ದಾವಣಗೆರೆ ಜಿಲ್ಲೆ;-ಹೊನ್ನಾಳಿ ಪಟ್ಟಣ ಪಂಚಾಯಿತಿಯಲ್ಲಿ ಸೇವಾಸಿಂದು ಕೋವಿಡ್ 19 ಅಡಿಯಲ್ಲಿ ಹೊನ್ನಾಳಿ ಪಟ್ಟಣ ಪಂಚಾಯಿತಿಯಿಂದ
ಹೊರ ರಾಜ್ಯಗಳಿಗೆ ಹೋಗುವವರಿಗೆ ಅರ್ಜಿ ಸಲ್ಲಿಸುವ ಸೇವಾಸಿಂಧು ಕೇಂದ್ರವನ್ನು ಹೊನ್ನಾಳಿ ಶಾಸಕರಾದ ಎಮ್ ಪಿ ರೇಣುಕಾಚಾರ್ಯರವರು ಬಟನ್ ಒತ್ತುವುದರ ಮೂಲಕ ಉದ್ಗಾಟನೆ ಮಾಡಿದರು.
ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಾದ ಹೆಚ್.ಎಂ ವೀರಭದ್ರಯ್ಯನವರು ಮಾತನಾಡಿ ಹೊರ ರಾಜ್ಯದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ದಾವಣಗೆರೆ ಜಿಲ್ಲೆಯಿಂದ ಹೊರ ರಾಜ್ಯಕ್ಕೆ ಪ್ರಯಾಣ ವೆಚ್ಚವನ್ನು ಬರೆಸಿ ಹೋಗಲು ಹಿಚ್ಚಿಸುವವರು ಮತ್ತು ಹೊರ ರಾಜ್ಯಗಳಿಂದ ದಾವಣಗೆರೆ ಜಿಲ್ಲೆಗೆ ಆಗಮಿಸಲು ಸೇವಾ ಸಿಂದು ಕೇಂದ್ರಗಳನ್ನು ಸಂರ್ಪಕಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ರಾಜಸ್ಥಾನದಿಂದ ಬಂದ ವಲಸೆ ಕಾರ್ಮಿಕರು 6 ಜನ , ಉತ್ತರಪ್ರದೇಶದಿಂದ ಬಂದ 10 ಜನ ವಲಸೆ ಕಾರ್ಮೀಕರು ಅರ್ಜಿಯನ್ನು
ಸಲ್ಲಿಸಿದ್ದರು
ಇವರುಗಳ ಉಪಸ್ಥಿತಿಯಲ್ಲಿ;-ಎಂ.ಪಿ ರೇಣುಕಾಚಾರ್ಯ ಹಾಲಿ ಶಾಸಕರು, ತಾಲೂಕಿನ ದಂಡಾಧಿಕಾರಿಗಳಾದ ತುಷಾರ್ ಬಿ ಹೊಸೂರಾ, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಾದ ಹೆಚ್.ಎಂ ವೀರಭದ್ರಯ್ಯನವರು ಮುಂತಾದವರು ಸಹ ಭಾಗಿಯಾಗಿದ್ದರು.