ದಾವಣಗೆರೆ , ಆಗಸ್ಟ್‌ 10):  ಭಾರತ ಚುನಾವಣಾ ಆಯೋಗ, ನವದೆಹಲಿ ರವರು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 ಗೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಹೊರಡಿಸಿದ್ದು, ಅದರಂತೆ ಜೂನ್‌ 30 ರಿಂದ ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು ಎನುಮೆರೇಷನ್ ನಮೂನೆಗಳೊಂದಿಗೆ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿರುತ್ತಾರೆ.

ಜಿಲ್ಲೆಯಲ್ಲಿ ಜೂನ್‌ 16 ,2026  ರ ವರೆಗಿನ ವರದಿಯನ್ವಯ ಒಟ್ಟು 14,99,282 ಮತದಾರರಿದ್ದು, ಸಂಬಂಧಿಸಿದ ಬಿಎಲ್‌ಒ ಗಳಿಗೆ ಅನುಗುಣವಾಗಿ ಎನುಮೆರೇಷನ್ ನಮೂನೆಗಳನ್ನು ಮುದ್ರಿಸಿ ವಿತರಿಸಲಾಗಿದೆ. ಜೂನ್‌ 30  ರಿಂದ ಪ್ರಾರಂಭವಾಗಿರುವ ಈ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಪ್ರಕ್ರಿಯೆಯು ಆಗಸ್ಟ್‌ 17 ರವರೆಗೆ ನಡೆಯಲಿದೆ.


ವಿಧಾನಸಭಾ ಕ್ಷೇತ್ರವಾರು ಎನುಮೆರೇಷನ್ ಹಂಚಿಕೆ ಮತ್ತು ಗಣಕೀಕರಣ ಪ್ರಗತಿ:

ದಾವಣಗೆರೆ ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳಲ್ಲಿ ವಿತರಿಸಲಾದ 14,99,282 ಎನುಮೆರೇಷನ್ ನಮೂನೆಗಳಲ್ಲಿ, ಆಗಸ್ಟ್‌ 10  ರವರೆಗೆ ಒಟ್ಟು 12,97,702 ನಮೂನೆಗಳನ್ನು ಗಣಕೀಕರಿಸಲಾಗಿದೆ.

103-ಜಗಳೂರು: ವಿತರಿಸಲಾದ ಒಟ್ಟು 2,00,836 ನಮೂನೆಗಳಲ್ಲಿ, ಬಿಎಲ್‌ಒ ರವರು 1,81,057 ನಮೂನೆಗಳನ್ನು ಯಶಸ್ವಿಯಾಗಿ ಗಣಕೀಕರಿಸಿದ್ದಾರೆ.

105-ಹರಿಹರ: ವಿತರಿಸಲಾದ ಒಟ್ಟು 2,11,023 ನಮೂನೆಗಳಲ್ಲಿ, 1,90,129 ನಮೂನೆಗಳು ಗಣಕೀಕರಣಗೊಂಡಿವೆ.

106-ದಾವಣಗೆರೆ ಉತ್ತರ: ವಿತರಿಸಲಾದ ಒಟ್ಟು 2,58,718 ನಮೂನೆಗಳಲ್ಲಿ, ಬಿಎಲ್‌ಒ ರವರು 1,98,413 ನಮೂನೆಗಳನ್ನು ಗಣಕೀಕರಿಸಿದ್ದಾರೆ.

107-ದಾವಣಗೆರೆ ದಕ್ಷಿಣ: ವಿತರಿಸಲಾದ ಒಟ್ಟು 2,27,996 ನಮೂನೆಗಳಲ್ಲಿ, 1,74,329 ನಮೂನೆಗಳು ಗಣಕೀಕರಣಗೊಂಡಿವೆ.

108-ಮಾಯಕೊಂಡ: ವಿತರಿಸಲಾದ ಒಟ್ಟು 1,97,048 ನಮೂನೆಗಳಲ್ಲಿ, 1,84,546 ನಮೂನೆಗಳ ಗಣಕೀಕರಣ ಪೂರ್ಣಗೊಂಡಿದೆ.

109-ಚನ್ನಗಿರಿ: ವಿತರಿಸಲಾದ ಒಟ್ಟು 2,03,628 ನಮೂನೆಗಳಲ್ಲಿ, 1,85,687 ನಮೂನೆಗಳು ಗಣಕೀಕರಣಗೊಂಡಿವೆ.

110-ಹೊನ್ನಾಳಿ: ವಿತರಿಸಲಾದ ಒಟ್ಟು 2,00,033 ನಮೂನೆಗಳಲ್ಲಿ, 1,83,541 ನಮೂನೆಗಳನ್ನು ಗಣಕೀಕರಿಸಲಾಗಿದೆ.

ಮನೆ ಮನೆ ಪರಿಶೀಲನೆ ಹಾಗೂ ವರ್ಗೀಕರಣ ವಿವರಗಳು:

ಆಗಸ್ಟ್‌ 10  ರವರೆಗೆ ಜಿಲ್ಲೆಯಲ್ಲಿ ಮತದಾರರ ಎನುಮೆರೇಷನ್ ನಮೂನೆಗಳ

Leave a Reply

Your email address will not be published. Required fields are marked *