ಕೋವಿಡ್-19 ಸಾಂಕ್ರಾಮಿಕ ಸೋಂಕು ಹಿನ್ನೆಲೆಯಲ್ಲಿ 2021-22ನೇ
ಸಾಲಿನ ಹಣಕಾಸು ವರ್ಷದಲ್ಲಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯ ಹೋಟೆಲ್,
ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನೋರಂಜನಾ ಪಾರ್ಕ್ ಗಳಿಗೆ
ಆಸ್ತಿ ತೆರಿಗೆ ಪಾವತಿಯಲ್ಲಿ ಶೇ. 50 ರಷ್ಟು ರಿಯಾಯಿತಿ ಹಾಗೂ 3 ತಿಂಗಳ
ವಿದ್ಯುಚ್ಛಕ್ತಿ ಡಿಮ್ಯಾಂಡ್/ ಫಿಕ್ಸೆಡ್ ಡೆಪಾಸಿಟ್ ಮನ್ನಾ ಸೌಲಭ್ಯವನ್ನು
ಸರ್ಕಾರದಿಂದ ಘೋಷಿಸಲಾಗಿದ್ದು, ಸೌಲಭ್ಯ ಪಡೆಯಲು ನೊಂದಣಿ
ಮಾಡಿಕೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಯು ಸೂಚನೆ
ನೀಡಿದ್ದು, ಇದಕ್ಕಾಗಿ ಮಾ. 01 ರಂದು ಬೆಳಿಗ್ಗೆ 11 ಗಂಟೆಗೆ ಹೋಟೆಲ್
ಸಿಕಾಡ, ಶಾಮನೂರು ರಸ್ತೆ, ದಾವಣಗೆರೆ ಇಲ್ಲಿ ಕೆ.ಟಿ.ಟಿ.ಎಫ್. ವೆಬ್‍ಸೈಟ್‍ನಲ್ಲಿ
ನೊಂದಣಿ ಮಾಡುವ ಕುರಿತು ಶಿಬಿರ ಆಯೋಜಿಸಲಾಗಿದೆ
ಸರ್ಕಾರಿ ಘೋಷಿಸಿರುವ ರಿಯಾಯಿತಿ ಸೌಲಭ್ಯ ಪಡೆಯಲು,
ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳು
ಮತ್ತು ನಗರ ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ
ಪಡೆದಿರುವ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು
ಮನೋರಂಜನಾ ಪಾರ್ಕ್‍ಗಳ ಉದ್ದಿಮೆದಾರರು, ಟೂರ್ಸ್ ಅಂಡ್ ಟ್ರಾವೆಲ್ಸ್
ಆಪರೇಟರ್ಸ್‍ಗಳು, ಕೆಟಿಟಿಎಫ್ (ಕರ್ನಾಟಕ ಟೂರಿಸಂ ಟ್ರೇಡ್ ಫೆಸಿಲಿಟೇಶನ್)
ಆ್ಯಕ್ಟ್ ನ ಪ್ರಕರಣ ಸಂಖ್ಯೆ 8/1 ಅನ್ವಯ ಕರ್ನಾಟಕ
ಪ್ರವಾಸೋದ್ಯಮ ಇಲಾಖೆಯ ವೆಬ್‍ಸೈಟ್ hಣಣಠಿs://ಞಣಣಜಿ.ಞಚಿಡಿಟಿಚಿಣಚಿಞಚಿಣouಡಿism.oಡಿg
ಅಥವಾ ತಿತಿತಿ.ಞಚಿಡಿಟಿಚಿಣಚಿಞಚಿಣouಡಿism.oಡಿg/ ನಲ್ಲಿ ಕಡ್ಡಾಯವಾಗಿ ನೊಂದಾಯಿಸಿ
ಪ್ರಮಾಣ ಪತ್ರವನ್ನು ಪಡೆಯಬೇಕಾಗಿರುತ್ತದೆ. ಇದಕ್ಕಾಗಿ
ಪ್ರವಾಸೋದ್ಯಮ ಇಲಾಖೆಯ ಕೇಂದ್ರ ಕಛೇರಿಯಿಂದ ತಾಂತ್ರಿಕ
ತಂಡ (ಟೆಕ್ನಿಕಲ್‍ಟೀಮ್)ವನ್ನು ಕಳುಹಿಸಿ ಕೊಡಲಾಗುತ್ತಿದೆ.
ಶಿಬಿರದಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹೋಟೆಲ್,
ಲಾಡ್ಜಸ್, ರೆಸ್ಟೋರೆಂಟ್, ರೆಸಾರ್ಟ್, ಟ್ರಾವೆಲ್ ಏಜೆನ್ಸಿ ಮತ್ತು ಟೂರ್
ಆಪರೇಟರ್ ಗಳು, ಮನರಂಜನಾ ಪಾರ್ಕಗಳ ಮಾಲಿಕರು
ನೋಂದಣಿ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗ
ಪಡಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಯನ್ನು ಸಹಾಯಕ
ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ದಾವಣಗೆರೆ ಜಿಲ್ಲೆ
ಕಛೇರಿಯ ದೂರವಾಣಿ ಸಂಖ್ಯೆ:08192-230123 ಗೆ ಸಂಪರ್ಕಿಸಿ
ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.