ದಾವಣಗೆರೆ: ಸರ್ಕಾರಗಳು ಪ್ರತಿ ವರ್ಷ ನೀಡುವ ಪಲ್ಸ್ ಪೊಲೀಯೋ ಹನಿ ಹಾಕಿಸುವ ಮೂಲಕ ಮಕ್ಕಳನ್ನು ಅಂಗವಿಕಲತೆಯಿಂದ ದೂರವಿಡಬೇಕೆಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಜನತೆಗೆ ಕರೆ ನೀಡಿದರು.

ಇಂದಿನಿಂದ ದೇಶಾದ್ಯಂತ 5 ದಿನಗಳ ಕಾಲ ಸರ್ಕಾರ ಹಮ್ಮಿಕೊಂಡಿರುವ ಪಲ್ಸ್ ಪೊಲೀಯೋ ಹನಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ ಪೊಲೀಯೋದಿಂದಾಗಿ ಅಂಗವಿಕಲತೆಯಿಂದೆ ಸಾಕಷ್ಟು ಜನರಿಗೆ ತೊಂದರೆ ಆಗಿದ್ದು, ಇದನ್ನು ಹೋಗಲಾಡಿಸಬೇಕೆಂಬ ಉದ್ದೇಶದಿಂದ ದೇಶಾದ್ಯಂತ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೊಲೀಯೋ ಹನಿ ಹಾಕಿಸಲಾಯಿತು. ಸುಮಾರು 10 ವರ್ಷಗಳಿಂದಿಚಿಗೆ ಯಾವುದೇ ಪೊಲೀಯೋ ಪ್ರಕರಣಗಳು ದಾಖಲಾಗಿಲ್ಲ. ಆದರೂ ಮುಂದಿನ ದಿನಗಳಲ್ಲಿ ತೊಂದರೆ ಆಗಬಾರದೆಂಬ ಕಾರಣಕ್ಕೆ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪೊಲೀಯೋ ಇನ್ನು ಬೇರೆ ದೇಶಗಳಲ್ಲಿದ್ದು, ಅನೇಕ ಮಕ್ಕಳು ಅಂಗವಿಕಲರಾಗಿದ್ದರೆ, ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳನ್ನು ಸಮೀಪದಲ್ಲಿರುವ ಲಸಿಕಾ ಕೇಂದ್ರಗಳಿಗೆ ತೆರಳಿ ಪೊಲೀಯೋ ಹನಿ ಹಾಕಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಜಿ.ಎಸ್.ಮಂಜುನಾಥ್ ಗಡಿಗುಡಾಳ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮಹಾನಗರ ಪಾಳಿಕೆ ವಿಪಕ್ಷ ನಾಯಕ ಎ.ನಾಗರಾಜ್, ಆರ್.ಜಿ.ಧನೇಶ್, ಟಿಹೆಚ್‍ಓ ಡಾ|| ವೆಂಕಟೇಶ್, ವೈದ್ಯಾಧಿಕಾರಿ ಡಾ|| ರಾಘವೇಂದ್ರ, ಉಮಾಬಾಯಿ ಎಸ್., ಗಾಯತ್ರಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *