ಹೊನ್ನಾಳಿ : ಅಧಿಕಾರಿಗಳು ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಯನ್ನು ಆಲಿಸುವ ದೃಷ್ಟಿಯಿಂದ ಕಂದಾಯ ಸಚಿವರಾದ ಆರ್.ಅಶೋಕ್ ಅವರು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ತಗ್ಗಿಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನ ಉದ್ಘಾಟಿಸಿ ಅವರು ಮಾತನಾಡಿದರು.
ಜನರು ತಮ್ಮ ಕೆಲಸಗಳಿಗಾಗೀ ಸರ್ಕಾರಿ ಕಚೇರಿಗಳನ್ನು ಅಲೆಯ ಬೇಕಾಗಿತ್ತು, ಆದರೇ ಇದೀಗ ಅಧಿಕಾರಿಗಳ ಜನರ ಮನೆ ಬಾಗಿಲಿಗೆ ಬಂದು ಅವರ ಸಮಸ್ಯೆ ಆಲಿಸುವ ಜೊತೆಗೆ ಸ್ಥಳದಲ್ಲೇ ಅವನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದು, ಇದರಿಂದ ಜನರು ಸರ್ಕಾರಿ ಕಚೇರಿ ಅಲೆಯುವುದು ತಪ್ಪಿದಂತಾಗಿದೆ ಎಂದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ಇದು ಎಂಟನೇ ಕಾರ್ಯಕ್ರಮವಾಗಿದ್ದು, ಮುಖ್ಯಮಂತ್ರಿಗಳು ಭಾಗವಹಿಸಿದ್ದು ಹೊನ್ನಾಳಿ ನ್ಯಾಮತಿ ತಾಲೂಕಿನಲ್ಲಿ ಮಾತ್ರ ಎಂದ ರೇಣುಕಾಚಾರ್ಯ ನಾಬೂತೇ ನಾಭವಿಷತ್ತೇ ಎಂಬುವಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹಿಂದೆ ಎಂದು ನಡೆದಿಲ್ಲಾ ಮುಂದೆ ಎಂದೂ ನಡೆದಿಲ್ಲಾ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ 3.50 ಲಕ್ಷ ಜನರಿಗೆ ಕೊರೊನಾ ಲಸಿಕೆ ಹಾಕಲಾಗಿದೆ ಎಂದ ರೇಣುಕಾಚಾರ್ಯ, ಕೊರೊನಾ ಮೊದಲನೆ ಹಾಗೂ ಎರಡನೇ ಅಲೆಯಲ್ಲಿ ಅಧಿಕಾರಿಗಳ ಸಹಕಾರದಿಂದ ಕೊರೊನಾವನ್ನು ತಡೆಯಲು ಸಾಧ್ಯವಾಯಿತು ಎಂದರು. ಕೊರೊನಾ ಮೂರನೇ ಅಲೆ ದಿನೇ ದಿನೇ ಕಡಿಮೆಯಾಗಿತ್ತಿದ್ದು ಆಗಂತ ಜನರು ಮೈಮರೆಯದೇ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಕಿವಿ ಮಾತು ಹೇಳಿದರು.
28 ರಂದು ಎಸಿ ಕಚೇರಿ ಉದ್ಘಾಟನೆ : ಫೆಬ್ರವರಿ 28 ರಂದು ಹೊನ್ನಾಳಿಯಲ್ಲಿ ನೂತನ ಎಸಿ ಕಚೇರಿ ಉದ್ಘಾಟನೆಯಾಗಲಿದ್ದು, ಈ ಕಾರ್ಯಕ್ರಮಕ್ಕೆ ಕಂದಾಯ ಸಚಿವರಾದ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಬಸವರಾಜ್, ಸಂಸದರಾದ ಜಿ.ಎಂ ಸಿದ್ದೇಶ್ವರ್, ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ ನವರು ಆಗಮಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮನವಿ ಮಾಡಿದ ರೇಣುಕಾಚಾರ್ಯ ಅದೇ ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಸಾಮಾಜಿಕ ಭದ್ರತಾ ಹಕ್ಕುಪತ್ರಗಳನ್ನ ವಿತರಿಸಲಾಗುವುದು ಎಂದರು.ಹೊನ್ನಾಳಿಯಲ್ಲಿ ಎಸಿ ಕಚೇರಿ ನೀಡ ಬೇಕೆಂದು ಪಟ್ಟು ಹಿಡಿದು ಚನ್ನಗಿರಿ,ಹೊನ್ನಾಳಿ,ನ್ಯಾಮತಿ ತಾಲೂಕಗಳ ಸಬ್ ಡಿವಿಜನ್ ಮಾಡಿಸಿ ಎಸಿ ಕಚೇರಿ ಮಾಡಿಸಿದ್ದು ಇದರಿಂದ ಸಾರ್ವಜನಿಕರಿಗೆ ಉಪಯೋಗವಾಗಲಿದೆ ಎಂದರು.
ಮಾದರಿ ತಾಲೂಕು ಮಾಡುವ ಗುರಿ : ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾಧ್ಯಂತ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ತಂದು ಅವಳಿ ತಾಲೂಕುಗಳನ್ನು ಅಭಿವೃದ್ದಿ ಮಾಡಿದ್ದು ಅವಳಿ ತಾಲೂಕನ್ನು ಜನರು ಒಮ್ಮೆ ತಿರುಗಿ ನೋಡುವ ರೀತಿ ಅಭಿವೃದ್ದಿ ಮಾಡಲು ಪಣ ತೊಟ್ಟಿದ್ದು ಅವಳಿ ತಾಲೂಕಿನ ಚಿತ್ರಣವನ್ನ ಬದಲು ಮಾಡುತ್ತೇನೆಂದ ರೇಣುಕಾಚಾರ್ಯ ಅವಳಿ ತಾಲೂಕುಗಳನ್ನು ಧೂಳು ಮುಕ್ತ ಮಾಡಿ ಮಾದರಿ ತಾಲೂಕುಗಳನ್ನಾಗಿ ಮಾಡುತ್ತೇನೆಂದರು.
ಈ ವೇಳೆ ಉಪವಿಭಾಗಾಧಿಕಾರಿ ತಿಮ್ಮಪ್ಪ ಹುಲುಮನಿ, ತಹಶೀಲ್ದಾರ್ ರೇಣುಕಾ, ಇಓ ರಾಮಬೋವಿ, ಉಪತಹಶೀಲ್ದಾರ್ ನಾಗರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಗೂ ಗ್ರಾಮದ ಮುಖಂಡರಿದ್ದರು.
ಪೋಟೊ : ತಗ್ಗಿಹಳ್ಳಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಿ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು. ಈ ಸಂದರ್ಭ ವಿವಿಧ ಇಲಾಖೆ ಅಧಿಕಾರಿಗಳಿದ್ದರು.