ನ್ಯಾಮತಿ-ಪೆ;-23 ತಾಲೂಕು ಬೆಳಗುತ್ತಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ರವಿಕುಮಾರ್ ಎಚ್ ಇವರು ರಾಜಿ ನಾಮೆಯಿಂದ ತೆರವಾದ ಉಪಾಧ್ಯಕ್ಷರ ಸ್ಥಾನಕ್ಕೆ ದಿನಾಂಕ 23/ 2./2022ರ ಬುಧವಾರದಂದು ಇಂದು ನಡೆದ ಉಪಾಧ್ಯಕ್ಷರ ಚುನಾವಣೆಗೆ ಎಸ್ ಚಂದ್ರಪ್ಪ (ಶಹರಿಗೇರ್) ಇವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳಾದ ರವೀಶಾರಾಧ್ಯರವರು ಎಸ ಚಂದ್ರಪ್ಪ ಇವರನ್ನು (ಅವಿರೋಧವಾಗಿ )ಬೆಳಗುತ್ತಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರನ್ನಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರೇಮಾ ಟಿ, ಚುನಾವಣಾಧಿಕಾರಿಗಳಾದ ರವೀಶಾರಾಧ್ಯ (ಸಣ್ಣ ನೀರಾವರಿ ಇಲಾಖೆ) ಪಿಡಿಓ ಎ ಕೆ ಪ್ರದೀಪ್, ಕಾರ್ಯದರ್ಶಿಗಳಾದ ಶಿವಾನಂದಪ್ಪ, ಗ್ರಾಮ ಪಂಚಾಯತಿಯ ಸರ್ವ ಸದಸ್ಯರುಗಳು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಸಹ ಈ ಸಂದರ್ಭದಲ್ಲಿ ಹಾಜರಿದ್ದರು.


ಉಪಸ್ಥಿತಿಯಲ್ಲಿ ಶ್ರೀಮತಿ ಪ್ರೇಮಾ ಟಿ ಅಧ್ಯಕ್ಷರು, ನೂತನ ಉಪಾಧ್ಯಕ್ಷರಾದ ಶ್ರೀ ಎಸ ಚಂದ್ರಪ್ಪ ಸದಸ್ಯರುಗಳಾದ ರವಿಕುಮಾರ್ ಎಚ್, ನಾಗರತ್ನಮ್ಮ ಆರ್ ಟಿ , ರೇಖಾ ಕೆ ಆರ್, ಚಂದ್ರಕಲಾ ಜಿ ಆರ್ , ಪ್ರಭಾಕರ ಟಿ ಬಿ ,ಮಂಜುಳಾ ಎಂ ಎಸ್, ನಾಗರಾಜ್ ಎಲ್ ,ಸರೋಜಮ್ಮ, ಸಿದ್ದೇಶ್ವರಪ್ಪ ಬಿ ,ಮಂಜುನಾಥ ಎ,ಯಶೋದ ಜಿ ಸಿ, ಕುಬೇರಪ್ಪ ಬಿ ಟಿ , ಚರಣ್ ,ಛೇತನ್ ಮಂಜುನಾಥ್ ಗ್ರಾಮ ಪ,ಉಪಾಧ್ಯಕ್ಷ ರವಿಕುಮಾರ್, ಮಹೇಶ್ ಪೊಲೀಸ್, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *