ಕರ್ತವ್ಯ ನಿರತ ಸರ್ಕಾರಿ ನೌಕರರ ಮೇಲಿನ ಸಾರ್ವಜನಿಕರ ಹಲ್ಲೆ
ಖಂಡಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘವು ಅರೋಪಿಗಳ ಮೇಲೆ
ಕಾನೂನು ಕ್ರಮ ಜರುಗಿಸಲು ಆಗ್ರಹಿಸಿದೆ.
ಇತ್ತೀಚೆಗೆ ಚನ್ನಗಿರಿ ತಾಲ್ಲೂಕಿನ ಕರೇಕಟ್ಟೆ ಗ್ರಾಮದಲ್ಲಿ
ಕೋವಿಡ್-19 ಜಾಗೃತಿಗೊಳಿಸುವ ಕರ್ತವ್ಯದಲ್ಲಿ ನಿರತ ಪಿಡಿಓ
ರಂಗಸ್ವಾಮಿ ಇವರ ಮೇಲೆ ಅದೇ ಗ್ರಾಮದ ಯುವಕ ಸೃಜನ್
ಹಾಗೂ ತ್ಯಾವಣಿಗೆ ಗ್ರಾಮದ ನಾಡ ಕಚೇರಿ ಕಂದಾಯ
ನೀರಿಕ್ಷಕ ಬಸಣ್ಣ ಎಂಬುವರ ಮೇಲೆ ಸದರಿ ಗ್ರಾಮದ ಪಾನಮತ್ತ
ಯುವಕರು ಬಂಟ ಮತ್ತು ಅಂಜನೇಯ ಎಂಬುವರು ಅವಾಚ್ಯ
ಶಬ್ದಗಳಿಂದ ನಿಂದಿಸಿ ದೈಹಿಕ ಹಲ್ಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ
ದಾವಣಗೆರೆ ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಸಂಘದ
ಜಿಲ್ಲಾಧ್ಯಕ್ಷರಾಧ ಬಿ.ಪಾಲಾಕ್ಷಿಯವರು ನೌಕರರ ಮೇಲಿನ
ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಎರಡು ಕಡೆ ಕರ್ತವ್ಯ ನಿರತ ನೌಕರರಿಗೆ ಹಲ್ಲೆ ನಡೆಸಿದ
ಯುವಕರ ಮೇಲೆ ಕಾನೂನು ಕ್ರಮ ಜರುಗಿಸಲು
ಸಂಬಂಧಿಸಿದ ಪೊಲೀಸ್ ಇಲಾಖೆಯವರು ಶಿಸ್ತು ಕ್ರಮ
ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಹಲ್ಲೆಗೊಳ್ಳದ ಇಬ್ಬರು
ನೌಕರರಿಗೆ ಕೋವಿಡ್-19ರಲ್ಲಿ ವಿಮೆ ಸೌಲಭ್ಯ ನೀಡಲು
ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಕೋವಿಡ್-19 ಜಾಗೃತಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ
ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆಶಾ
ಕಾರ್ಯಕರ್ತೆಯರ ಯಾವುದೇ ನೌಕರರಿಗೆ ಸಾರ್ವಜನಿಕರಿಂದ
ನಿಂದನೆ ಅಥವಾ ಕರ್ತವ್ಯಕ್ಕೆ ಅಡ್ಡಿಪಡಿಸದರೆ ಸಂಘವು
ತೀವ್ರವಾದ ಉಗ್ರ ಹೋರಾಟಕ್ಕೆ ಸಿದ್ದವಿದ್ದು, ಪೊಲೀಸ್
ಇಲಾಖೆಯವರು ಅಂತಹವರ ವಿರುದ್ಧ ತಕ್ಷಣ ಸೂಕ್ತ
ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.