ದಾವಣಗೆರೆ: ಕೋರೋನಾ ವೈರಸ್‍ನಿಂದ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ
ಮಡಿವಾಳ ಸಮುದಾಯಕ್ಕೆ ದಾವಣಗೆರೆ ಜಿಲ್ಲಾಡಳಿತದಿಂದ ಕೊಡ ಮಾಡಿದ ಆಹಾರ
ದಾನ್ಯಗಳ ಕಿಟ್‍ನ್ನು ಗುರುವಾರ ನಗರದ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿನ ಸರ್ಕಾರಿ
ನೌಕರರ ಸಮುದಾಯ ಭವನದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ
ಪಾಲಿಕೆಯ ಅಧಿಕಾರಿಗಳ ಸಮ್ಮುಖದಲ್ಲಿ ವಿತರಿಸಲಾಯಿತು.
ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘ ಹಾಗೂ ದಾವಣಗೆರೆ ಜಿಲ್ಲಾ ಮಡಿಕಟ್ಟೆ ಸಮಿತಿ
ಸಹಯೋಗದಲ್ಲಿ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಈ ಕಿಟ್‍ಗಳನ್ನು
ವಿತರಿಸಲಾಯಿತು.
ಇದೇ ವೇಳೆ ಮಾತನಾಡಿದ ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಜಿಲ್ಲಾ
ಕಾರ್ಯಾಧ್ಯಕ್ಷ ಆವರಗೆರೆ ಹೆಚ್ ಜಿ. ಉಮೇಶ್, ಜಿಲ್ಲಾಡಳಿತದಿಂದ ಮಡಿವಾಳಸಮಾಜಕ್ಕೆ 600
ಕಿಟ್‍ಗಳನ್ನು ವಿತರಿಸುವಂತೆ ಮನವಿ ಮಾಡುವ ಮೂಲಕ ಫಲಾನುಭವಿಗಳ
ಪಟ್ಟಿಯನ್ನು ಸಹ ನೀಡಲಾಗಿತ್ತು. ಅದರಂತೆ ಜಿಲ್ಲಾಡಳಿತ ಮೊದಲ ಹಂತದಲ್ಲಿ
ಸಂಘದಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ 300 ಕಿಟ್‍ಗಳನ್ನು ವಿತರಿಸುವಂತೆ
ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಅದರಂತೆ ಇಂದು ಜಿಲ್ಲಾಡಳಿತದ ನಿರ್ದೇಶನದಂತೆ ವಿನೋಭಾ ನಗರ ಮತ್ತು
ನಿಟುವಳ್ಳಿಯಲ್ಲಿನ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿತರಿಸಲಾಯಿತು. ಇದಲ್ಲದೇ
ನಿಟುವಳ್ಳಿ ವಿಭಾಗದ ಬಡಕುಟುಂಬದ ಇತರೆ ಸಮುದಾಯದ ಕುಟುಂಬಗಳಿಗೂ ಆಹಾರ
ದಾನ್ಯಗಳ ಕಿಟ್ ವಿತರಿಸಲಾಯಿತು.
ಈ ವೇಳೆ ಸಮಾಜದ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ, ಪತ್ರಕರ್ತ ಹಾಗೂ ಜಿಲ್ಲಾ
ಸಂಘದ ಮಾಧ್ಯಮ ಸಲಹೆಗಾರ ಎಂ.ವೈ.ಸತೀಶ್, ಪತ್ರಕರ್ತರಾದ
ಎನ್.ಪ್ರಮೋದ್‍ಕುಮಾರ್, ಹೊಸಕುಂದವಾಡದ ಅಣ್ಣಪ್ಪ, ಮಡಿಕಟ್ಟೆ ಸಮಿತಿಯ
ಅಧ್ಯಕ್ಷ ಅಡಿವೆಪ್ಪ, ಕಾರ್ಯದರ್ಶಿ ಆರ್.ಎಂ.ರವಿ, ಸಿದ್ದೇಶ್, ಜಗದೀಶ್, ಬಸವರಾಜ್,
ಪರಶುರಾಮ, ಅಣ್ಣಪ್ಪ, ಜಿಲ್ಲಾ ಸಂಘದ ಖಜಾಂಚಿ ಕೋಗುಂಡೆ ಸುರೇಶ್, ಉಪಾಧ್ಯಕ್ಷ
ಪಿ.ಮಂಜುನಾಥ್, ಸಹ ಕಾರ್ಯದರ್ಶಿ ಆರ್.ಎನ್.ಧನಂಜಯ, ಡೈಮಂಡ್ ಮಂಜುನಾಥ್, ಸುಭಾಷ್
ಮಡಿವಾಳ ಇತರರು ಇದ್ದರು.