ಹೊನ್ನಾಳಿ:ಅ;11; ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಇತಿಹಾಸದಲ್ಲಿಯೇ ಈ ಬಾರಿ ಅತ್ಯಧಿಕ ಅಂದರೆ ಶೇ 94.5ರಷ್ಟು ಸಾಲ ವಸೂಲಾತಿ ಮಾಡಿದ್ದು. ₹ 75 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ ಹೇಳಿದರು.

ಹಿರೇಕಲ್ಮಠದ ಸಮುದಾಯ ಭವನದಲ್ಲಿ ಸೋಮವಾರ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕಳೆದ ಬಾರಿ ₹ 44 ಲಕ್ಷ ಲಾಭಗಳಿಸಿತ್ತು, ಈ ಬಾರಿಯ ಸಾಧನೆಗೆ ಬ್ಯಾಂಕ್‌ನ ಆಡಳಿತ ಮಂಡಳಿ, ವ್ಯವಸ್ಥಾ-ಪಕರು, ಸಿಬ್ಬಂದಿ ಹಾಗೂ ಷೇರುದಾರರು ಕಾರಣರಾಗಿದ್ದು, ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಮುಂದಿನ ದಿನಗಳಲ್ಲಿ ನೂರಕ್ಕೆ ನೂರರಷ್ಟು ಸಾಲ ವಸೂಲಾತಿ ಮಾಡುವ ಮೂಲಕ ಹೆಚ್ಚು ಲಾಭ ಗಳಿಸಲು ಮತ್ತು ರೈತರಿಗೆ ಇನ್ನು ಹೆಚ್ಚು ಅನುಕೂಲವಾ ಗುವಂತೆ ಕಾರ್ಯೋನ್ಮುಖರಾಗುತ್ತೇವೆ ಎಂದರು.

ಸಂಘದ ಉಪಾಧ್ಯಕ್ಷ ಕುಬೇರನಾಯ್ಕ, ನಿರ್ದೇಶಕ ಕೆ.ವಿ. ನಾಗರಾಜ್, ನಿರ್ದೇಶಕ ಜಿ. ಶಂಕರಪ್ಪ ಬ್ಯಾಂಕಿನ ವಿವಿಧ ವಿಷಯಗಳ ಬಗ್ಗೆ ಪ್ರಸ್ತಾ-ಪಿಸಿದರು.

ನಿರ್ದೇಶಕ ಸಿ.ಎಚ್‌. ಸಿದ್ದಪ್ಪ ಅಂದಾಜು ಬಜೆಟ್‌ಗಿಂತ ಹೆಚ್ಚಿಗೆ ಖರ್ಚಾದ ಬಾಬುಗಳಿಗೆ ಮಂಜೂರಾತಿ ನೀಡುವಂತೆ ಕೋರಿದರು.

ನಿರ್ದೇಶಕ ಎಚ್.ಡಿ. ಸುನೀಲ್ ಅವರು ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ ಗಳಿಸಿರುವ ನಿವ್ವಳ ಲಾಭಾಂಶದ ವಿಂಗಡಣೆ ಮಾಡುವ ವಿಷಯ ಪ್ರಸ್ತಾಪಿಸಿಸದಸ್ಯರಿಂದ ಒಪ್ಪಿಗೆ ಪಡೆದರು.

1 ಸಾವಿರಕ್ಕಿಂತ ಕಡಿಮೆ ಷೇರು ಹೊಂದಿರುವ ಷೇರುದಾರರನ್ನು ಅನರ್ಹರೆಂದು ಪರಿಗಣಿಸಿ ಷೇರು ಮೊತ್ತವನ್ನು ಅಮಾನತ್ ಖಾತೆಗೆ ವರ್ಗಾವಣೆ ಮಾಡಲು ಮಂಜೂರಾತಿ ನೀಡಬೇಕು’ ಎಂದು ನಿರ್ದೇಶಕ ಎಂ.ಜಿ.ಆರ್. ಮಂಜುನಾಥ್ ಮನವಿ ಮಾಡಿದರು.

ಮಾಜಿ ಅಧ್ಯಕ್ಷ ಅರಬಗಟ್ಟೆ ರಮೇಶ್ ಹಾಗೂ ವ್ಯವಸ್ಥಾಪಕಿ ಸಿ.ಎನ್. ವಿಶಾಲಾಕ್ಷಿ ಅವರು ಷೇರುದಾರರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದರು.

ಸಭೆಯಲ್ಲಿ ನಿರ್ದೇಶಕರಾದ ಚಿನ್ನಿಕಟ್ಟಿ ಚೇತನ್, ರುದ್ರಮ್ಮ, ಆಶಾ, ಅನಸೂಯಮ್ಮ, ಚಿಕ್ಕೆರೆಹಳ್ಳಿ, ಕ್ಷೇತ್ರಾಧಿಕಾರಿ ಕುಬೇರನಾಯ್ಕ, ಸಿಬ್ಬಂದಿ ಶೃತಿ, ಮಹೇಶ್ವರಪ್ಪ ಇತರರು ಉಪಸ್ಥಿತರಿದ್ದರು.

ಬ್ಯಾಂಕಿನಲ್ಲಿ ಷೇರುದಾರರ ಮಕ್ಕಳುಗಳಿಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಆತ್ಮಸ್ಥೈರ್ಯ ತುಂಬಿದ ಬ್ಯಾಂಕಿನ ಆಡಳಿತ ಸಿಬ್ಬಂದಿಗಳು.

Leave a Reply

Your email address will not be published. Required fields are marked *