ಹುಣಸಘಟ್ಟ: ಶಾಲಾ ಹಂತದಲ್ಲಿಯೇ ಕ್ರೀಡಾಪಟುಗಳ ಪ್ರತಿಭೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವುದು ಸೂಕ್ತವಾಗಿದೆ ಎಂದು ತಾಲೂಕು ಭಾಜಪ ಮಂಡಲ ಯುವ ಮೋರ್ಚಾ ಉಪಾಧ್ಯಕ್ಷ ದೇವುಗೌಡ ಹೇಳಿದರು.
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಲಿಂಗಾಪುರ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಬ್ಬಡ್ಡಿ ಪಂದ್ಯದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡ 12 ವಿದ್ಯಾರ್ಥಿಗಳು ಹಾಗೂ 3000 ಮೀಟರ್ ರನ್ನಿಂಗ್ ರೇಸ್ ನಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಹೇಮಾವತಿ ಇವರುಗಳಿಗೆ ಸನ್ಮಾನಿಸಿ ನೋಟ್ ಬುಕ್ ವಿತರಣೆ ಮಾಡಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದು ಅವರನ್ನು ಗುರುತಿಸಿ ಆ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ದೊರೆತಲ್ಲಿ ಉನ್ನತ ಸಾಧನೆ ಮಾಡಬಹುದು. ವಿದ್ಯಾರ್ಥಿಗಳಲ್ಲಿ ಜ್ಞಾನರ್ಜನೆ ಹೆಚ್ಚಿಸುವಲ್ಲಿ ಪಾಠ ಪ್ರವಚನಗಳು ಪೂರಕವಾದರೆ ಮಾನಸಿಕ ಹಾಗೂ ದೈಹಿಕವಾಗಿ ಪ್ರಬಲವಾಗಿ ಸಬಲರಾಗಲು ಕ್ರೀಡಾಕೂಟಗಳು ಸಹಕಾರಿ ಆ ನಿಟ್ಟಿನಲ್ಲಿ ನಮ್ಮೂರಿನ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಎರಡರಲ್ಲೂ ಪಾಲ್ಗೊಂಡು ಪ್ರತಿಭೆ ಅನಾವರಣಕ್ಕೆ ಮುಂದಾಗಿರುವುದು ಶಾಲೆಗೆ ಹಾಗೂ ಗ್ರಾಮದ ಹಿರಿಮೆಯನ್ನು ಹೆಚ್ಚಿಸಿದೆ ಎಂದರು.
ಕ್ರೀಡಾ ಪ್ರತಿಭೆಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗ್ರಾ ಪಂ ಉಪಾಧ್ಯಕ ರೇಖಾ ಗ್ರಾ ಪಂ ಸದಸ್ಯರಾದ ಉಷಾ ಸತೀಶ್, ಜ್ಯೋತಿ ಮುರುಗೇಶ್, ಶಾಲಾ ಮುಖ್ಯಶಿಕ್ಷಕ ಕುಮಾರಸ್ವಾಮಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಂಜಪ್ಪ ಗೌಡ್ರು ಗ್ರಾಮದ ಮುಖಂಡರಾದ ಕಡೆಮನೆ ಪ್ರಕಾಶ ಸುರೇಶ್ ತಾನೋಜಿ ರಾವ್ ಉಮೇಶ್ ಪರಶುರಾಮ್ ನಾಗೇಂದ್ರಪ್ಪ ಹಾಗೂ ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *