ದಾವಣಗೆರೆ ಜಿಲ್ಲೆಯಲ್ಲಿ ಸ್ಕಿಲ್ ಹಬ್ ಇನಿಶಿಯೇಟ್ ಫಾರ್ ಓಓಎಸ್‍ಸಿ
ಕಾರ್ಯಕ್ರಮವನ್ನು ಅನುμÁ್ಠನಗೊಳಿಸಲು ಹಾಗೂ ಭಾರತ
ಸರ್ಕಾರದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‍ಎಸ್‍ಡಿಸಿ) ಹಾಗೂ
ಎನ್‍ಎಸ್‍ಕ್ಯೂಎಫ್ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ
ಅಧಿಕಾರಿಗಳು ಹಾಗೂ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ,
ದಾವಣಗೆರೆ ಇವರ ಸಹಯೋಗದೊಂದಿಗೆ ವಿದ್ಯಾಭ್ಯಾಸವನ್ನು
ನಿಲ್ಲಿಸಿರುವ 15 ರಿಂದ 45ರ ವಯೋಮಿತಿಯೊಳಗಿರುವವರಿಗೆ ಕೌಶಲ್ಯ
ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಆಸಕ್ತರು ಹೆಸರು
ನೊಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ತರಬೇತಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಹೆಸರು
ನೋಂದಣಿ ಮಾಡಿಕೊಳ್ಳುವ ಶಾಲಾ ಕಾಲೇಜು ಹಾಗೂ ವಲಯಗಳ
ವಿವರ ಇಂತಿದೆ. ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ
ಮಹಿಳಾ ಕಾಲೇಜು ದಾವಣಗೆರೆ ಇಲ್ಲಿಗೆ ಐಟಿ ಹಾಗೂ ಬ್ಯೂಟಿ ಅಂಡ್ ವೆಲ್‍ನೆಸ್
ಸೆಕ್ಟರ್‍ಗಳು ಮಂಜೂರಾಗಿರುತ್ತದೆ. ಮೋತಿ ವೀರಪ್ಪ ಸರ್ಕಾರಿ ಪದವಿ
ಪೂರ್ವ ಕಾಲೇಜು, ದಾವಣಗೆರೆ ಇಲ್ಲಿಗೆ ಐಟಿ ಹಾಗೂ ಆಟೊಮೊಬೈಲ್
ಸೆಕ್ಟರ್‍ಗಳು ಮಂಜೂರಾಗಿರುತ್ತದೆ.
ಅಭ್ಯರ್ಥಿಗಳು ಮೊಬೈಲ್ ಫೆÇೀನ್ ಕರೆಯ ಮೂಲಕ ಅಥವಾ
ಖುದ್ದಾಗಿ ಕಚೇರಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ,
ದಾವಣಗೆರೆ ಮೊ.ಸಂ:8971749636, ಡಿ.ಡಿ.ಪಿ.ಐ ಕಚೇರಿ ದಾವಣಗೆರೆ
ಮೊ.ಸಂ:7892509376, ಮೋತಿವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು,
ದಾವಣಗೆರೆ ಮೊ.ಸಂ:9480115378, ರಾಜನಹಳ್ಳಿ ಸೀತಮ್ಮ ಬಾಲಕಿಯರ
ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜು, ದಾವಣಗೆರೆ ಮೊ.ಸಂ:
7259661666, ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆ ಜಿಲ್ಲಾ
ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.