ದಾವಣಗೆರೆ ಮೇ.02
ಕೋವಿಡ್ – 19 ವೈರಾಣು ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‍ಡೌನ್
ಜಾರಿಗೊಳಿಸಲಾಗಿದ್ದು, ಈ ಸಮಯದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ
ಸಿಲುಕಿಕೊಂಡಿರುವ ಹೊರ ರಾಜ್ಯದ ವಲಸೆ ಕಾರ್ಮಿಕರು,
ವಿದ್ಯಾರ್ಥಿಗಳು, ಪ್ರವಾಸಿಗರು, ಯಾತ್ರಿಗಳು ದಾವಣಗೆರೆ
ಜಿಲ್ಲೆಯಿಂದ ಹೊರರಾಜ್ಯಕ್ಕೆ ಪ್ರಯಾಣ ವೆಚ್ಚ ಭರಿಸಿ ಹೋಗಲು
ಇಚ್ಚಿಸುವವರು ಮತ್ತು ಹೊರರಾಜ್ಯಗಳಿಂದ ದಾವಣಗೆರೆ ಜಿಲ್ಲೆಗೆ
ಆಗಮಿಸಲು ಇಚ್ಚಿಸುವವರು ಸೇವಾಸಿಂಧು ಆನ್‍ಲೈನ್ ಪೋರ್ಟಲ್‍ನಲ್ಲಿ
hಣಣಠಿ://sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ ಈ ಲಿಂಕ್‍ನ್ನು ಬಳಸಿ ಅಥವಾ ಈ

ಕೆಳಕಂಡ ಸೇವಾಸಿಂಧು ಕೇಂದ್ರಗಳನ್ನು ಸಂಪರ್ಕಿಸಿ ಅರ್ಜಿ
ಸಲ್ಲಿಸಬಹುದಾಗಿದೆ.
ಸೇವಾಸಿಂಧು ಕೇಂದ್ರಗಳ ವಿವರ : ಉಪವಿಭಾಗಾಧಿಕಾರಿಗಳ
ಕಚೇರಿ, ದಾವಣಗೆರೆ. ಮಹಾನಗರಪಾಲಿಕೆ, ದಾವಣಗೆರೆ. ಎಲ್ಲಾ
ತಾಲ್ಲೂಕು ಕಚೇರಿಗಳು. ಹರಿಹರ ನಗರಸಭೆ. ಚನ್ನಗಿರಿ
ಪುರಸಭೆ. ಹೊನ್ನಾಳಿ ಮತ್ತು ಜಗಳೂರಿನ ಪಟ್ಟಣ
ಪಂಚಾಯ್ತಿಗಳನ್ನು ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *