ಹೊನ್ನಾಳಿ-ಪೆ;-24- ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ಇಂದು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ನೇತೃತ್ವದಲ್ಲಿ ಪತ್ರಕರ್ತರಿಗೆ ಐಡಿ ಕಾರ್ಡ್ ವಿತರಣೆ ಮಾಡಲಾಯಿತು.
ಪತ್ರಕರ್ತರು ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಕಳಪೆ ಕಾಮಗಾರಿಗಳ ವಿರುದ್ಧ ಸಾರ್ವಜನಿಕರು ಆರೋಪ ಮಾಡಿದಾಗ ಅವರಿಗೆ ಪತ್ರಿಕೆ ಮುಖಾಂತರ ನ್ಯಾಯ ದೊರಕಿಸಿಕೊಡುವುದು ಪತ್ರಕರ್ತರ ಜವಾಬ್ದಾರಿಯಾಗಿದೆ ಎಂದು ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಹಾಲೇಶಪ್ಪ ಎ. ಕೆ. ತಿಳಿಸಿದರು.
ಅವರು ಹೊನ್ನಾಳಿಯ ಪ್ರವಾಸಿಮಂದಿರದಲ್ಲಿ ಗುರುವಾರ ಪತ್ರಕರ್ತರ ಗುರುತಿನ ಪತ್ರವನ್ನು ವಿತರಿಸಿ ಮಾತನಾಡಿ ಪತ್ರಕರ್ತರು ತಮ್ಮ ಗುರುತಿನ ಪತ್ರವನ್ನು ಪಡೆಯುವುದಲ್ಲದೆ ಸಮಾಜದ ಸುದ್ದಿಗಳ ಮುಖಾಂತರ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕೊನೆಯ ಮಟ್ಟದ ಫಲಾನುಭವಿಗಳಿಗೆ ದೊರೆಯುವಂತೆ ಮಾಡಬೇಕೆಂದು ತಿಳಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಡಿ. ಎಂ. ಹಾಲ ರಾದ್ಯಾ ಮಾತನಾಡಿ . ಪತ್ರಕರ್ತರು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಸುಧಾರಕರಾಗಿದ್ದಾರೆ.
ಯಾವುದೇ ಫಲಾಪೇಕ್ಷೆಗಳಿಲ್ಲದೆ ಸಮಾಜಮುಖೀ ಕೆಲಸ ಮಾಡುವುದೇ ಪತ್ರಕರ್ತರ ಜವಾಬ್ದಾರಿಯಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಗೌರವ ಅಧ್ಯಕ್ಷರಾದ ರಾಜು ಕನ್ನಡಪ್ರಭ ವರದಿಗಾರರು ಗಿರೀಶ್ ನಾಡಿಗ್ ಪ್ರಜಾವಾಣಿ ವರದಿಗಾರರು ಎಬಿಸಿ ನ್ಯೂಸ್ ವರದಿಗಾರ ಅರವಿಂದ್ S HoNNALI .ಸಂಜೆ ಪತ್ರಿಕೆಯ ವರದಿಗಾರ ಸುರೇಶ್ ಹಾಗೂ ಇತರರು ಇದ್ದರು.ಇದೇ ಸಂದರ್ಭದಲ್ಲಿ 21 ಪತ್ರಕರ್ತರ ಗುರುತಿನ ಪತ್ರವನ್ನು ನೀಡಲಾಯಿತು.