ದಾವಣಗೆರೆ ಮೇ.04
ಲಾಕ್‍ಡೌನ್ ಸನ್ನಿವೇಶದಲ್ಲಿ ಉದ್ಯಮಗಳು ಸಾಮಾನ್ಯವಾಗಿ
ಕಾರ್ಯನಿರ್ವಹಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದು, ಹಣದ
ಬಿಕ್ಕಟ್ಟನ್ನು ಗಮನದಲ್ಲಿರಿಸಿಕೊಂಡು ಭವಿಷ್ಯ ನಿಧಿಯ
ಸಂಸ್ಥೆಯು ನಿಧಿ ಯೋಜನೆಯಡಿಯಲ್ಲಿ ಬರುವ
ಉದ್ಯೋಗದಾತರ ಅನುಕೂಲಕ್ಕಾಗಿ ಮಾಸಿಕ ಎಲೆಕ್ಟ್ರಾನಿಕ್ ಚಲನ್
ಕಮ್ ರಿಟರ್ನ್ ಇಸಿಆರ್(ಇಅಖ) ಸಲ್ಲಿಸುವಿಕೆ ಮತ್ತು ಆ ಚಲನ್‍ನ ಭವಿಷ್ಯ
ನಿಧಿ ವಂತಿಗೆಯನ್ನು ಪಾವತಿ ಮಾಡುವ ವಿಧಾನದಿಂದ ಬೇರ್ಪಡಿಸಿದೆ.
ಈ ಬದಲಾವಣೆಯಿಂದ ಇಸಿಆರ್ ಸಲ್ಲಿಕೆ ಮತ್ತು ಹಣ
ಪಾವತಿಸುವುದನ್ನು ಏಕಕಾಲದಲ್ಲಿ ಮಾಡುವ
ಅಗತ್ಯವಿರುವುದಿಲ್ಲ.
ಮೇಲಿನ ಬದಲಾವಣೆಯಿಂದ ಭವಿಷ್ಯ ನಿಧಿ ಯೋಜನೆಯಡಿಯಲ್ಲಿ
ಬರುವ ಉದ್ಯೋಗದಾತರಿಗೆ ಮತ್ತು ನೌಕರರಿಗೆ
ಅನುಕೂಲವಾಗಲಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ
ಪ್ಯಾಕೇಜ್ ಅಡಿಯಲ್ಲಿ ಅರ್ಹವಾದ ಸಂಸ್ಥೆಗಳು ಸಮಯಕ್ಕೆ
ಸರಿಯಾಗಿ ಇಸಿಆರ್ ಸಲ್ಲಿಸುವುದರಿಂದ ಉದ್ಯೋಗದಾತ ಮತ್ತು
ಉದ್ಯೋಗಿಗಳ ಒಟ್ಟು 24% ವಂತಿಗೆಯನ್ನು ಕೇಂದ್ರ
ಸರ್ಕಾರವು ಭರಿಸುವ ಪ್ರಕ್ರಿಯೆಗೆ ಅನುಕೂಲವಾಗಲಿದೆ. ಇಸಿಆರ್
ಮೊದಲೇ ಸಲ್ಲಿಸಿ ನಿಗದಿತ ಸಮಯದೊಳಗೆ ವಂತಿಗೆಯನ್ನು
ಪಾವತಿಸುವುದರಿಂದ ಭವಿಷ್ಯ ನಿಧಿ ಸಂಸ್ಥೆಯಿಂದ ಯಾವುದೆ ದಂಡ
ವಿಧಿಸಲಾಗುವುದಿಲ್ಲ .
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ
ಲಾಭವನ್ನು ಪಡೆಯಲು ನಿಗದಿತ ಸಮಯದೊಳಗೆ ಇಸಿಆರ್
ಸಲ್ಲಿಕೆ ಕಡ್ಡಾಯವಾಗಿರುತ್ತದೆ. ಭವಿಷ್ಯ ನಿಧಿ ಸಂಸ್ಥೆ
ಶಿವಮೊಗ್ಗದಡಿಯಲ್ಲಿ ಒಟ್ಟು 1139 ಸಂಸ್ಥೆಗಳು ಈ ಯೋಜನೆಗೆ
ಅರ್ಹವಾಗಿದ್ದು, ಈವರೆಗೆ 759 ಸಂಸ್ಥೆಗಳು ಇಸಿಆರ್ ಸಲ್ಲಿಸಿ ಈ
ಯೋಜನೆಯ ಲಾಭವನ್ನು ಪಡೆದುಕೊಂಡಿವೆ. ಉಳಿದ 389
ಸಂಸ್ಥಗಳು ನಿಗದಿತ ಸಮಯದೊಳಗೆ ಇಸಿಆರ್ ಸಲ್ಲಿಸಿ (ಭವಿಷ್ಯ
ನಿಧಿ ಹಣವನ್ನು ಇಸಿಆರ್ ಸಲ್ಲಿಸಿದ ನಂತರವೂ ಪಾವತಿಸಲು
ಅವಕಾಶವಿದೆ). ನಿಗದಿತ ಸಮಯದೊಳಗೆ ವಂತಿಗೆಯನ್ನು
ಪಾವತಿಸುವುದರಿಂದ ಉದ್ಯೋಗದಾತರಿಗೆ ಯಾವುದೇ ದಂಡ
ವಿಧಿಸಲಾಗುವುದಿಲ್ಲ. ಈ ಯೋಜನೆಯ ಲಾಭವನ್ನು ಅರ್ಹ ಎಲ್ಲಾ
ಉದ್ಯೋಗದಾತ ಸಂಸ್ಥೆಗಳು ಪಡೆಯಬಹುದು.
ಏ.20 ರ ಅವಧಿಗೆ ಭವಿಷ್ಯ ನಿಧಿ ಕಚೇರಿ ಶಿವಮೋಗ್ಗದಡಿಯಲ್ಲಿ
ಬರುವ ಸದಸ್ಯರಿಗೆ ಕೋವಿಡ್-19ರ ಪರಿಸ್ಥಿತಿಯಲ್ಲಿ ಜಾರಿಗೆ ತಂದ
ಅಡ್ವಾನ್ಸ್ ಹಣದ ಪ್ರಯೋಜನವನ್ನು 1516 ಸದಸ್ಯರು ಪಡೆದಿದ್ದು,
ಒಟ್ಟು ನಾಲ್ಕು ಕೋಟಿ ಐವತ್ತು ಮೂರು ಲಕ್ಷ ಹಣವನ್ನು
ಮಂಜೂರು ಮಾಡಲಾಗಿದೆ.
ಲಾಕ್‍ಡೌನ್ ಅವಧಿಯಲ್ಲಿ ಪಿಂಚಣಿದಾರರ ಕಷ್ಟವನ್ನು ತಗ್ಗಿಸಲು
ಏಪ್ರಿಲ್ 2020 ರ ಪಿಂಚಣಿಯನ್ನು ಏಪ್ರಿಲ್ ತಿಂಗಳಲ್ಲಿಯೇ ಇಪಿಎಫ್
ವಿತರಿಸಿದೆ. 25762 ಪಿಂಚಣಿದಾರರಿಗೆ ಒಟ್ಟು ಮೂರು ಕೋಟಿ
ಎಂಬತ್ತೈದು ಲಕ್ಷ ಹಣವನ್ನು ಏ.30 ಕ್ಕೆ ವಿತರಿಸಲಾಗಿದೆ. ಹೆಚ್ಚಿನ
ಮಾಹಿತಿಗಾಗಿ ಭವಿಷ್ಯ ನಿಧಿ ಕಚೇರಿಯನ್ನು ದೂರವಾಣಿ ಮೂಲಕ
ಸಂರ್ಪಕಿಸಬಹುದಾಗಿದೆ ಎಂದು ಶಿವಮೊಗ್ಗ ಭವಿಷ್ಯ ನಿಧಿ ಕಚೇರಿ
ಆಯುಕ್ತ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.