ಜಗಳೂರು, ಮೇ.09: ಜಿಲ್ಲೆಯಲ್ಲಿ ಕೊರೊನಾ
ಸೋಂಕಿತರ ಸಂಖ್ಯೆ ದಿನಕ್ಕೆ ಹೆಚ್ಚಾಗುತ್ತಿದೆ. ಕೂಲಿಗಾಗಿ
ಬೇಡಿಕೆಯು ಹೆಚ್ಚಿದ್ದು, ತಾಲೂಕಿನ ಬಿಳಿಚೋಡು ಗ್ರಾಮ
ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 350ಕ್ಕೂ ಹೆಚ್ಚು
ಜನರು ಕೂಲಿ ಹರಸಿ ಬಂದವರಿಗೆ ಉದ್ಯೋಗಖಾತ್ರಿ
ಯೋಜನೆಯಡಿಯಲ್ಲಿ ಕೆರೆಯಲ್ಲಿ ಹೂಳೆತ್ತುವ
ಕೆಲಸವನ್ನು ನೀಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ
ಸಾನಿಟೈಸರ್, ಕುಡಿಯುವ ನೀರು ಹಾಗೂ ನೆರಳಿನ
ವ್ಯವಸ್ಥೆಯನ್ನು ಮಾಡಲಾಗಿತ್ತು.
05 ಜನರ ಒಂದು ಗುಂಪಿನಂತೆ ಸುಮಾರು 73
ಗುಂಪುಗಳನ್ನು ವಿಂಗಡಿಸಿ ಅಳತೆಯನ್ವಯ
ಹೂಳೆತ್ತುವ ಕಾರ್ಯವನ್ನು ಹಂಚಿಕೆ ಮಾಡಲಾಗಿತ್ತು.
ಕೂಲಿ ಇಲ್ಲದೇ ಬೆಸತ್ತಿದ್ದ ಜನಕ್ಕೆ ನರೇಗಾದಡಿ ಕೂಲಿಯು
ವರದಾನವಾಗಿದೆ.