ದಾವಣಗೆರೆ ಜಿಲ್ಲೆ-ಪೆ;-25- ಹೊನ್ನಾಳಿ ತಾಲ್ಲೂಕಿನ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಕೆ ಎಲ್.ರಂಗಪ್ಪ ಕುಳಗಟ್ಟೆ ರವರ ನೇತೃತ್ವದಲ್ಲಿ ನೂರಾರು ವಾಲ್ಮೀಕಿ ಸಮಾಜದ ಬಾಂದವರ ವತಿಯಿಂದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೊಳಿಸಲು ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಬೆಂಗಳೂರಿನಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಪ್ರಸನ್ನಾನಂದ ಸ್ವಾಮೀಜಿ ಯವರು ಸುಮಾರು 16 ದಿನಗಳ ಕಾಲ ಧರಣಿ ಸತ್ಯಾಗ್ರಹ 7.5 ಮೀಸಲಾತಿ ವಿಚಾರವಾಗಿ ಧರಣಿಯನ್ನು ಮಾಡುತಿದ್ದಾರೆ. ಶ್ರೀಗಳಿಗೆ ಬೆಂಬಲಿಸಿ ಹೋರಾಟವನ್ನು ಹೊನ್ನಾಳಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕ ಆಫೀಸ್ ನವರಿಗೆ ಬೃಹತ್ ಪ್ರತಿಭಟನೆಯನ್ನು ವಾಲ್ಮೀಕಿ ಸಮಾಜದ ವತಿಯಿಂದ ನಡೆಸಲಾಯಿತು.
ಹೊನ್ನಾಳಿ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಕುಳಗಟ್ಟೆ ಕೆ ಎಲ್ ರಂಗಪ್ಪನವರು ಮಾತನಾಡಿ. ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಜನರು ಕೇಂದ್ರ ಸರ್ಕಾರದಿಂದ ಸಂವಿಧಾನತ್ಮಕವಾಗಿ, ಜಾತಿ ಜನ ಸಂಖ್ಯೆಗೆ ಅನುಗುಣವಾಗಿ 7.5% ಮೀಸಲಾಯಿತಿಯನ್ನು ಶೈಕ್ಷಣಿಕವಾಗಿ, ಚೌದ್ಯೋಗಿಕವಾಗಿ, ರಾಜಕೀಯವಾಗಿ, ಎಲ್ಲಾ ಸರ್ಕಾರಿ ಸೌಲಭ್ಯವನ್ನು ಬೇರೆ ರಾಜ್ಯದಲ್ಲಿ ಪಡೆಯುತ್ತಿದ್ದಾರೆ, ಆದರೆ ನಮ್ಮರಾಜ್ಯ ಸರ್ಕಾರ ಕೇವಲ ರಾಜಕೀಯ ಮೀಸಲಾತಿ ಮಾತ್ರ ಸಂವಿಧಾನತ್ಮವಾಗಿ 7.5% ಮೀಸಲಾತಿ ಯನ್ನು ನೀಡುತ್ತಿದ್ದು, ಸುಮಾರು ವರ್ಷಗಳಿಂದ ನಾವು ಶೈಕ್ಷಣಿಕವಾಗಿ, ಚೌದ್ಯೋಗಿಕವಾಗಿ, ರಾಜಕೀಯವಾಗಿ, ಕೇವಲ 3% ಮೀಸಲಾತಿ ಪಡೆಯುತ್ತ ಸಾಕಷ್ಟು ಅನ್ಯಾಯಕ್ಕೆ ಒಳಗಾಗಿದ್ದೇವೆ. ಆದ ಕಾರಣ ಕೇಂದ್ರ ಸರ್ಕಾರದ ಕಾನೂನು ಮತ್ತು ಭಾರತೀಯ ಸಂವಿಧಾನ ಕಾಯ್ದೆಯ ಪ್ರಕಾರ ವಿಶೇಷ ವಾಗಿ ಎಸ್.ಟಿ.ಜಾತಿಯ ಜನಸಂಖ್ಯೆಗೆ ಅನುಗುಣವಾಗಿ 7.5%.ಮೀಸಲಾತಿ ನೀಡಬೇಕಾಗಿ ಅಗ್ರಹಿಸಿ ಇಂದು ಬೃಹತ್ ಪ್ರತಿಭಟನೆ ಮಾಡಲಾಯಿತು.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 7.5 ಮೀಸಲಾತಿಯನ್ನು ನೀಡದಿದ್ದರೆ ಮುಂದಿನ ದಿನಮಾನಗಳಲ್ಲಿ ವಾಲ್ಮೀಕಿ ಸಮಾಜ ವತಿಯಿಂದ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಯೊಂದಿಗೆ ನಮ್ಮ ವಾಲ್ಮೀಕಿ ಸಮಾಜದ ಗುರುಗಳಾದ ಪರಮಪೂಜ್ಯ ಜಗದ್ಗುರು ಶ್ರೀ ಪ್ರಸನ್ನಾನಂದ ಮಹಾಸ್ವಾಮೀಜಿಯವರು ಸರ್ಕಾರದ ವಿರುದ್ಧ ಹೋರಾಡಿ ಎನ್ನುವ ಮಾತು ಅವರ ಬಾಯಿಂದ ಬಂದರೆ, ಅದರ ಜೊತೆಗೆ ವಿಧಾನಸಭೆಯನ್ನು ಮುತ್ತಿಗೆ ಹಾಕಿ ಅಂತ ಹೇಳಿದರೆ, ನಮ್ಮ ಸಮಾಜದವರು ಮುತ್ತಿಗೆಯನ್ನು ಹಾಕುತ್ತೇವೆ ಎಂದು ಆಕ್ರೋಶ ದಿಂದ ಆಗ್ರಹಿಸಿದರು .
ತದಾದ ನಂತರ ಸರ್ಕಾರಕ್ಕೆ ನಮ್ಮ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ವಾಲ್ಮೀಕಿ ನಾಯಕ (ಎಸ್.ಟಿ.) ಸಮಾಜದವರು ಈ ಮನವಿ ಪತ್ರವನ್ನು ತಾಲೂಕ ಆಫೀಸಿನ ಉಪತಹಸೀಲ್ದಾರಾದ ಸುರೇಶ್ ರವರಿಗೆ ಘನವೆತ್ತ ರಾಜ್ಯಪಾಲರಿಗೆ ಕಳಿಸಿಕೊಡುವಂತೆ ಮನವಿ ಪತ್ರವನ್ನು ಸಲ್ಲಿಸಿದರು.
ಉಪಸ್ಥಿತಿಯಲ್ಲಿ ಕೆಎಲ್ ರಂಗಪ್ಪ ಕುಳಗಟ್ಟೆ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷರು. ಉಪಾಧ್ಯಕ್ಷರಾದ ಶೇಖರಪ್ಪ, ಮುಖಂಡರುಗಳಾದ ಕೊಣನತಲಿ ನಾಗಪ್ಪ, ತಾಲೂಕು ಮಾಜಿ ಅಧ್ಯಕ್ಷ ಚಂದಪ್ಪ, ಹನುಮಂತಪ್ಪ, ರಮೇಶ ಬಸವರಾಜಪ್ಪ ಇನ್ನು ಮುಂತಾದ ಸಮಾಜದ ಮುಖಂಡರುಗಳು ಹಾಗೂ ಸಮಾಜದ ಬಾಂಧವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *