ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ದೇವಸ್ಥಾನದ ಗೋಪುರಕ್ಕೆ ಕಳಸಾರೋಹಣ ಹಾಗೂ ಶ್ರೀ ವೇಮನ ರ 610ನೇ ಜಯಂತೋತ್ಸವ ಕಾರ್ಯಕ್ರಮವು ಇಂದು ರಾಯಚೂರು ತಾಲ್ಲೂಕಿನ ಡಿ.ರಾಂಪೂರ ಗ್ರಾಮದಲ್ಲಿ ಮಾಡಲಾಯಿತು,
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರೆಡ್ಡಿ ಗುರುಪೀಠದ ಗುರಗಳಾದ ಶ್ರೀ ವೇಮನಾನಂದ ಮಹಾಸ್ವಾಮಿಗಳು ಹಾಗೂ ಶಾಂತಾಶ್ರಮ ಮಿಟ್ಟಿಪಲ್ಕಾಪುರ ಸ್ವಾಮಿಗಳಾದ ಶ್ರೀ ನಿಜಾನಂದ ಮಹಾಸ್ವಾಮಿಗಳು ವಹಿಸಿದ್ದರು,
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೇಮಾ ವೇಮ ಟ್ರಸ್ಟ್. ಅಧ್ಯಕ್ಷರಾದ ಜಿ.ಗೋಪಾಲ ರೆಡ್ಡಿ. ಡಿ.ರಾಂಪೂರ ಅವರು ವಹಿಸಿದ್ದರು ಈ ಸಂದರ್ಭದಲ್ಲಿ ನಾರಾಯಣ ಪೇಟೆ ಶಾಸಕರು ಹಾಗೂ ರಾಯಚೂರು ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್.ರೆಡ್ಡಿ, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಬಳ್ಳಾರಿ ರೆಡ್ಡಿ ಜನಸಂಘದ ಅಧ್ಯಕ್ಷರಾದ ಪ್ರತಾಪ್ ರೆಡ್ಡಿ, ಶ್ರೀನಿವಾಸ ರೆಡ್ಡಿ, ಡಿ.ಅಚ್ಯೂತ್ ರೆಡ್ಡಿ, ಸತ್ಯನಗೌಡ, ದೇವೇಂದ್ರಪ್ಪಗೌಡ, ಶರಣರೆಡ್ಡಿ ಸೇಡಂ, ಸುಧಾಕರ ರೆಡ್ಡಿ, ಭಂಡ್ಲ ಚಂದ್ರಶೇಖರ್ ರೆಡ್ಡಿ, ಗಡ್ಡಂ ಕ್ರಿಷ್ಣರೆಡ್ಡಿ, ಹಾಗೂ ಸಮಾಜದ ಅನೇಕ ಗಣ್ಯವ್ಯಕ್ತಿಗಳು, ಸಮಾಜದ ಮುಖಂಡರು ಹಾಗೂ ಮಾತೆಯರು ಭಾಗವಹಿಸಿದ್ದರು.