ದಾವಣಗೆರೆ/ಫೆ.20/ ದೇವರು ಮತ್ತು ಧರ್ಮ ಭಾರತ ದೇಶದ ಜೀವಾಳ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ//ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಭಾನುವಾರ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ನಿರ್ಮಿಸಿರುವ ಶ್ರೀಶ್ಯೆಲ ಮಲ್ಲಿಕಾರ್ಜುನ. ಶ್ರೀ ಹೇಮರೆಡ್ಡಿ ಮಲ್ಲಮ್ಮ, ಶ್ರೀ ವೇಮನ ದೇವಸ್ವಾನ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಬಹಳ ಹಿಂದಿನಿಂದಲೂ ಸನಾತನ ಧರ್ಮ ಪಾಲಿಸುತ್ತಿರುವ ಭಾರತ ದೇಶದಲ್ಲಿ ದೇವರು ಪ್ರತಿಯೊಬ್ಬರ ಜೀವಾಳ ಎಂದರು.
ಭಾರತದಲ್ಲಿ ಇರುವಷ್ಟು ದೇಸ್ಥಾನಗಳು ಜಗತ್ತಿನ ಯಾವ ರಾಷ್ರದಲ್ಲೂ ಇಲ್ಲ. ಎಲ್ಲರಾಷ್ರಗಳಲ್ಲಿನ ದೇವಸ್ಥಾನಗಳ ತೂಗಿದರೆ, ಭಾರತದಲ್ಲಿ ಅತಿ ಹೆಚ್ಚಿನ ದೇವಸ್ಥಾನಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳ ಸಾಲಿನಲ್ಲಿ ಶ್ರೀಶೈಲ ಮಲ್ಲಿಕಾರ್ಜುನ, ಶ್ರೀ ಹೇಮರೆಡ್ಡಿ ಮಲ್ಲಮ್ಮ, ಶ್ರೀವೇಮನ ದೇವಸ್ಥಾನ ಸೇರಿದಂತಾಗಿದೆ. ಹೇಮರೆಡ್ಡಿಮಲ್ಲಮ್ಮ ಮತ್ತು ಮಲ್ಲಿಕಾರ್ಜುನ ಎಲ್ಲಿ ಇರುವರೋ ಅಲ್ಲಿ ಶ್ರೀ ಶೈಲ ಜಗದ್ಗುರುಗಳು ಇರುವರು ಎಂಬುದಕ್ಕೆ ಇಂದಿನ ಸಮಾರಂಭ ಸಾಕ್ಷಿ ಎಂದು ತಿಳಿಸಿದರು.


ಶ್ರೀ ಶೈಲ ಪೀಠದ ಹಿಂದಿನ ಜಗದ್ಗುರು ಶ್ರೀವಾಗೀಶ ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಶ್ರೀಶೈಲದಲ್ಲಿ ಜಾಗೃತಿ ಕಾರ್ಯಕ್ರಮ ಹೆಮ್ಮಿಕೊಂಡಿದ್ದರು, ಶ್ರೀ ಉಮಾಪತಿ ಪಂಡಿತಾರಾಧ್ಯ ಸ್ವಾಮೀಜಿಯವರು ಹೇಮರೆಡ್ಡಿ ಮಲ್ಲಮ್ಮನ ಸ್ಮಾರಕ ಮಾಡಿದ್ದಾರೆ. ಶ್ರೀಶೈಲದಲ್ಲಿನ ಕಾರ್ಯಕ್ರಮಗಳ ಗಮನಿಸಿದಂತಹ ಆಂಧ್ರ ಸರ್ಕಾರ ಈಗ ಪೀಠಕೆ ್ಕ10 ಎಕರೆ ಜಾಗ ಮಂಜೂರು ಮಾಡಿದೆ. ಪ್ರಾರಂಭಿಕ ಹಂತದಲ್ಲಿ ನೀಡಿರುವ 5 ಎಕರೆ ಜಾಗದ ಪೈಕಿ ಮೂರು ಎಕರೆ ಜಾಗವೂ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದೆ ಎದುರುಗಡೆ ಮಲ್ಲಿಕಾರ್ಜುನರು ಇರಬೇಕು ಎಂಬ ಆಶಯ ಈಡೇರಿದೆ.ಗುರುಪೀಠ ಮಲ್ಲಮ್ಮ ಮಲ್ಲಿಕಾರ್ಜುನ ಕುರಿತಾಗಿ ಮಾಡಿರುವ ಕೆಲಸಕ್ಕೆ ಸಾಕಷ್ಟು ಜಾಗ ದೊರೆತಿದೆ ಎಂದು ತಿಳಿಸಿದರು.
ಬಾಲೆ ಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ ಹೇಮರೆಡ್ಡಿ ಮಲ್ಲಮ್ಮ ಶಾಲೆಗೆ ಹೋದವರಲ್ಲ, ಶಾಸ್ತ ಓದಿದವರು ಶಾಸ್ತ ಹೇಳುವವರು ಅಲ್ಲ. ಆದರೂ ಭಕ್ತಿ ಮತ್ತು ಶ್ರದ್ದೆ ಎಂಬ ಅಸ್ತದಿಂದ ಇಡೀ ಸಮಾಜಕ್ಕೆ ಬೆಳಕನ್ನು ನೀಡದಂತಹ ಮಹಾನ್ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ, ಭಾವನಾ ಜೀವಿ ಭಾವನೆಯ ಮೂಲಕ ಮಾತನಾಡಿದವರು ಎಂಬುದಕ್ಕೆ ಅನೇಕಾನೇಕ ಉದಾಹರಣೆಗಳಿವೆ. ಸದಾ ಆರಾಧಿಸುತ್ತಿದ್ದ ಸಾಕ್ಷಾತ್ ಮಲ್ಲಿಕಾರ್ಜುನನೇ ಪ್ರತ್ಯಕ್ಷವಾಗಿ ಏನು ವರ ಬೇಕು ಎಂದು ಕೇಳಿದಾಗ, ನಿನ್ನ ತಲೆಯ ಮೇಲೆ ನನ್ನ ಪಾದ ಇರಲಿ ಎಂಬುದಾಗಿ ಕೇಳಿದಂತಹ ಭಾವನಾ ಜೀವಿ ಎಂದು ತಿಳಿಸಿದರು.


ಹೇಮರೆಡ್ಡಿ ಮಲ್ಲಮ್ಮನಷ್ಟು ಚಿತ್ರಹಿಂಸೆಯ ಅನುಭವಿಸಿದಂತಹ ಶಿವಶರಣೆ ಮತ್ತಾರೂ ಇಲ್ಲ ಮಹಿಳೆಯರಿಗೆ ಹೇಮರೆಡ್ಡಿ ಮಲ್ಲಮ್ಮನ ಜೀವನವೇ ಮಾದರಿ ಆಗಿದೆ ಮನೆ ಮತ್ತು ಮಹಿಳೆಯನ್ನು ಬದಲಾಯಿಸಬೇಕು ಎಂದು ಸದಾ ಹಾತೊರೆಯುತ್ತಿದ್ದ ಹೇಮರೆಡ್ಡಿ ಮಲ್ಲಮ್ಮ ಸಾವಿರಾರು ಕಷ್ಟ ಸಮಸ್ಯೆಗಳ ನಡುವೆಯೂ ಸಾಧಿಸಿ ತೋರಿಸಿದ ಅತ್ಯದ್ಬುತ ಶಕ್ತಿ ತಾಳಿದ್ದು ಬಾಳಿಯಾತು ಎನ್ನುವಂತೆ ಕಷ್ಟಕೋಟಲೆಗಳ ನಡುವೆಯೂ ಮಹಾನ್ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ತಾಳ್ಮೆ ಶಿಖರ ಎಂದು ಬಣ್ಣಿಸಿದರು. ಊರು ಕಟ್ಟುವ ಮುನ್ನವೇ ದೇವಸ್ಥಾನಗಳ ಕಟ್ಟಿಕೊಂಡು ಬರಲಾಗಿದೆ. ದೇವಾಲಯಗಳು ಅನಿವಾರ್ಯ ದಕ್ಷಿಣ ಭಾರತದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವಂತಹ 37 ಸಾವಿರ ದೇವಸ್ಥಾನಗಳಿವೆ. ತಮಿಳುನಾಡಿನಲ್ಲಿ 40 ಸಾವಿರದಷ್ಟು ಪ್ರಾಚೀನ ದೇವಾಲಯಗಳಿವೆ. ಅವು ಎಲ್ಲವೂ ಮಾನವಶಕ್ತಿಯ ಪ್ರತೀಕವಾಗಿವೆ ಎಂದು ತಂಜಾವೂರಿನ ಬೃಹದೇಶ್ವರ ದೇವಸ್ಥಾನದ ಐತಿಹ್ಯದ ಬಗ್ಗೆ ತಿಳಿಸಿದರು.
ಉಪಸ್ತಿತಿಯಲ್ಲಿ ;-ನಿಚ್ಚವ್ವನಹಳ್ಳಿ, ಜೈನಾಪುರ ಶ್ರೀಗಳು ನೇತೃತ್ವ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಮಾಜದ ಜಿಲ್ಲಾ ಅಧ್ಯಕ್ಷ ಡಾ//ಕೊಟ್ರೇಶ್ ಬಿದರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಅಧ್ಯಕ್ಷ ಡಾ//ಶೇಖರಗೌಡ ಮಾಲಿ ಪಾಟೀಲ್, ಕೆಪಿಸಿಸಿ ವಕ್ತಾರ ಡಿ.ಬಸರಾಜ್, ಡಾ//ಜಿ.ಎನ್.ಶಿವಲಿಂಗಮೂರ್ತಿ, ಯರಬಳ್ಳಿ ಉಮಾಪತಿ, ರೇವಣಸಿದ್ದಪ್ಪ, ಹರ್ಷಪಟೇಲ, ಶಿವುಹಿರೇಗೌಡ್ರು, ಇತರರು ಇದ್ದರು ಶಂಕರಪಾಟೀಲ್ ಸ್ವಾಗತಿಸಿದರು .ಕುಸುಮಾ ಲೋಕೇಶ್ ಸುಮತಿ ಜಯಪ್ಪ ನಿರೂಪಿಸಿದರು.

Leave a Reply

Your email address will not be published. Required fields are marked *