ಹೊನ್ನಾಳಿ : ಹೊನ್ನಾಳಿ ನಗರದಲ್ಲಿ ನೂತನ ಬ್ಯಾಂಕ್‍ಗಳ ಶಾಖೆಗಳು ದಿನೇ ದಿನೇ ಆರಂಭಗೊಳ್ಳುತ್ತಿದ್ದು, ಹೊನ್ನಾಳಿ ಮುಂದುವರೆದಿದೇ ಎಂಬುದಕ್ಕೆ ಸಾಕ್ಷಿಯಾಗಿದೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ,ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಎಚ್‍ಡಿಎಫ್‍ಸಿ ಬ್ಯಾಂಕಿನ ನೂತನ ಖಾತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರು ಬ್ಯಾಂಕ್‍ಗಳಲ್ಲಿ ಯಾವ ರೀತಿ ಸಾಲ ಪಡೆಯುತ್ತಿರೋ, ಅದೇ ರೀತಿ ಸಾಲವನ್ನು ಮರು ಪಾವತಿ ಮಾಡುವ ಮೂಲಕ ಬ್ಯಾಂಕಿನ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಎಂಪಿ.ರೇಣುಕಾಚಾರ್ಯ ಹೇಳಿದರು.
ಬ್ಯಾಂಕ್‍ಗಳು ಸಾರ್ವಜನಿಕರ ಉಪಯೋಗಕ್ಕಾಗಿ ಇದ್ದು ಅವುಗಳ ಉಪಯೋಗವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಿ ಎಂದ ರೇಣುಕಾಚಾರ್ಯ, ಎಚ್‍ಡಿಎಫ್‍ಸಿ ಬ್ಯಾಂಕ್ ಭಾರತದ ನಂಬರ್ ಒನ್ ಪ್ರವೇಟ್ ಸೆಕ್ಟರ್ ಬ್ಯಾಂಕ್ ಆಗಿದೇ ಎಂದರು.
ಸರ್ಕಾರಿ ಬ್ಯಾಂಕ್‍ಗಳಲ್ಲಿ ಸಿಗುವ ರೀತಿಯಲ್ಲಿ ಎಚ್‍ಡಿಎಫ್‍ಸಿ ಬ್ಯಾಂಕ್‍ನಲ್ಲಿ ಸಾಲ ಸೌಲಭ್ಯಗಳು ದೊರೆಯುತ್ತಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ, ಬ್ಯಾಂಕಿನಿಂದ ಪಡೆದ ಸಾಲವನ್ನು ತೀರಿಸುವಂತೆ ಕಿವಿ ಮಾತು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವಾರು ಯೋಜನೆಗಳಲ್ಲಿ ಬ್ಯಾಂಕ್ ಗಳು ಪಾಲ್ಗೊಂಡು ಆರ್ಥಿಕವಾಗಿ ಹಿಂದುಗಳಿದವರಿಗೆ ಹಣಕಾಸು ಸೌಲಭ್ಯದ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಮುಖವಹಿಸುತ್ತಿವೆ ಎಂದರು.
ಸರ್ಕಾರದ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ಚಕ್ತಿ ಮುಂತಾದ ಹಲವಾರು ಯೋಜನೆಗಳಲ್ಲಿ ನರ್ಬಾಡ್ ಬ್ಯಾಂಕ್ ಗಳ ಮೂಲಕ ಸಾಲ ಸೌಲಭ್ಯಗಳನ್ನು ಹೊದಗಿಸುವಲ್ಲಿ ಬ್ಯಾಂಕ್‍ಗಳು ಸಹಕಾರಿಯಾಗಿವೆ ಎಂದರು.
ಈ ಸಂದರ್ಭ ಬ್ಯಾಂಕಿನ ಮ್ಯಾನೇಜರ್ ಸುರೇಶ್ ಹಿರೇಮಠ್, ಸುಮಾ ಎಂ.ಪಿ.ರೇಣುಕಾಚಾರ್ಯ, ಕರ್ನಾಟಕ ಸಾಬೂನು ಮಾರ್ಜಕ ನಿಗಮದ ನಿರ್ದೇಶಕ ಶಿವುಹುಡೇದ್ ಸೇರಿದಂತೆ ಮತ್ತಿತತರಿದ್ದರು.

Leave a Reply

Your email address will not be published. Required fields are marked *