂಡಾಧಿಕಾರಿಗಳಾದ ಬಸವನಗೌಡ ಕೋಟೂರ್, ಸಿಡಿಪಿಒ ಅಧಿಕಾರಿಗಳಾದ ಮಾಂತೇಶ್ ಪೂಜಾರ್ ತಾಲೂಕು ಮಟ್ಟದ ಎಲ್ಲಾ ಅಧಿಕಾರಿ ವರ್ಗದ ಸಿಬ್ಬಂದಿ ವರ್ಗದವರು, ಕಂದಾಯ ಇಲಾಖೆಯವರು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಶೋಕಣ್ಣ, ಲಕ್ಷ್ಮಿ ಮಾದಪ್ಪ ,ಹಳದಪ್ಪ, ರಾಜಪ್ಪ ,ಸುಲೋಚನಮ್ಮ, ನಟರಾಜ್, ಮಮತಾನಾಗಪ್ಪ ಇನ್ನು ಮುಂತಾದ ಗ್ರಾಮ ಪಂಚಾಯಿತಿ ಸದಸ್ಯರುಗಳು, ಅಧ್ಯಕ್ಷರು ಉಪಾಧ್ಯಕ್ಷರುಗಳು ಸಹ ಭಾಗಿಯಾಗಿದ್ದರು.