ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಕನ್ನಡ ಮತ್ತು
ಸಂಸ್ಕøತಿ ಇಲಾಖೆ ವತಿಯಿಂದ ತ್ರಿಪದಿ ಕವಿ ಶ್ರೀ ಸರ್ವಜ್ಞ 
 ಜಯಂತಿಯನ್ನು ಭಾನುವಾರ ಜಿಲ್ಲಾಡಳಿತ ಭವನದಲ್ಲಿ
ಸರಳವಾಗಿ ಆಚರಿಸಲಾಯಿತು.

ಕುಂಬಾರ ಸಮಾಜದ ಅಧ್ಯಕ್ಷ ಪುಷ್ಪರಾಜ್ ಮಾತನಾಡಿ
 ತ್ರಿಪದಿ ಕವಿ ಶ್ರೀ ಸರ್ವಜ್ಞ ಅವರ ಜಯಂತಿಯನ್ನು
ಜಿಲ್ಲಾಡಳಿತದಲ್ಲಿ ಸರಳವಾಗಿ ಆಚರಣೆ ಮಾಡುತ್ತಿದ್ದು. ಸರ್ವಜ್ಞ
ನವರು ಸಮಾಜದ ಅಂಕುಡೊಂಕುಗಳನ್ನು ತ್ರಿಪದಿಯಲ್ಲಿ
ವರ್ಣನೆ ಮಾಡಿದ್ದಾರೆ ಅವರ ತತ್ವಗಳನ್ನು ಜೀವನದಲ್ಲಿ
ಅಳವಡಿಸಿಕೊಂಡು ಮುನ್ನಡೆಯೋಣ ಎಂದು ಹೇಳಿದರು.
ಕುಂಬಾರ ಸಮಾಜದ  ಗೌರವಾಧ್ಯಕ್ಷರಾದ ಬಸವರಾಜು
ಕುಂಚೂರು ಮಾತನಾಡಿ ಸರ್ವಜ್ಞನವರು ಸತ್ಯ ಶುದ್ಧವಾದ
ಕಾಯಕವನ್ನು ಮಾಡುತ್ತಾ ಅನೇಕ ರೀತಿಯಲ್ಲಿ ಸಮಾಜಕ್ಕೆ
ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಪ್ರಸ್ತುತ
ದಿನಮಾನಗಳಲ್ಲಿ ನಮ್ಮ ಸಮಾಜ ಬಹಳ ಹಿಂದುಳಿದಿದೆ ಇನ್ನು
ಮುಂದೆ ಎಲ್ಲರು ಸರ್ವಜ್ಞರ ಕಾಯಕವನ್ನು ನಂಬಿ
ಸಮಾಜವನ್ನು ಚೆನ್ನಾಗಿ ಬೆಳೆಸಿಕೊಂಡು ಹೋಗೋಣ ಎಂದು
ಹೇಳಿದರು.
ಕುಂಬಾರ ಸಮಾಜದ ಉಪಾಧ್ಯಕ್ಷ ಕರಿಬಸಪ್ಪ ಮಾತನಾಡಿ,
ಸರ್ವಜ್ಞರ ತ್ರಿಪದಿಗಳನ್ನು ಸರ್ಕಾರಿ ಕಛೇರಿಗಳಿಲ್ಲಿ
ಅನಾವರಣಗೊಳಿಸಬೇಕೆಂದರು, ಮತ್ತು ಸರ್ಕಾರದಿಂದ ಈ
ಸಮಾಜಕ್ಕೆ  ಸವಲತ್ತುಗಳನ್ನು ನೀಡುವಂತೆ ಅಧಿಕಾರಿಗಳಲ್ಲಿ
ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್
ವೀರಮಲ್ಲಪ್ಪ,  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ
ನಿರ್ದೇಶಕ ರವಿಚಂದ್ರ,  ಕುಂಬಾರ ಸಮಾಜದ ಟೌನ್ ಅಧ್ಯಕ್ಷ ಕೆಜಿ
ಷಣ್ಮುಖಪ್ಪ, ಇ.ತಿಪ್ಪೇಸ್ವಾಮಿ ಟಿ. ಅಜ್ಜಣ್ಣ ಕೆ.ಎಂ.ಬಸವರಾಜ, ಸದಾಶಿವಪ,್ಪ
ಗಣೇಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *