ಬೇಸಿಗೆ ಕಾಲ ಸಮೀಪಿಸುತ್ತಿರುವುದರಿಂದ ಅರಣ್ಯ ಪ್ರದೇಶದಲ್ಲಿ
ಬೆಂಕಿ ಅವಘಡಗಳು ಸಂಭವಿಸುವ ಸಾಧ್ಯತೆಗಳು
ಹೆಚ್ಚಾಗಿರುತ್ತದೆ. ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಸಹಕರಿಸಿ
ಬೆಂಕಿ ಬೀಳದಂತೆ ಎಚ್ಚರವಹಿಸಿ ಅಮೂಲ್ಯ ಅರಣ್ಯ ಸಂಪತ್ತು
ರಕ್ಷಣೆಗೆ ಕೈಜೋಡಿಸಬೇಕು ಎಂದು ಹೊನ್ನಾಳಿ ವಿಧಾನಸಭಾ
ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ
ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ರವರು ಹೊನ್ನಾಳಿಯಲ್ಲಿ ಕರೆ
ನೀಡಿದರು.
ದಾವಣಗೆರೆ ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ
ಹೊನ್ನಾಳಿಯಲ್ಲಿ ಸಾರ್ವಜನಿಕರಲ್ಲಿ ಅರಣ್ಯ ಬೆಂಕಿಯ ಬಗ್ಗೆ ಅರಿವು ಮತ್ತು
ತಡೆಗಟ್ಟುವಲ್ಲಿ ಜನಸಾಮಾನ್ಯರ ಪಾತ್ರದ ಕುರಿತು ಜಾಗೃತಿಗಾಗಿ
ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅರಣ್ಯ
ಬೆಂಕಿಯ ಕುರಿತು ಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು
ಬಿಡುಗಡೆ ಮಾಡಿ ಅವರು ಮಾತನಾಡಿದರು.
ಬೇಸಿಗೆಯಲ್ಲಿ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಅವಘಡಗಳು
ಸಂಭವಿಸುವ ಸಾಧ್ಯತೆಗಳು ಹೆಚ್ಚಿರುತ್ತದೆ. ಅರಣ್ಯ ಇಲಾಖೆಯು
ಕೂಡ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು
ಕೈಗೊಳ್ಳುತ್ತದೆ. ಆದರೆ ಸಾರ್ವಜನಿಕರ ಸಹಕಾರವೂ ಕೂಡ
ಅತ್ಯಗತ್ಯವಾಗಿದ್ದು, ಬೆಂಕಿ ದುರಂತಗಳು ಸಂಭವಿಸದಂತೆ ಅರಣ್ಯ
ಇಲಾಖೆಯೊಂದಿಗೆ ಕೈಜೋಡಿಸಿ, ಅಮೂಲ್ಯ ಅರಣ್ಯ ಸಂಪತ್ತನ್ನು
ರಕ್ಷಿಸುವಲ್ಲಿ ಸಾರ್ವಜನಿಕರು ಮುಂದಾಗಬೇಕು ಎಂದು ಎಂ.ಪಿ.
ರೇಣುಕಾಚಾರ್ಯ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.
ಜಗನ್ನಾಥ್ ಮಾತನಾಡಿ ದಾವಣಗೆರೆ ಪ್ರಾದೇಶಿಕ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು
58.17 ಚ.ಕಿ.ಮೀ.ನಷ್ಟು ಅರಣ್ಯ ಪ್ರದೇಶವಿದ್ದು ಅವುಗಳನ್ನು
ಹೊರತುಪಡಿಸಿ ಗಿಡಮರಗಳಿಂದ ಕೂಡಿದ ಕಾಡಿನಂತಿರುವ
ಕಂದಾಯ ಭೂಮಿ ಇರುತ್ತದೆ. ರಾಷ್ಟ್ರೀಯ ಅರಣ್ಯ ನೀತಿಯಂತೆ
ಪರಿಸರ ಸಮತೋಲನ ಕಾಪಾಡಲು ಭೌಗೋಳಿಕ ಪ್ರದೇಶದ
ಶೇ.33ರಷ್ಟು ಅರಣ್ಯ ಇರಬೇಕಾಗಿದ್ದು, ದಾವಣಗೆರೆ ವಿಭಾಗ
ವ್ಯಾಪ್ತಿಯಲ್ಲಿ ಪ್ರಸ್ತುತ ಶೇ 12.05 ರಷ್ಟು ಮಾತ್ರ ವೃಕ್ಷದಟ್ಟಣೆ
ಇದೆ. ವೃಕ್ಷದಟ್ಟಣೆ ಕಡಿಮೆ ಇರುವ ಈ ಸಂದರ್ಭದಲ್ಲಿ ಭಾರತೀಯ
ಸಂವಿಧಾನದ ಕಲಂ 51ಎ(ಜಿ) ಪ್ರಕಾರ ಅರಣ್ಯ ಮತ್ತು ಪರಿಸರದ

ರಕ್ಷಣೆ ಪ್ರತಿಯೊಬ್ಬ ನಾಗರೀಕನ ಮೂಲಭೂತ
ಕರ್ತವ್ಯವಾಗಿರುತ್ತದೆ. ಅರಣ್ಯ ಪ್ರದೇಶವು ಕಾಡುಪ್ರಾಣಿಗಳ
ಆವಾಸಸ್ಥಾನವಾಗಿರುತ್ತದೆ. ಬೇಸಿಗೆ ಕಾಲದಲ್ಲಿ ಅರಣ್ಯ ಪ್ರದೇಶದಲ್ಲಿ
ಉದುರುವ ಎಲೆಗಳು ಮತ್ತು ರೆಂಬೆಕೊಂಬೆಗಳು ಬಿದ್ದು
ಒಣಗಿರುವುದರಿಂದ, ಒಂದು ಸಣ್ಣ ಬೆಂಕಿ ಕಿಡಿ ಸಂಪೂರ್ಣ ಅರಣ್ಯ
ಪ್ರದೇಶವನ್ನು ವ್ಯಾಪಿಸಿ ದೊಡ್ಡ ಪ್ರಮಾಣದಲ್ಲಿ ಕಾಡ್ಗಿಚ್ಚಾಗಿ
ಗಿಡಮರಗಳು ಮತ್ತು ಅದರ ಮೇಲೆ ಅವಲಂಭಿತವಾಗಿರುವ
ಪ್ರಾಣಿ ಪಕ್ಷಿಗಳ ವಿನಾಶಕ್ಕೆ ಕಾರಣವಾಗುತ್ತದೆ. ಕಾಡುಗಳಲ್ಲಿ
ಧೂಮಪಾನ ಮಾಡಿ ಬಿಸಾಡುವುದರಿಂದ, ಬೆಂಕಿ ಬೀಳಲು
ಪ್ರೇರೇಪಿಸುವ ವಸ್ತುಗಳನ್ನು ಅರಣ್ಯ ಪ್ರದೇಶದಲ್ಲಿ
ಉಪಯೋಗಿಸುವುದರಿಂದ ಮತ್ತು ಅರಣ್ಯ ಪ್ರದೇಶಗಳಿಗೆ
ಹೊಂದಿಕೊಂಡಿರುವ ರೈತರು ತಮ್ಮ ಜಮೀನುಗಳಲ್ಲಿ ಬೆಂಕಿ
ಹಚ್ಚುವುದರಿಂದ ಅರಣ್ಯ ಪ್ರದೇಶಗಳಿಗೆ ವ್ಯಾಪಿಸಿ ಕಾಡ್ಗಿಚ್ಚಿಗೆ
ಕಾರಣವಾಗುತ್ತದೆ. ಹೀಗಾಗಿ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕಾರ
ನೀಡಬೇಕೆಂದು ಸ್ಥಳೀಯ ಜನಪ್ರತಿನಿಧಿಗಳು ಜನಸಾಮಾನ್ಯರಲ್ಲಿ
ತಿಳುವಳಿಕೆ ಮೂಡಿಸುವ ಕಾರ್ಯ ಮಾಡಬೇಕು. ಕಾಡ್ಗಿಚ್ಚು
ಕಂಡುಬಂದ ತಕ್ಷಣ ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆ 1926 ಕ್ಕೆ
ಕರೆ ಮಾಡಿ ತಿಳಿಸಬೇಕು ಎಂದು ಮನವಿ ಮಾಡಿದರು.
ಅರಣ್ಯದಲ್ಲಿನ ಜೀವ ವೈವಿಧ್ಯ ಜೈವಿಕ ಪರಿಸರ ಮಾನವ ಬದುಕು
ಹಾಗೂ ಅರಣ್ಯದೊಂದಿಗಿನ ಸಂಬಂಧ ಹಾಗೂ ಅವಲಂಬನೆ. ಅರಣ್ಯ
ಬೆಂಕಿಯಿಂದ ಉಂಟಾಗುವ ಅನಾಹುತಗಳ ಕುರಿತು ಸುಮಾರು 20
ನಿಮಿಷಗಳ ಕಾಲ ಬೀದಿ ನಾಟಕ ಹಾಗೂ ಪರಿಸರ ಗೀತೆಗಳನ್ನು ಹಾಡುವ
ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು
ವಿಭಾಗದ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿ
ಹಮ್ಮಿಕೊಳ್ಳಲಾಗುತ್ತಿದ್ದು ಇದರಿಂದ ಇಲಾಖೆಯು ಸಾರ್ವಜನಿಕರಲ್ಲಿ
ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದೆ. ಮಣ್ಣು ಮತ್ತು
ನೀರಿನ ಸಂರಕ್ಷಣೆಯ ಮಹತ್ವವನ್ನು ಶಾಲಾ-ಕಾಲೇಜು ಮಟ್ಟದ
ಮಕ್ಕಳಲ್ಲಿ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು
ಏರ್ಪಡಿಸಲಾಗುತ್ತಿದೆ. ಅರಣ್ಯ ವಿಭಾಗದ ವ್ಯಾಪ್ತಿಯ ಸಾರ್ವಜನಿಕ
ಪ್ರದೇಶಗಳಲ್ಲಿ ಅರಣ್ಯಬೆಂಕಿಯಿಂದ ಸಂಭವಿಸುವ ಅನಾಹುತಗಳು
ಹಾಗೂ ಅವುಗಳ ನಿರ್ವಹಣೆಯಲ್ಲಿ ಸಾರ್ವಜನಿಕರ ಜವಾಬ್ದಾರಿಗಳ
ಕುರಿತ ಪೆÇೀಸ್ಟರ್, ಕರಪತ್ರಗಳನ್ನು ಅಂಟಿಸಲಾಗುತ್ತಿದೆ ಎಂದು
ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು,
ನಾಗರೀಕರು, ಇಲಾಖೆಯ ವಲಯ ಅರಣ್ಯಾಧಿಕಾರಿಗಳು, ಉಪ
ವಲಯ ಅರಣ್ಯಾಧಿಕಾರಿಗಳು, ಅರಣ್ಯ ರಕ್ಷಕರು ಹಾಗೂ
ಸಿಬ್ಬಂದಿಗಳು ಹಾಜರಿದ್ದರು. 

Leave a Reply

Your email address will not be published. Required fields are marked *