ಹೊನ್ನಾಳಿ -ಪೆ;-21-ಹೊನ್ನಾಳಿ ತಾಲೂಕ ಆಫೀಸ್ ಕಚೇರಿ ಆವರಣದಲ್ಲಿ ಇಂದು ನೂತನ ತಹಸಿಲ್ದಾರ್ ರಾದ ಶ್ರೀಮತಿ ಎಚ್ ಜೆ ರಶ್ಮಿರವರು ಸುಮಾರು ಎರಡು ಗಂಟೆಗೆ ಸರಿಯಾಗಿ ಈ ಹಿಂದೆ ತಹಸೀಲ್ದಾರ್ ರಾಗಿ ಕಾರ್ಯನಿರ್ವಹಿಸುತ್ತಿದ್ದ ಬಸವನಗೌಡ ಕೋಟೂರರವರು ನೂತನ ತಹಶೀಲ್ದಾರರವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.
ಹೊನ್ನಾಳಿಯಲ್ಲಿ ನೂತನವಾಗಿ ತಹಸಿಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ ತಕ್ಷಣವೇ ಶ್ರೀಮತಿ ಹೆಚ್ ಜೆ ರಶ್ಮಿರವರು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ತಿಮ್ಮೇನಹಳ್ಳಿ ಗ್ರಾಮದ ರುದ್ರಭೂಮಿಯ ವಿಚಾರವಾಗಿ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಕೆಲಸವನ್ನು ಮಾಡುತ್ತೇನೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಿಗೆ ರುದ್ರಭೂಮಿ ವಿಚಾರವಾಗಿ ದಾಖಲೆಗಳನ್ನು ಪರಿಶೀಲಿಸಿ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧಿಕಾರವನ್ನು ಹಸ್ತಾಂತರಿಸಿದ ತಹಸೀಲ್ದಾರರಾದ ಬಸವನಗೌಡ ಕೋಟೂರ್ ರವರು ಮತ್ತು ಪತ್ರಕರ್ತ ಮಿತ್ರರೂ ಸಹ ಈ ಸಂದರ್ಭದಲ್ಲಿ ಇದ್ದರು.