ದಾವಣಗೆರೆ ಮೇ.01
ಜಿಲ್ಲೆಯಲ್ಲಿ ಇದುವರೆಗೆ 10 ಕೊರೊನಾ ಪಾಸಿಟಿವ್
ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಡಬ್ಲ್ಯುಹೆಚ್‍ಓ
ನಿರ್ದೇಶನ ಹಾಗೂ ಎಪಿಡೆಮಿಕ್ ಡಿಸೀಸ್ ಕಾಯ್ದೆ 1897, ಕರ್ನಾಟಕ
ಡಿಸೀಸ್(ಕೋವಿಡ್-19) ರೆಗ್ಯುಲೇಷನ್ಸ್ 2020 ಪ್ರಕಾರ ಜಿಲ್ಲೆಯಲ್ಲಿ
ಕೊರೊನಾ ನಿಯಂತ್ರಣ ಹಿನ್ನೆಲೆ ಸಾಮಾಜಿಕ ಅಂತರ, ಮಾಸ್ಕ್
ಧರಿಸುವಿಕೆ ಮತ್ತು ಸಮರ್ಪ ಸ್ವಚ್ಚತೆ ಕುರಿತಂತೆ ಈ
ಕೆಳಕಂಡಂತೆ ಕ್ರಮಗಳನ್ನು ಜರುಗಿಸುವುದು
ಅವಶ್ಯಕವಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ 5 ಕ್ಕಿಂತ ಹೆಚ್ಚು ಜನರು
ಕೆಲಸ ಮಾಡುವ ಸ್ಥಳಗಳಲ್ಲಿ ಕಡ್ಡಾಯವಾಗಿ ಬಾಯಿ ಮತ್ತು
ಮೂಗನ್ನು ಮುಚ್ಚಿಕೊಳ್ಳುವಂತೆ ಮಾಸ್ಕ್ ಧರಿಸಬೇಕು.
ಮನೆಗಳಲ್ಲಿ ಬಳಸಿದ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಬಳಸಲಾದ
ಮಾಸ್ಕ್ ಮತ್ತು ಗ್ಲೋವ್ಸ್‍ಗಳನ್ನು ಸಮರ್ಪಕವಾಗಿ
ಕವರ್‍ಗಳಲ್ಲಿ ಅಥವಾ ಬ್ಯಾಗ್‍ಗಳಲ್ಲಿ ಕವರ್ ಮಾಡಿ ತ್ಯಾಜ್ಯ
ಸಂಗ್ರಹಿಸುವವರಿಗೆ ನೀಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ
ಉಗುಳುವುದು, ಮೂತ್ರ ವಿಸರ್ಜನೆ ಮಾಡುವುದು, ಕಸ
ಹಾಕುವಂತಹ ಸಾರ್ವಜನಿಕ ಉಪದ್ರವಗಳನ್ನು
ನಿಷೇಧಿಸಲಾಗಿದ್ದು, ಹೀಗೆ ಮಾಡಿದಲ್ಲಿ ಸಾರ್ವಜನಿಕ ಅಪರಾಧವೆಂದು
ಪರಿಗಣಿಸಲಾಗುವುದು. ಜೊತೆಗೆ ಇವುಗಳನ್ನು ಒಂದು ಬಾರಿ
ಉಲ್ಲಂಘಿಸಿದಲ್ಲಿ ರೂ.500 ಮತ್ತು ಎರಡನೇ ಮತ್ತು
ಮುಂದುವರೆದ ಉಲ್ಲಂಘನೆಗಳಿಗೆ ರೂ.1000 ದಂಡ
ವಿಧಿಸಲಾಗುವುದು.
ಯಾವುದೇ ವ್ಯಕ್ತಿ, ಸಂಸ್ಥೆಗಳು ಮೇಲ್ಕಂಡ
ಸೂಚನೆಗಳನ್ನು ಉಲ್ಲಂಘಿಸಿದಲ್ಲಿ ಎಪಿಡೆಮಿಕ್ ಡಿಸೀಸ್ ಕಾಯ್ದೆ 1897,
ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಐಪಿಸಿ ಅಡಿಯಲ್ಲಿ ಕ್ರಮ
ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಆದೇಶಿಸಿದ್ದಾರೆ.