ಹೊನ್ನಾಳಿ- ಪೆ; 25 – ಪಟ್ಟಣ ಪ್ರವಾಸಿ ಮಂದಿರ ಪಕ್ಕದಲ್ಲಿರುವ ವಾಟರ್ ಸಪ್ಲೈ ಆವರಣದಲ್ಲಿಂದು ಪುರಸಭೆ ಕಾರ್ಯಾಲಯ 2022 /23 ನೇ ಸಾಲಿನ ಆಯ -ವ್ಯಯ ಕರಡು ಸಭೆಯನ್ನು ಶಾಸಕರಾದ ಎಂಪಿ ರೇಣುಕಾಚಾರ್ಯ ಮತ್ತು ಪುರಸಭೆಯ ಅಧ್ಯಕ್ಷ ಹೋಬಳಿದಾರ್ ಬಾಬುರವರ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಯಿತು.
ಎಂ ಪಿ ರೇಣುಕಾಚಾರ್ಯ ರವರು ನಂತರ ಮಾತನಾಡಿ ಹೊನ್ನಾಳಿ ಪುರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ತುಂಬಾ ಹೆಚ್ಚಾಗಿದೆ, ಇಂಥವರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ, ಎಂದು ದೂರುಗಳು ನನ್ನ ಬಳಿ ಬಂದಿವೆ ಆದ ಕಾರಣ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರ ಕಷ್ಟಗಳಿಗೆ ಮತ್ತು ಅವರ ಸಮಸ್ಯೆಗಳನ್ನು ತಕ್ಷಣ ಆಲಿಸಿ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕೆಂದು ಈ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದರು.
ಪಟ್ಟಣದ ಅಭಿವೃದ್ಧಿ ಮತ್ತು ಸ್ವಚ್ಛತೆ ಕಡೆ ಗಮನಹರಿಸಿ ,ಪುರಸಭೆಯ ಮುಖ್ಯಾಧಿಕಾರಿಗಳು ಮತ್ತು ಸರ್ವ ಸದಸ್ಯರುಗಳು ಸೇರಿ ಒಟ್ಟಾಗಿ ಕೆಲಸವನ್ನು ಮಾಡಿದಾಗ ಪಟ್ಟಣ ಅಭಿವೃದ್ಧಿ ಎತ್ತ ಸಾಗಬಹುದು ಎಂದು ತಿಳಿಸಿದರು.
ಪುರಸಭೆಯ ಅಧ್ಯಕ್ಷರಾದ ಹೋಬಳಿದಾರ್ ಬಾಬು ಅವರು ಪುರಸಭೆ ಕಾರ್ಯಾಲಯದ 20 22 /23ನೇ ಸಾಲಿನ ಕರಡು ಆಯ -ವ್ಯಯ ಹೊನ್ನಾಳಿ ಪಟ್ಟಣದ ಅಭಿವೃದ್ಧಿಗಾಗಿ ಸಿದ್ಧಪಡಿಸಲಾಗಿರುವ ಅಂದಾಜು ಪಟ್ಟಿಯನ್ನು ಬಿಡುಗಡೆ ಗೊಳಿಸಿ ಈ ಮಹಾಸಭೆಗೆ ಮಂಡಿಸಲಿಕ್ಕೆ ಅವಕಾಶ ಮಾಡಿಕೊಟ್ಟಂತಹ ಉಪಾಧ್ಯಕ್ಷರುಗಳಿಗೆ ಸರ್ವ ಸದಸ್ಯರುಗಳಿಗೆ ನಿಮ್ಮೆಲ್ಲರ ಅಮೂಲ್ಯವಾದ ಸಹಕಾರದೊಂದಿಗೆ ಹೊನ್ನಾಳಿ ಪಟ್ಟಣದ ಅಭಿವೃದ್ಧಿಗಾಗಿ ನನಗೆ ಸದಾವಕಾಶ ಕಲ್ಪಿಸಿ ಕೊಟ್ಟಿದ್ದಕ್ಕಾಗಿ ಆಯವ್ಯಯ ವನ್ನು ಮಂಡಿಸಿ ಸರ್ವ ಸದಸ್ಯರುಗಳಿಗೂ ಮತ್ತು ಅಧಿಕಾರಿ ಸಿಬ್ಬಂದಿ ವರ್ಗದವರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
ಉಪಸ್ಥಿತಿಯಲ್ಲಿ:- ಶಾಸಕರಾದ ಎಂಪಿ ರೇಣುಕಾಚಾರ್ಯ ಪುರಸಭೆಯ ಅಧ್ಯಕ್ಷರಾದ ಹೋಬಳಿದಾರ್ ಬಾಬು ಉಪಾಧ್ಯಕ್ಷರಾದ ರಂಜಿತ ವಡ್ಡಿ ಚೆನ್ನಪ್ಪ ಪುರಸಭೆಯ ಮುಖ್ಯಾಧಿಕಾರಿಗಳು ಎಚ್ಎಮ್ ವೀರಭದ್ರಯ್ಯ ನವರು,ಮಾಜಿ ಪುರಸಭೆ ಅಧ್ಯಕ್ಷ ಕೆವಿ ಶ್ರೀಧರ, ಸದಸ್ಯರುಗಳಾದ ಬಾವಿಮನಿ ರಾಜಣ್ಣ, ಸವಿತಾ ಹುಡೇದ್ ಮಹೇಶ್ .ಪದ್ಮಾ ಪ್ರಶಾಂತ್. ಅನು ಶಂಕರ ಚಂದ್ರು .ಸುಮ ಮಂಜುನಾಥ್ ಇಂಚರ. ಎಚ್ಪಿ ಸುಮಾ ಸತೀಶ್, ಸಾವಿತ್ರಮ್ಮ ವಿಜೇಂದ್ರ ಸುರೇಶ್ ಎಂ ,ಸುರೇಶ್ ಹೊಸಕೇರಿ ,ಮೇಲಪ್ಪ, ಧರ್ಮಪ್ಪ, ರಾಜೇಂದ್ರ, ಉಷಾ ಗಿರೀಶ್, ತನ್ವೀರ್ ಅಹಮದ್ ಪುರಸಭೆ ಇಂಜಿನಿಯರ್ ದೇವರಾಜ್ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಪೌರಕಾರ್ಮಿಕರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.