ದಾವಣಗೆರೆ ಮೇ.08
ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಸಾಲ
ಸೌಲಭ್ಯಕ್ಕಾಗಿ ಆಹ್ವಾನಿಸಲಾಗಿದ್ದ ಅರ್ಜಿ ದಿನಾಂಕವನ್ನು ಮೇ
30ರವರೆಗೆ ವಿಸ್ತರಿಸಲಾಗಿದೆ.
ಜಿಲ್ಲೆಯಲ್ಲಿನ ಸಫಾಯಿ ಕರ್ಮಚಾರಿಗಳು, ಮ್ಯಾನುಯಲ್
ಸ್ಕಾವೆಂಜರ್‍ಗಳಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ
ಅನುಷ್ಟಾನಗೊಳಿಸುತ್ತಿರುವ ಸ್ವಯಂ ಉದ್ಯೋಗ, ಸಮೃದ್ಧಿ,
ಉನ್ನತಿ, ಐರಾವತ, ಪ್ರೇರಣಾ, ಸ್ಪೂರ್ತಿ, ಪ್ರಬುದ್ಧ, ಗಂಗಾ ಕಲ್ಯಾಣ
ಹಾಗೂ ಭೂ ಒಡೆತನ ಯೋಜನೆಯಡಿ 2019-20ನೇ ಸಾಲಿಗೆ ಅರ್ಹ
ಫಲಾಪೇಕ್ಷಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು
ಆಹ್ವಾನಿಸಲಾಗಿತ್ತು.
ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಿಸುವ ಸಲುವಾಗಿ
ಸರ್ಕಾರವು ಕೈಗೊಂಡಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಈ ಹಿಂದೆ ಅರ್ಜಿ
ಸಲ್ಲಿಸಲು ನಿಗದಿ ಮಾಡಿದ್ದ ಕೊನೆಯ ದಿನಾಂಕ ಏ.30 ಆಗಿತ್ತು. ಇದೀಗ
ಅರ್ಜಿ ಸಲ್ಲಿಕೆ ಅವಧಿಯನ್ನು ಮೇ.30ರವರೆಗೆ ವಿಸ್ತರಿಸಲಾಗಿದೆ ಎಂದು
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ
ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳು
ವೆಬ್‍ಸೈಟ್ ತಿತಿತಿ.ಞssಞಜs.ಞsಡಿ.ಟಿiಛಿ.iಟಿ ಮೂಲಕ ಮೇ 30 ರೊಳಗೆ
ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್
ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.