ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರಿಗೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಜಾರಿಗೆ ತಂದಿರುವ ಆದೇಶಗಳು ಮಾರಕವಾಗಿವೆ. ಅವುಗಳ ವಿರುದ್ಧ ಸಂಘಟಿತ ಹೋರಾಟವನ್ನು ನಾವು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ದಿನಾಂಕ 4;3;22 ಶುಕ್ರವಾರ ಹಮ್ಮಿಕೊಂಡಿದ್ದೇವೆ. ಈ ಹೋರಾಟದಲ್ಲಿ ತಾಲ್ಲೂಕಿನ ಎಲ್ಲಾ ಅನುದಾನಿತ ಶಾಲಾ ಕಾಲೇಜುಗಳ ಶಿಕ್ಷಕರು ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದೇವೆ.
:: ನಮ್ಮ ಬೇಡಿಕೆಗಳು ::
- ದಿ: 01.04.2006ಕ್ಕೂ ಮೊದಲು ನೇಮಕವಾಗಿ ನಂತರ ಅನುದಾನಕ್ಕೊಳಪಟ್ಟು ಹಾಲಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ
ನಿವೃತ್ತರಾಗಿರುವ ನೌಕರರ ಸೇವಾ ಅವಧಿಯನ್ನು ಕಾಲ್ಪನಿಕವಾಗಿ ಪರಿಗಣಿಸಿ “ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ” ನೀಡುವುದು. - ದಿ: 01.04.2006ರ ನಂತರ ನೇಮಕವಾದ ನೌಕರರಿಗೆ “ನೂತನ ಪಿಂಚಣಿ ಯೋಜನೆ”ಯನ್ನು ಸರ್ಕಾರಿ ನೌಕರರಿಗೆ ನೀಡುತ್ತಿರುವಂತೆ ಯಥಾವತ್ತಾಗಿ ನೀಡುವುದು.
- ದಿ: 01.04.2006ರ ನಂತರ ನೇಮಕವಾದ ನೌಕರರಿಗೆ “ನೂತನ ಪಿಂಚಣಿ ಯೋಜನೆ” ಜಾರಿಗೆ ತರಲು ಸರ್ಕಾರವು ನೌಕರರ ಪಾಲಿನ ಶೇಕಡ 14 ರಷ್ಟು ಹಣವನ್ನು ಆಡಳಿತ ಮಂಡಳಿಗೆ ನೀಡುವಂತೆ ಹೇಳಲಾಗಿದೆ.
- ಅನುದಾನಿತ ಶಾಲಾ ಕಾಲೇಜು ನೌಕರರಿಗೂ ಆರೋಗ್ಯ ಸಿರಿ (ಜ್ಯೋತಿ ಸಂಜೀವಿನಿ) ಯೋಜನೆಯನ್ನು ಜಾರಿಗೆ ತರುವುದು. ಖಾಲಿ ಹುದ್ದೆಗಳನ್ನು ತುಂಬಿಕೊಳ್ಳಲು ವಿಧಿಸಿರುವ ನಿಯಮಗಳನ್ನು ಸಡಿಲಗೊಳಿಸಿ ಹುದ್ದೆಗಳನ್ನು ತುಂಬಲು ಅವಕಾಶ ಕಲ್ಪಿಸುವುದು.
- ಅನುದಾನಿತ ಶಾಲಾ ಮಕ್ಕಳಿಗೂ ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ಯಥಾವತ್ತಾಗಿ ನೀಡುವುದು.ಮಾನ್ಯತೆ ನವೀಕರಣವನ್ನು ಸರಳೀಕರಿಸುವುದು.
- 2000ರ ಹಿಂದೆ ನೇಮಕಾತಿ ಹೊಂದಿ ಅನುಮೋದನೆಯಾಗದೆ ಉಳಿದಿರುವ ಕೆಲವೇ ಮಂದಿ ಡಿಗ್ರೂಪ್ ನೌಕರರನ್ನು ಖಾಯಂಗೊಳಿಸುವುದು.
- ಶಿಕ್ಷಕರ ಮತ್ತು ಮಕ್ಕಳ ಅನುಪಾತವನ್ನು ಆರ್.ಟಿ.ಇ ಆಕ್ಟ್ರಂತೆ ನಿಗದಿಪಡಿಸುವುದು.ಇವುಗಳು ನಮ್ಮ ಬೇಡಿಕೆಯಾಗಿರತ್ತದೆ ಎಂದು ತಾಲೂಕ ಅಧ್ಯಕ್ಷರು ಪದಾಧಿಕಾರಿಗಳು ಸೇರಿದಂತೆ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.