ರಾಮನಗರ- ಪೆ-27- ರಾಮನಗರದಿಂದ ಬೆಳಗ್ಗೆ 10-30 ಕ್ಕೆ ಸರಿಯಾಗಿ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರ ನೇತೃತ್ವದಲ್ಲಿ ನಮ್ಮ ನೀರು ನಮ್ಮ ಹಕ್ಕು ಎಂಬ ಮೇಕೆದಾಟು ಯೋಜನೆ ಯಿಂದ ಬೆಂಗಳೂರು ಮದ್ದೂರು ರಾಮನಗರ ಮಂಡ್ಯ ಈ ಬಾಗದ ಜನರುಗಳಿಗೆ ಕುಡಿಯುವ ನೀರು ಅನುಕೂಲವಾಗಬೇಕು ಎಂದು ಉದ್ದೇಶವನ್ನಿಟ್ಟುಕೊಂಡು ನಮ್ಮ ನಡೆ ನೀರಿನ ಕಡೆ ಕುಡಿಯುವ ನೀರಿ ಗೋಸ್ಕರ ಎರಡನೇ ಹಂತದ ಪಾದಯಾತ್ರೆಯನ್ನು ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರುಗಳು ಹಮ್ಮಿಕೊಂಡಿದ್ದರು.
.ಈ ಪಾದಯಾತ್ರೆಗೆ ಹೊನ್ನಾಳಿಯ ಅಹಿಂದ ಮುಖಂಡರುಗಳು 27/2/ 2022ರಂದು ಬೆಳಗ್ಗೆ 10-30ಕ್ಕೆ ಸರಿಯಾಗಿ ಪಾದಯಾತ್ರೆಯಲ್ಲಿ ಭಾಗಿಯಾದೆವು ಎಂದು ಹೊನ್ನಾಳಿಯ ಅಹಿಂದ ಮುಖಂಡರುಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .
ಹೊನ್ನಾಳಿಯಿಂದ ಅಹಿಂದ ಮುಖಂಡರ ಅಧ್ಯಕ್ಷರಾದ ಡಾಕ್ಟರ ಎಲ್ ಈಶ್ವರ ನಾಯ್ಕ ರವರು ಮಾತನಾಡಿ ಕಾಂಗ್ರೆಸ್ ಪಕ್ಷದ ನಮ್ಮ ನಾಯಕರುಗಳಾದ ಡಿ ಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇತೃತ್ವದಲ್ಲಿ ಕುಡಿಯುವ ನೀರು ಗೋಸ್ಕರ ಮೇಕೆದಾಟು ಯೋಜನೆಯನ್ನು ಸರ್ಕಾರ ಕೂಡಲೇ ಜಾರಿಗೊಳಿಸ ಬೇಕು ಕೂಡಲೆ ಕಾರ್ಯರೂಪಕ್ಕೆತರಬೇಕೆಂದು ಒತ್ತಾಯಿಸಿ ಉದ್ದೇಶ ಇಟ್ಟುಕೊಂಡು ಪಾದಯಾತ್ರೆಯನ್ನು ಮಾಡುತ್ತಿದ್ದಾರೆ,ಆದರೆ
ನಾವು ಯಾಕೆ ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಾರದು ಎಂದು ನಮಗೆ ಅನಿಸಿತು. ಆದ ಕಾರಣ ನಮ್ಮ ಕಾಂಗ್ರೆಸ್ ಪಕ್ಷ ನೀರಿಗಾಗಿ ನಮ್ಮ ನಡೆ ,ನೀರಿನ ಕಡೆ ಪಾದಯಾತ್ರೆ ಮೂಲಕ ಹೋರಾಟವನ್ನು ಮಾಡುತ್ತಿದೆ ಎಂದು ನಾವು ರಾಮನಗರಕ್ಕೆ ತೆರಳಿ ಸುಮಾರು 16 ಕಿಲೋಮೀಟರು ದೂರ ಪಾದಯಾತ್ರೆಯಲ್ಲಿ ಭಾಗವಹಿಸಿದೆವು ,
ಡಾಕ್ಟರ್ ಈಶ್ವರ ನಾಯ್ಕ ಪುನಃ ಮಾತನಾಡಿ ರಾಜ್ಯಾದ್ಯಂತ ಪ್ರತಿಯೊಬ್ಬ ಕಾಂಗ್ರೆಸ್ ಪಕ್ಷದವರು ಹಾಗೂ ಪಕ್ಷಾತೀತವಾಗಿ ಕಾಂಗ್ರೆಸ್ ಬಿಜೆಪಿ, ಜೆಡಿಎಸ್, ಕನ್ನಡಪರ ಸಂಘಟನೆಗಳು, ಸಾಹಿತಿಗಳು ,ಕಲಾಭಿಮಾನಿಗಳು ಈ ಹೋರಾಟದಲ್ಲಿ ಪ್ರತಿಯೊಬ್ಬರು ಭಾಗಿಯಾಗಿ. ಎಂದು ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಜನತೆಗೆ ಮನವಿ ಮಾಡಿದರು .
ಉಪಸ್ಥಿತಿಯಲ್ಲಿ;- ಹೊನ್ನಾಳಿ ಅಹಿಂದ ಮುಖಂಡರುಗಳಾದ ಡಾಕ್ಟರ್ ಎಲ್ ಈಶ್ವರನಾಯ್ಕ, ಎಚ್ ಬಿ ಶಿವಯೋಗಿ, ಬಿ ಸಿದ್ದಪ್ಪ, ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷ ಎಚ್ ಎ ಉಮಾಪತಿ ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು.