ದಾವಣಗೆರೆ ಮೇ.03
ನಗರಾಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ
ಬಿ.ಎ ಬಸವರಾಜ ಇವರು ಮೇ.4 ಮತ್ತು 5 ರಂದು ಜಿಲ್ಲಾ ಪ್ರವಾಸ
ಕೈಗೊಳ್ಳಲಿದ್ದಾರೆ.
ಮೇ 4 ರಂದು ಮಧ್ಯಾಹ್ನ 2.30 ಗಂಟೆಗೆ ಶಿವಮೊಗ್ಗದಿಂದ
ರಸ್ತೆ ಮೂಲಕ ಹೊರಟು ಮಧ್ಯಾಹ್ನ 4 ಗಂಟೆಗೆ ದಾವಣಗೆರೆಗೆ
ಆಗಮಿಸುವರು. ಸಂಜೆ 5 ರಿಂದ 6 ಗಂಟೆಯವರೆಗೆ ಪ್ರವಾಸಿ
ಮಂದಿರ (ಸಕ್ರ್ಯೂಟ್ ಹೌಸ್) ಇಲ್ಲಿ ಸಂಸದರು ಹಾಗೂ
ಶಾಸಕರೊಂದಿಗೆ ಚರ್ಚೆ ನಡೆಸುವರು.
ಮೇ 5 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ
ಜಿಲ್ಲಾóಧಿಕಾರಿಗಳ ಕಚೇರಿಯಲ್ಲಿ ಮಾಯಕೊಂಡ, ದಾವಣಗೆರೆ
ದಕ್ಷಿಣ ಮತ್ತು ಉತ್ತರ ವಿಧಾನಸಭೆ ಕ್ಷೇತ್ರಗಳಲ್ಲಿನ
ಕೋವಿಡ್-19 ವೈರಾಣು ನಿಯಂತ್ರಣದ ಕುರಿತು
ಕೈಗೊಳ್ಳಲಾಗಿರುವ ಕ್ರಮದ ಬಗ್ಗೆ ಹಾಗೂ ಅಭಿವೃದ್ದಿ
ಕಾರ್ಯಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ
ನಡೆಸುವರು.
ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ಜಿಲ್ಲಾಧಿಕಾರಿಗಳ
ಕಚೇರಿಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ
ನಡೆಸುವರು. ಮಧ್ಯಾಹ್ನ 3 ಗಂಟೆಗೆ ದಾವಣಗೆರೆ ಯಿಂದ ರಸ್ತೆ
ಮೂಲಕ ಹೊರಟು ಸಂಜೆ 6 ಗಂಟೆಗೆ ಬೆಂಗಳೂರು
ತಲುಪಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.