ದಾವಣಗೆರೆ ಮೇ.03
ದಾವಣಗೆರೆಯಲ್ಲಿ ಇಂದು ಮತ್ತೆ ಹೊಸದಾಗಿ 21 ಕೊರೊನಾ
ಪಾಸಿಟಿವ್ ಪ್ರಕರಣಗಳು ಪ್ರಾಥಮಿಕ ಫಲಿತಾಂಶದ ಪ್ರಕಾರ
ವರದಿಯಾಗಿದ್ದು, ಒಟ್ಟು 28 ಸಕ್ರಿಯ ಪ್ರಕರಣಗಳಿಗೆ
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪತ್ರಕರ್ತರಿಗೆ ಮಾಹಿತಿ
ನೀಡಿದ ಅವರು, ರೋಗಿ ಸಂಖ್ಯೆ 533 ಮತ್ತು 556 ಕ್ಕೆ
ಸಂಬಂಧಿಸಿದಂತೆ ಮೇ 1 ರಂದು 94, ಮೇ 2 ರಂದು 72 ಹಾಗು ಮೇ
3 ರಂದು 164 ಒಟ್ಟು 330 ಗಂಟಲು ದ್ರವ ಮಾದರಿಗಳನ್ನು
ಪರೀಕ್ಷೆಗೆ ಕಳುಹಿಸಲಾಗಿದ್ದು ‘’ಎ’ ಕೆಟಗರಿಯಲ್ಲಿದ್ದ 37
ಸ್ಯಾಂಪಲ್‍ಗಳ ಪೈಕಿ ಇಂದು 21 ಪ್ರಕರಣಗಳು ಪಾಸಿಟಿವ್ ಎಂದು
ಪ್ರಾಥಮಿಕ ಫಲಿತಾಂಶ ವರದಿಯಲ್ಲಿ ತಿಳಿದುಬಂದಿದೆ. ಈ ಪಾಸಿಟಿವ್
ಕೇಸ್‍ಗಳ ಸಂಪರ್ಕ ಮಾಹಿತಿಯನ್ನು ಇನ್ನೊಂದು
ಖಚಿತಪಡಿಸುವ ಪರೀಕ್ಷೆ ನಂತರ ತಿಳಿಸಲಾಗುವುದು. ಪ್ರತಿ
ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರು ಇರುವ
ಏರಿಯಾಗಳನ್ನು ನೋಡಿಕೊಂಡು ಕಂಟೈನ್‍ಮೆಂಟ್ ಮತ್ತು
ಬಫರ್ ಝೋನ್ ಗುರುತಿಸಿ ನಿಯಮಾನುಸಾರ ಕ್ರಮ
ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಹಿನ್ನೆಲೆ ಲಾಕ್‍ಡೌನ್‍ನ್ನು ಹೇಗೆ
ಮುಂದುವರೆಸಿ ಬಿಗಿ ಕ್ರಮ ಕೈಗೊಳ್ಳಬಹುದೆಂಬ ಬಗ್ಗೆ ಚರ್ಚಿಸಲು
ಸಂಸದರು, ಶಾಸಕರು ಮತ್ತು ಜನಪ್ರತಿನಿಧಿಗಳೊಂದಿಗೆ
ಸಭೆ ಕರೆಯಲಾಗಿದ್ದು, ಸಂಸದರು ಜಿಲ್ಲೆಯಲ್ಲಿ ಕೊರೊನಾ
ಪ್ರಕರಣಗಳು ಇನ್ನೂ ಹೆಚ್ಚು ದಾಖಲಾದಲ್ಲಿ ಕಂಟೈನ್‍ಮೆಂಟ್
ಝೋನ್ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳನ್ನು ಹೊರತುಪಡಿಸಿ
ಸಂಪೂರ್ಣ ಸೀಲ್‍ಡೌನ್ ಮಾಡಬೇಕೆಂದು ಸೂಚಿಸಿದ್ದು, ಇದೀಗ

ಹೊಸದಾಗಿ 21 ಪ್ರಕರಣಗಳು ವರದಿಯಾದ ಬಗ್ಗೆ ಮಾಹಿತಿ
ಲಭ್ಯವಾಗಿದೆ. ಜಿಲ್ಲೆಯಲ್ಲಿ ಈಗ 28 ಸಕ್ರಿಯ ಪ್ರಕರಣ, 2
ಗುಣಮುಖ ಮತ್ತು 1 ಸಾವು ಸಂಭವಿಸಿರುವ ಹಿನ್ನೆಲೆ ಬಿಗಿ ಕ್ರಮ
ಕೈಗೊಳ್ಳಲಾಗುವುದು ಎಂದರು.
ಸಂಸದರಾದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ದಾವಣಗೆರೆ ದಕ್ಷಿಣ,
ಉತ್ತರ ಮತ್ತು ಮಾಯಕೊಂಡ ವಿಧಾನಸಭಾ
ಕ್ಷೇತ್ರಗಳಲ್ಲಿ ಯಾವ ರೀತಿ ಲಾಕ್‍ಡೌನ್ ಜಾರಿಗೊಳಿಸಬೇಕೆಂಬ ಬಗ್ಗೆ
ಸಭೆ ನಡೆಸಿ ಚರ್ಚಿಸಲಾಯಿತು. ಹಾಗೂ ನಗರದ ಎರಡು ಪಾಸಿಟಿವ್
ಪ್ರಕರಣ ಇರುವ ಎಪಿಸೆಂಟರ್‍ಗಳಾದ ಬಾಷಾನಗರ ಮತ್ತು
ಜಾಲಿನಗರದಲ್ಲಿ ಹೇಗೆ ಕ್ರಮ ವಹಿಸಬೇಕೆಂಬ ಬಗ್ಗೆ ಚರ್ಚೆ
ನಡೆಸಲಾಗಿದ್ದು, ಈ ಎರಡು ಕಂಟೈನ್‍ಮೆಂಟ್ ಝೋನ್‍ಗಳಲ್ಲಿ
ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿರುತ್ತದೆ. ಈ ಪ್ರದೇಶದ
ಜನಗಳಿಗೆ ಅಗತ್ಯವಾದ ವಸ್ತುಗಳನ್ನು ತಲುಪಿಸುವ
ಕೆಲಸವನ್ನು ಜಿಲ್ಲಾಡಳಿತ ಮಾಡುತ್ತದೆ. ಈ
ಝೋನ್‍ನಲ್ಲಿರುವವರು ಜಿಲ್ಲಾಡಳಿತ ಮತ್ತು ಪಾಲಿಕೆ
ಸಹಾಯವಾಣಿಗೆ ಕರೆ ಮಾಡಿ ತಮ್ಮ ಅಗತ್ಯ ವಸ್ತುಗಳ ಬಗ್ಗೆ
ಮಾಹಿತಿ ನೀಡಿ ತರಿಸಿಕೊಳ್ಳಬಹುದು ಎಂದರು.
ದುರಾದೃಷ್ಟವೆಂಬಂತೆ ಇದೀಗ ಮತ್ತೆ 21 ಪಾಸಿಟಿವ್ ಪ್ರಕರಣಗಳು
ಬಂದಿವೆ ಎಂಬ ಮಾಹಿತಿ ಬಂದಿದೆ. ಮೂರು ದಿನಗಳಿಂದ
ಕಳುಹಿಸಲಾಗಿರುವ 330 ಸ್ಯಾಂಪಲ್‍ಗಳಲ್ಲಿ ಇಂದು 37 ಸ್ಯಾಂಪಲ್ ರನ್
ಮಾಡಲಾಗಿದ್ದು ಇದರಲ್ಲಿ 21 ಪಾಸಿಟಿವ್ ಪ್ರಕರಣಗಳು ಬಂದಿವೆ.
ದಾವಣಗೆರೆ ಗ್ರೀನ್ ವಲಯಕ್ಕೆ ಹೋಗಿ, ಕಿತ್ತಳೆ ಝೋನ್‍ಗೆ
ಬಂದಿತ್ತು. ಮುಂದೆ ರೆಡ್ ಝೋನ್‍ಗೆ ಹೋಗುವ
ಅಪಾಯವಿರುವುದರಿಂದ ಕಂಟೈನ್‍ಮೆಂಟ್ ಝೋನ್ ಸೇರಿದಂತೆ
ಎಲ್ಲ ಸಾರ್ವಜನಿಕರು ಹೊರಗೆ ಓಡಾಡದಂತೆ ಸಹಕರಿಸಬೇಕು.
ಸಾಮೂಹಿಕ ನಮಾಜ್ ಮಾಡಬಾರದು. ಹಾಗೇನಾದರೂ ಹೊರಗೆ
ಓಡಾಡುವುದು, ಗುಂಪು ಸೇರುವುದು, ಸಾಮೂಹಿಕ ಪ್ರಾರ್ಥನೆ
ಸಲ್ಲಿಸುವುದು ಕಂಡು ಬಂದಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮ
ಕೈಗೊಳ್ಳಲಿದೆ. ಎಲ್ಲರೂ ಅತ್ಯಂತ ಜವಾಬ್ದಾರಿಯಿಂದ
ನಡೆದುಕೊಳ್ಳುವ ಮೂಲಕ ಕೋವಿಡ್ 19 ನಿಯಂತ್ರಿಸಲು
ಸಹಕರಿಸಬೇಕು.
ಇದೀಗ ಹೊಸದಾಗಿ 21 ಪ್ರಕರಣ ಬಂದ ಹಿನ್ನೆಲೆಯಲ್ಲಿ ಅಗತ್ಯ
ವಸ್ತುಗಳ ಅಂಗಡಿ, ಸೇವೆ ಹೊರತುಪಡಿಸಿ ಎಲ್ಲ
ಚಟುವಟಿಕೆಗಳನ್ನು ಬಂದ್ ಮಾಡಬೇಕು. ಎಲ್ಲರೂ ಅಂತರ

ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
ಜೊತೆಗೆ ಮನೆಯಿಂದ ಅನಗತ್ಯವಾಗಿ ಹೊರಗೆ ಅಡ್ಡಾಡಬಾರದು.
ಯಾರಿಗೇ ಆಗಲಿ ಶೀತ, ಕೆಮ್ಮು, ನೆಗಡಿ, ಜ್ವರ ಬಂದಲ್ಲಿ
ಜಿಲ್ಲಾಸ್ಪತ್ರೆಗೆ ಬಂದು ತೋರಿಸಿಕೊಳ್ಳಬೇಕು ಎಂದು ಕಿವಿ ಮಾತು
ಹೇಳಿದರು.
ವಿಧಾನ ಪರಿಷತ್ ಶಾಸಕರಾದ ಅಬ್ದುಲ್ ಜಬ್ಬಾರ್ ಮಾತನಾಡಿ, ಇಂದು
ಹೊಸದಾಗಿ 21 ಕೊರೊನಾ ಪಾಸಿಟಿವ್ ಪ್ರಕರಣ
ವರದಿಯಾಗಿರುವುದು ಕೆಟ್ಟ ಸುದ್ದಿಯಾಗಿದ್ದು, ಜನರು
ಮನೆಯಲ್ಲೇ ಇದ್ದು ಕಾನೂನಿನ್ವಯ ನಡೆದುಕೊಳ್ಳಬೇಕು.
ಇದನ್ನು ಮೀರಿದಲ್ಲಿ ಮುಲಾಜಿಲ್ಲದೇ ಕ್ರಮ
ಕೈಗೊಳ್ಳಲಾಗುವುದು. ಎಲ್ಲರೂ ಮನೆಯಲ್ಲೇ ಇದ್ದು
ಕೊರೊನಾ ನಿಯಂತ್ರಿಸಲು ಸಹಕರಿಸಬೇಕೆಂದರು.
ಬಫರ್‍ಝೋನ್‍ನಲ್ಲಿ ಮದ್ಯದಂಗಡಿ ಇತರೆ ಆರ್ಥಿಕ ಚಟುವಟಿಕೆ
ಬೇಡ : ಸಂಸದರಾದ ಜಿ.ಎಂ.ಸಿದ್ದೇಶ್ವರವರು
ಪತ್ರಿಕಾಗೋಷ್ಟಿಗೂ ಮುನ್ನ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ
ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ನಗರದಲ್ಲಿ
ಮದ್ಯದಂಗಡಿ ಮತ್ತು ಇನ್ನಿತರೆ ಆರ್ಥಿಕ ಚಟುವಟಿಕೆ ಆರಂಭಿಸಿದರೆ
ಜನದಟ್ಟಣೆ ನಿಯಂತ್ರಣದೊಂದಿಗೆ ಕೊರೊನಾ ನಿಯಂತ್ರಣ
ಕಷ್ಟಸಾಧ್ಯವಾಗುವುದರಿಂದ ಬಫರ್ ಝೋನ್‍ನ ವ್ಯಾಪ್ತಿಗೆ ಬರುವ
ಪಾಲಿಕೆಯ 45 ವಾರ್ಡುಗಳಲ್ಲಿ ಮದ್ಯದಂಗಡಿ ಮತ್ತು ಇನ್ನಿತರೆ
ಆರ್ಥಿಕ ಚಟುವಟಿಕೆಯನ್ನು ಬಂದ್ ಮಾಡಬಹುದೆಂದರು.
ಪತ್ರಿಕಾಗೋಷ್ಟಿಯಲ್ಲಿ ಎಸ್.ಪಿ.ಹನುಮಂತರಾಯ, ಜಿ.ಪಂ. ಸಿಇಓ
ಪದ್ಮಾ ಬಸವಂತಪ್ಪ, ಇದ್ದರು.

Leave a Reply

Your email address will not be published. Required fields are marked *