ದಾವಣಗೆರೆ ಮೇ.07
ಕೋವಿಡ್ – 19 ಮಹಾಮಾರಿ ರೋಗ ನಿಯಂತ್ರಣಕ್ಕೆ ವಿಧಿಸಿರುವ
ಲಾಕ್‍ಡೌನ್‍ನಿಂದಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿನ ತೋಟಗಾರಿಕೆ
ಬೆಳೆಗಾರರಿಗೆ ಅನೇಕ ತೊಂದರೆಗಳು ಉಂಟಾಗುತ್ತಿದ್ದು,
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ
ಯೋಜನೆಯಡಿ ರೈತರನ್ನು ಆರ್ಥಿಕವಾಗಿ ಪ್ರಸ್ತುತ
ಸಂದರ್ಭದಲ್ಲಿ ಬಲಪಡಿಸಬೇಕಾಗಿದೆ.
ಆದ್ದರಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ರೈತ ಬಾಂಧವರು
ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ, ನಿರ್ವಹಣೆ,
ಪುನಶ್ಚೇತನ, ಈರುಳ್ಳಿ ಶೇಖರಣಾ ಘಟಕಗಳ ನಿರ್ಮಾಣ, ಇಲಾಖಾ
ತೋಟಗಾರಿಕೆ ಕ್ಷೇತ್ರಗಳಲ್ಲಿ ಅನುಮೋದಿತ ಕಾಮಗಾರಿಗಳು,
ಪೌಷ್ಟಿಕ ತೋಟಗಳ ನಿರ್ಮಾಣ, ಕೃಷಿಹೊಂಡ ಮತ್ತು ಕೊಳವೆಬಾವಿ
ಮರುಪೂರಣಾ ಘಟಕಗಳ ನಿರ್ಮಾಣ ಮತ್ತು ಇತರೆ ಮಣ್ಣು
ಮತ್ತು ನೀರಿನ ಸಂರಕ್ಷಣೆ ಕಾಮಗಾರಿಗಳನ್ನು ಈ ಕೂಡಲೇ
ಕೈಗೆತ್ತಿಕೊಳ್ಳಬಹುದಾಗಿದೆ.
ಈ ವಿಚಾರವಾಗಿ ಜಿಲ್ಲೆಯ ರೈತಬಾಂಧವರು ಈ ಕೂಡಲೇ ನಿಮಗೆ
ಸಂಬಂಧಿಸಿದ ತಾಲ್ಲೂಕಿನ ಹಿರಿಯ ಸಹಾಯಕ ನಿರ್ದೇಶಕರು
ಮತ್ತು ಹೋಬಳಿಯ ರೈತ ಸಂಪರ್ಕ ಕೇಂದ್ರದ ಸಹಾಯಕ
ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ತಾಲ್ಲೂಕಿನ ಹಿರಿಯ ಸಹಾಯಕ
ತೋಟಗಾರಿಕೆ ನಿರ್ದೇಶಕರುಗಳನ್ನು ದೂರವಾಣಿ ಮೂಲಕ
ಸಂಪರ್ಕಿಸಬಹುದು. ಹಿರಿಯ ಸಹಾಯಕ ತೋಟಗಾರಿಕೆ
ನಿರ್ದೇಶಕರು ದಾವಣಗೆರೆ ಮೊ.ಸಂ: 9632650864, ಕಸಬಾ ಮೊ ಸಂ:
7625078065, ಆನಗೋಡು ಮೊ.ಸಂ: 7079819101,
ಮಾಯಕೊಂಡ-1 ಮೊ ಸಂ: 7899445111, ಮಾಯಕೊಂಡ-2 ಮೊ
ಸಂ: 8722551293 ನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ
ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.